ಇಸ್ಲಾಮಾಬಾದ್ (ನ. 11): ಕಾಶ್ಮೀರ ವಿಷಯ ಸಂಬಂಧ ಭಾರತದ ವಿರುದ್ಧ ಸದಾ ವಿಷಕಾರುತ್ತಲೇ ಇರುವ ಪಾಕಿಸ್ತಾನ ಮತ್ತೊಮ್ಮೆ ವಿಕೃತಿ ಮೆರೆದಿದೆ. ಬಾಲಾಕೋಟ್ ದಾಳಿ ವೇಳೆ ವಿಮಾನ ಪತನಗೊಂಡ ಬಳಿಕ ಪಾಕ್ ಸೈನಿಕರ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‌ರ ಪ್ರತಿಕೃತಿಯನ್ನು ಪಾಕಿಸ್ತಾನ ರಚಿಸಿ ಕರಾಚಿಯಲ್ಲಿನ ಯುದ್ಧ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಗಾಜಿನ ಬಾಕ್ಸ್‌ನಲ್ಲಿ ಅಭಿನಂದನ್ ಪ್ರತಿಕೃತಿ ನಿಲ್ಲಿಸಲಾಗಿದೆ.

 

ಅವರ ಹಿಂಬದಿಯಲ್ಲಿ ಪಾಕ್ ಸೈನಿಕನೊಬ್ಬ ನಿಂತಿದ್ದರೆ, ಅಭಿನಂದನ್ ಪಕ್ಕದಲ್ಲಿ ಟೀ ಗ್ಲಾಸ್ ಇಡಲಾಗಿದೆ. ಜೊತೆಗೆ ಅಭಿನಂದನ್ ಅವರ ಹಿಂದೆ, ಸೆರೆ ಸಿಕ್ಕಾಗ ಪಾಕ್ ವಶಪಡಿಸಿಕೊಂ ಡಿದ್ದ ವರ್ತಮಾನ್ ಅವರ ಸಮವಸ್ತ್ರವನ್ನು ನೇತು ಹಾಕಲಾಗಿದೆ.