ಶ್ರೀನಗರ (ಸೆ.24)  ಜಮ್ಮು ಕಾಶ್ಮೀರದ ಅನಂತ್‌ ನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಭಾರತೀಯ ಸೇನೆ ಮತ್ತು ಅನಂತ್ ನಾಗ್ ಜಿಲ್ಲಾ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.ಮಘಮಾದಲ್ಲಿ ಉಗ್ರರು ಅವಿತಿಟ್ಟುಕೊಂದಿರುವ  ವರ್ತಮಾನದ ಮೇರೆಗೆ ಯೋಧರು ಮತ್ತು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು.

ಭಾರತ ಸೇನೆ ಸಿದ್ಧತೆ ಮಾಹಿತಿ ಕೇಳಿ ಬೆಚ್ಚಿದ ಚೀನಾ! ನಮ್ಮ ಶಕ್ತಿ ಎಷ್ಟು? ಅವರದ್ದೆಷ್ಟು?

ಉಗ್ರಗಾಮಿಗಳು ಅಡಗಿಕುಳಿತಿದ್ದಾರೆ ಎಂಬ ಮಾಹಿತಿ ಆಧರಿಸಿ ಸೇನೆ ದಾಳಿ ಮಾಡಿದೆ.  ಇಬ್ಬರು ಅಥವಾ ಮೂವರು ಉಗ್ರರು ಪ್ರದೇಶದಲ್ಲಿ ಕಂಡುಬಂದಿದ್ದು ಒಟ್ಟು ಎಷ್ಟು ಜನ ಎಂಬ ನಿಖರ ಮಾಹಿತಿ ಗೊತ್ತಾಗಿಲ್ಲ.

ಒಂದೇ ದಿನದಲ್ಲಿ ಇದು ಎರಡನೇ ಎನ್ ಕೌಂಟರ್ ಆಗಿದ್ದು ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಪಾಕ್ ಬೆಂಬಲಿತ ಉಗ್ರರು ಆಗಾಗ ಬಾಲ ಬಿಚ್ಚುತ್ತಿದ್ದು ಸೇನೆ ತಕ್ಕ ಪಾಠ ಕಲಿಸುತ್ತಲೇ ಇದೆ.

ಇಂಗ್ಲಿಷ್‌ನಲ್ಲಿಯೂ ಓದಿ