ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಬಯಲಾಗಿದ್ದು, ದಾಳಿಕೋರರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಉಗ್ರರು ಒಂದು ತಿಂಗಳಿನಿಂದ ಪಹಲ್ಗಾಮ್‌ನಲ್ಲಿ ಬೀಡುಬಿಟ್ಟಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ನವದೆಹಲಿ: ಜಮ್ಮು ಕಾಶ್ಮೀರದ ಪ್ರವಾಸಿ ಸ್ಥಳ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ನೆರೆಯ ನೀಚ,ಕುತಂತ್ರಿ ದೇಶವಾದ ಪಾಕಿಸ್ತಾನದ ಕೈವಾಡ ಬಯಲಾಗಿದೆ. ದಾಳಿ ನಡೆಸಿದ ಉಗ್ರರಾದ ಅಬು ತಲ್ಹಾ, ಆಸೀಫ್ ಫೌಜಿ ಮತ್ತು ಸುಲೇಮಾನ್ ಶಾ ಫೋಟೋಗಳನ್ನು ತನಿಖಾ ಸಂಸ್ಥೆ ಬಿಡುಗಡೆಗೊಳಿಸಿದೆ. ಈ ಮೊದಲು ಪ್ರತ್ಯಕ್ಷದರ್ಶಿ ಮತ್ತು ಪ್ರವಾಸಿಗರು ನೀಡಿದ ಮಾಹಿತಿ ಆಧಾರದ ಮೇಲೆ ಎನ್‌ಐಎ ಮೂವರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಮೂರು ಸೇನೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಉಗ್ರರಾದ ಅಬು, ಆಸೀಫ್ ಫೌಜಿ, ಮತ್ತು ಸುಲೇಮಾನ್ ಪಹಲ್ಗಾಮ್‌ನಲ್ಲಿಯೇ ಬೀಡು ಬಿಟ್ಟಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಎಲ್‌ಒಸಿ ಮತ್ತು ಜಮ್ಮು ಮತ್ತು ಕಾಶ್ಮೀರದ ಒಳ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪಹಲ್ಗಾಮ್ ದಾಳಿಯ ಸ್ಥಳಕ್ಕೆ ಆಗಮಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಇದ್ದಾರೆ. ಮತ್ತೊಂದೆಡೆ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸೇರಿದ್ದಾರೆ. ಇಂದು ಸಂಜೆ ಪ್ರಧಾನಿಗಳ ನಿವಾಸದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಮುಖ್ಯಸ್ಥರು ಮತ್ತು ಸಚಿವರಿಂದ ದಾಳಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಟಿಆರ್‌ಎಫ್ ಭಯೋತ್ಪಾದನಾ ಕ್ರೌರ್ಯ: ಭಾರತದ ಗುಪ್ತಚರ ಜಾಲದ ಸಾಮರ್ಥ್ಯ ಪರೀಕ್ಷೆ

ಕನಿಷ್ಠ 5-6 ಭಯೋತ್ಪಾದಕರು, ಮುಖ ಮುಚ್ಚಿಕೊಂಡಿದ್ದು ಕುರ್ತಾ-ಪೈಜಾಮಾಗಳನ್ನು ಧರಿಸಿದ್ದರು, ಕಣಿವೆಯ ಸುತ್ತಲಿನ ದಟ್ಟವಾದ ಪೈನ್ ಅರಣ್ಯದಿಂದ ಬೈಸರನ್ ಹುಲ್ಲುಗಾವಲುಗೆ ಬಂದು AK-47 ಗಳಿಂದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಕೋರರು ನಿಷೇಧಿತ ಭಯೋತ್ಪಾದಕ ಸಂಘಟನೆಯ ಲಷ್ಕರ್-ಎ-ತೈಬಾ (ಎಲ್ಇಟಿ) ಶಾಖೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಸದಸ್ಯರಾಗಿದ್ದಾರೆ. 

ಇದನ್ನೂ ಓದಿ: 'ಕಾಶ್ಮೀರಿ ಫೈಲ್ಸ್'​ ಪ್ರಚಾರ ಅಂದ್ರಲ್ಲಾ.. ಈ ನರಮೇಧಕ್ಕೆ ಏನಂತೀರಾ? ಮಾತಾಡಿ ಸ್ವಾಮಿ.. ಅನುಪಮ್​ ಖೇರ್​ ಕಣ್ಣೀರು

Scroll to load tweet…