Asianet Suvarna News Asianet Suvarna News

ಮಿತ್ರ ದೇಶಗಳು ನಮ್ಮನ್ನೂ ಭಿಕ್ಷುಕರಂತೆ ನೋಡುತ್ತಿದ್ದಾರೆ: ಪಾಕ್‌ ಪ್ರಧಾನಿ ಅಳಲು

ಪಾಕಿಸ್ತಾನದ ಆರ್ಥಿಕ ದುಸ್ಥಿತಿಯ ನೈಜ ಚಿತ್ರಣವನ್ನು ಸ್ವತ ಪಾಕ್ ಪ್ರಧಾನಿ ಶೆಹಬಾಜ್‌ ಷರೀಫ್‌ ಬಿಚ್ಚಿಟ್ಟಿದ್ದು, ಮಿತ್ರರಾಷ್ಟ್ರಗಳು ಕೂಡಾ ಪಾಕಿಸ್ತಾನವನ್ನು ಈಗ ಭಿಕ್ಷಾಟನೆಗೆ ಬಂದವರನ್ನು ನೋಡುವಂತೆ ನೋಡುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

Pakistan PM Shehbaz Sharif on economic crisis, Even friend nations thinks we are beggars akb
Author
First Published Sep 17, 2022, 10:09 AM IST

ಇಸ್ಲಾಮಾಬಾದ್‌: ಪಾಕಿಸ್ತಾನದ ಆರ್ಥಿಕ ದುಸ್ಥಿತಿಯ ನೈಜ ಚಿತ್ರಣವನ್ನು ಸ್ವತ ಪಾಕ್ ಪ್ರಧಾನಿ ಶೆಹಬಾಜ್‌ ಷರೀಫ್‌ ಬಿಚ್ಚಿಟ್ಟಿದ್ದು, ಮಿತ್ರರಾಷ್ಟ್ರಗಳು ಕೂಡಾ ಪಾಕಿಸ್ತಾನವನ್ನು ಈಗ ಭಿಕ್ಷಾಟನೆಗೆ ಬಂದವರನ್ನು ನೋಡುವಂತೆ ನೋಡುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಂದು ನಾವು ಯಾವುದೇ ಮಿತ್ರ ರಾಷ್ಟ್ರಕ್ಕೆ ಹೋದರೂ ಅಥವಾ ಅವರಿಗೆ ಕರೆ ಮಾಡಿದರೂ ಅವರು ನಾವು ಹಣಕ್ಕಾಗಿ ಭಿಕ್ಷೆ ಬೇಡಲು ಬಂದಿದ್ದೇವೆ ಎಂದೇ ಭಾವಿಸುತ್ತಾರೆ ಎಂದು ಷರೀಫ್‌ ವಕೀಲರ ಸಮಾವೇಶದಲ್ಲಿ ಹೇಳಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಮೊದಲೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಪ್ರವಾಹ ಇನ್ನಷ್ಟುಸಂಕಷ್ಟ ತಂದೊಡ್ಡಿದೆ. ಇಂದು ಸಣ್ಣ ಆರ್ಥಿಕತೆಗಳು ಕೂಡಾ ಪಾಕಿಸ್ತಾನವನ್ನು ಹಿಂದಿಕ್ಕಿವೆ. ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ನಾವು ಕೇವಲ ಭಿಕ್ಷಾಟನೆ ಬಟ್ಟಲನ್ನು ಹಿಡಿದು ಅಲೆದಾಡುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ದೇಶದಲ್ಲಿ ಭಾರಿ ಪ್ರವಾಹದಿಂದ ಉಂಟಾದ ವಿನಾಶದ ಬಗ್ಗೆ ಮಾತನಾಡಿದ ಪ್ರಧಾನಿ ಷರೀಫ್ (Shehbaz Sharif) ಪ್ರವಾಹಕ್ಕೂ(Pakistan Flood) ಮೊದಲೇ ದೇಶದ ಆರ್ಥಿಕ ಸ್ಥಿತಿ ಹೆಣಗಾಟದ ಸ್ಥಿತಿ ತಲುಪಿತ್ತು. ಆದರೆ ಪ್ರವಾಹದ ನಂತರ ಅದು ಇನ್ನಷ್ಟು ಹದಗೆಟ್ಟಿದೆ ಎಂದು ಹೇಳಿದರು. 

ಪಾಕ್ ಪ್ರಧಾನಿ ಶೆಹಬಾಜ್ - ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ ವಾರ್

ಈ ವರ್ಷದ ಆರಂಭದ ಏಪ್ರಿಲ್‌ನಲ್ಲಿ ತಾನು ಅಧಿಕಾರ ವಹಿಸಿಕೊಂಡಾಗಲೇ ಪಾಕಿಸ್ತಾನವು ಆರ್ಥಿಕ ಕುಸಿತದ ಅಂಚಿನಲ್ಲಿತ್ತು ಎಂಬುದನ್ನು ಷರೀಫ್ ಒತ್ತಿ ಹೇಳಿದ್ದಾರೆ. ಆದಾಗ್ಯೂ ತನ್ನ ಸರ್ಕಾರದ ಕಠಿಣ ಪರಿಶ್ರಮವು ದೇಶದ ಆರ್ಥಿಕ ಆಸ್ಥಿರತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ದೇಶದ ಇಂದಿನ ಪರಿಸ್ಥಿತಿಗೆ, ಗಗನಕ್ಕೇರುತ್ತಿರುವ ಹಣದುಬ್ಬರಕ್ಕೆ ಇಮ್ರಾನ್ ಖಾನ್ (Imran Khan) ನೇತೃತ್ವದ ಹಿಂದಿನ ಪಿಟಿಐ ಸರ್ಕಾರವೇ ಕಾರಣ ಎಂದು ಪಾಕಿಸ್ತಾನದ ಪ್ರಧಾನಿ ಪರೋಕ್ಷವಾಗಿ ಆರೋಪಿಸಿದ್ದಾರೆ. ಹಿಂದಿನ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯೊಂದಿಗಿನ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಪ್ರಸ್ತುತ ಸರ್ಕಾರಕ್ಕೆ ಕಠಿಣ ಷರತ್ತುಗಳನ್ನು ಒಪ್ಪಿಕೊಳ್ಳುವುದರ ಹೊರತಾಗಿ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಷರೀಫ್ ಶೀಘ್ರದಲ್ಲೇ ಭೇಟಿ, ವೇದಿಕೆ ಸಿದ್ದ!

ಪಾಕಿಸ್ತಾನಕ್ಕಿಂತ ಚಿಕ್ಕ ಆರ್ಥಿಕತೆ (Small economy) ಹೊಂದಿರುವ ದೇಶಗಳು ಕೂಡ ಆರ್ಥಿಕತೆಯಲ್ಲಿ ಪಾಕಿಸ್ತಾನವನ್ನು(Pakistan) ಹಿಂದಿಕ್ಕಿವೆ. ಸ್ವಾತಂತ್ರ ಬಂದು 75 ವರ್ಷಗಳೇ ಕಳೆದರೂ ನಾವು ಭಿಕ್ಷಾಪಾತ್ರೆ ಹಿಡಿದು ಅಲೆದಾಡುತ್ತಿದ್ದೇವೆ  75 ವರ್ಷಗಳ ನಂತರವೂ ದೇಶ ಎಲ್ಲಿ ನಿಂತಿದೆ ಎಂಬುದು ನೋವನ್ನುಂಟು ಮಾಡುವ ಪ್ರಶ್ನೆಯಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ದೇಶದಲ್ಲಿ ಮುಂಬರುವ ಚಳಿಗಾಲದಲ್ಲಿ ಇಂಧನ ಬಿಕ್ಕಟ್ಟು ಉಂಟಾಗಬಹುದು ಎಂದು ಎಚ್ಚರಿಸಿದ ಅವರು, ಮುಂದೆ ಗ್ಯಾಸ್ ಪೂರೈಕೆ ಮಾಡಲು ಹೆಣಗಾಡು ಪರಿಸ್ಥಿತಿ ಬರಬಹುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಉಂಟಾದ ಮಳೆ ಹಾಗೂ ಪ್ರವಾಹವು ಜಗತ್ತಿನಲ್ಲಿ ಬೇರೆಲ್ಲಿಯೂ ಕಂಡುಬರದ ಪ್ರಮಾಣದಲ್ಲಿ ದೇಶದಲ್ಲಿ  ಅನಾಹುತ ಸೃಷ್ಟಿಸಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. 
ಪಾಕ್ ಪ್ರಧಾನಿ ಪರದಾಟ

ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವಿನ ಮಾತುಕತೆಯ ವೇಳೆ ಷರೀಫ್‌ ಪೇಚಿಗೆ ಸಿಲುಕಿದ ಪ್ರಸಂಗ ದಿನಗಳ ಹಿಂದೆಯಷ್ಟೇ ನಡೆದಿತ್ತು. ಮಾತುಕತೆಯ ಮಧ್ಯದಲ್ಲಿ ಕಿವಿಯಿಂದ ಜಾರಿಬಿದ್ದ ಮೈಕನ್ನು ಮತ್ತೆ ಹಾಕಿಕೊಳ್ಳಲು ಬಾರದೇ ಷರೀಫ್‌ ಒದ್ದಾಡಿದ್ದಾರೆ. ಆನಂತರ ಅದನ್ನು ಅಳವಡಿಸುವಂತೆ ಅಲ್ಲಿದ್ದ ಅಧಿಕಾರಿಯೊಬ್ಬರಿಗೆ ಕೇಳಿಕೊಂಡಿದ್ದಾರೆ. ಈ ವೇಳೆ ಪುಟಿನ್‌ ಜೋರಾಗಿ ನಕ್ಕಂತಹ ಪ್ರಸಂಗ ಗುರುವಾರ ಸಭೆಯ ಬಳಿಕ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಷರೀಫ್‌ ವಿರುದ್ಧ ಹಾಸ್ಯ ಮಾಡಿದ್ದಾರೆ.

Follow Us:
Download App:
  • android
  • ios