ಕಾಶ್ಮೀರ(ಅ.10): ಉಗ್ರರಿಗೆ ನೆರವು ನೀಡುತ್ತಿರುವ ಪಾಕಿಸ್ತಾನ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ. ಪಾಕಿಸ್ತಾನ ಸೇನೆ ಉಗ್ರರನ್ನು ಭಾರತದ ಗಡಿಯೊಳಕ್ಕೆ ನುಸುಳಲು ನೆರವು ನೀಡುತ್ತಿರುವ ಹಾಗೂ ಉಗ್ರರಿಗೆ ಶಸ್ತಾಸ್ತ್ರ ಪೂರೈಕೆ ಮಾಡುತ್ತಿರುವ ದೃಶ್ಯ ಭಾರತೀಯ ಸೇನೆ ಗಡಿಯಲ್ಲಿ ಅಳವಡಿಸಿದ ಸಿಸಿಟಿವಿ ಮೂಲಕ ಬಯಲಾಗಿದೆ. 

ಅವಿತು ಕುಳಿತ ಉಗ್ರರ ಅಟ್ಟಾಡಿಸಿ ಹೊಡೆದ ಭಾರತೀಯ ಸೇನೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಪಾಕಿಸ್ತಾನ ಕಳ್ಳ ಸಾಗಾಣಿಕೆ ಮೂಲಕ ಬಾರಿ ಶಸ್ತಾಸ್ತ್ರ ಪೂರೈಕೆ ಮಾಡುತ್ತಿದೆ. ಉಗ್ರರು ಗಡಿಯೊಳಕ್ಕೆ ನುಸುಳಲು ಎಲ್ಲಾ ನೆರವವನ್ನು ಪಾಕಿಸ್ತಾನ ಸೇನೆ ನೀಡುತ್ತಿದೆ. ಸಿಸಿಟಿವಿಯಲ್ಲಿ ಪಾಕಿಸ್ತಾನ ಕುತಂತ್ರ ಬಯಲಾಗುತ್ತಿದ್ದಂತೆ ಭಾರತೀಯ ಸೇನೆ ಹಾಗೂ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಜಂಟಿಯಾಗಿ ಕಾರ್ಯಚರಣೆ ಆರಂಭಿಸಿದೆ.

ಕುತಂತ್ರಿ ಪಾಕ್‌ ಉದ್ಧಟತನ; ದೇಶಕ್ಕಾಗಿ ಪ್ರಾಣಕೊಟ್ಟ ಇಬ್ಬರು ಯೋಧರು

ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಹೊಡೆದುರುಳಿಸಿದ ಸೇನೆ, ಕಾರ್ಯಚರಣೆಯಲ್ಲಿ ಎರಡು ಬ್ಯಾಗ್‌ಗಳಲ್ಲಿ ತುಂಬಿದ್ದ AK 74 ರೈಫಲ್ಸ್,  ಮದ್ದು ಗುಂಡುಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. 

"

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೇರಾನ್ ವಲಯದಲ್ಲಿ ಈ ಘಟನೆ ನಡೆದಿದೆ. ಗಡಿಯಲ್ಲಿ ಪಾಕಿಸ್ತಾನ ಸೇನೆ ಉಗ್ರರಿಗೆ ಸಹಕಾರ ನೀಡುತ್ತಿರುವ ಇದೇ ಮೊದಲಲ್ಲ. ಹಲವು ಬಾರಿ ಈ ರೀತಿ ಘಟನೆಗಳು ನಡೆದಿದೆ. ಈ ಬಾರಿ ಪಾಕಿಸ್ತಾನ ಕುತಂತ್ರ ಸಿಸಿಟಿವಿಯಲ್ಲಿ ಬಯಲಾಗಿದೆ.