ನವದೆಹಲಿ(ಆ.05): ಅಯೋಧ್ಯೆಯಲ್ಲಿ ಇಂದು ಬುಧವಾರ ಭವ್ಯ ರಾಮ ಮಂದಿರದ ಶಿಲಾನ್ಯಾಸ ನೆರವೇರಿದೆ. ಈ ಸಂದರ್ಭದಲ್ಲಿ ಲೋಕಸಭಾ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಜ್ ಏ ಇತ್ತೆಹಾದುಲ್ ಮುಸ್ಲಿಮಿನಗ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಾಬ್ರಿ ಮಸೀದಿಯನ್ನು ನೆನಪಿಸಿಕೊಂಡಿದ್ದಾರೆ. 

1528ರಲ್ಲಿ ಅಯೋಧ್ಯೆಯಲ್ಲಿ ಮೊಘಲ್ ದೊರೆ ಬಾಬರ್ ಮಸೀದಿಗೆ ಅಡಿಪಾಯ ಹಾಕಿದ್ದರು. ಆದರೆ 1992ರ ಡಿಸೆಂಬರ್ 6ರಂದು ರಾಮ ಮಂದಿರ ಆಂದೋಲನದ ಹೆಸರಲ್ಲಿ ಕರಸೇವಕರು ಮಸೀದಿ ಮೇಲೇರಿ ಗುಮ್ಮಟವನ್ನು ಕೆಡವಿದ್ದರು. ಈ ಸಂಬಂಧ ಸದ್ಯ ಓವೈಸಿ ಟ್ವೀಟ್ ಮಾಡುತ್ತಾ 'ಬಾಬ್ರಿ ಮಸೀದಿ ಇತ್ತ, ಇದೆ ಅಲ್ಲೇ ಇರುತ್ತದೆ' ಎಂದು ಬರೆದಿದ್ದಾರೆ.

ಓವೈಸಿ ಕಳೆದ ಕೆಲ ದಿನಗಳಿಂದ ಭೂಮಿ ಪೂಜೆಯನ್ನು ಸತತವಾಗಿ ವಿರೋಧಿಸಿದ್ದಾರೆ. ಕಳೆದ ವಾರ ಅವರು ಬಾಬ್ರಿ ಧ್ವಂಸಕ್ಕೆ ಕಾಂಗ್ರೆಸ್ ಕೂಡಾ ಕಾರಣ ಎಂದು ದೂರಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಓವೈಸ್ 'ಯಾರ ಶ್ರಮವಿದೆಯೋ ಅವರಿಗೆ ಯಶಸ್ಸು ಸಲ್ಲಬೇಕು. ಬಾಬ್ರಿ ಮಸೀದದಿ ಬೀಗ ತೆರೆದವರು ರಾಜೀವ್ ಗಾಂಧಿಯಾಗಿದ್ದರು ಹಾಗೂ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದು ಈ ಧ್ವಂಸ ಕೃತ್ಯವನ್ನು ಕಂಡವರು ಬಿ. ವಿ ನರಸಿಂಹ ಆಗಿದ್ದರು. ಕಾಂಗ್ರೆಸ್ ಸಂಘ ಪರಿವಾರದೊಒಂದಿಗೆ ಮಸೀದಿ ಧ್ವಂಸಗೊಳಿಸವ ಈ ಆಂದೋಲನದಲ್ಲಿ ಹೆಗಲು ಕೊಟ್ಟು ನಿಂತಿದೆ' ಎಂದಿದ್ದರು.

ಇನ್ನು ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವುದನ್ನೂ ಓವೈಸಿ ಖಂಡಿಸಿದ್ದರು. ಇದು ಸಾಂವಿಧಾನಿಕವಲ್ಲ. ಪ್ರಧಾನಿ ಮೋದಿ ಅಧಿಕೃತವಾಗಿ ಭೂಮಿ ಪೂಜೆಯಲ್ಲಿ ಭಾಗಿಯಾಗುವುದರಿಂದ ಸಾಂವಿಧಾನಿಕವಾಗಿ ತೆಗೆದುಕೊಂಡ ಪ್ರತಿಜ್ಞೆಯನ್ನು ಉಲ್ಲಂಘಿಸಿದಂತೆ. ಜಾತ್ಯಾತೀತತೆ ಸಂವಿಧಾನದ ಮೂಲ ಮಂತ್ರವಾಗಿದೆ ಎಂದಿದ್ದರು. ಅಲ್ಲದೇ  400 ವರ್ಷ ಅಲ್ಲಿ ಬಾfರಿ ಮಸೀದಿ ಇತ್ತು, 1992 ರಲ್ಲಿ ಅಪರಾಧಿಗಳ ಗುಂಪೊಂದು ಅದನ್ನು ಕೆಡವಿತ್ತು ಎಂಬುವುದನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದರು.