Asianet Suvarna News Asianet Suvarna News

ಕರ್ತಾರ್‌ಪುರ ಕಾರಿಡಾರ್‌ ತೆರೆಯಲು ಸಿದ್ಧ ಎಂದ ಪಾಕ್‌ಗೆ ಭಾರತ ತಿರುಗೇಟು

 ಸಿಖ್ಖರ ಪವಿತ್ರ ಸ್ಥಳ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ| ಕರ್ತಾರ್‌ಪುರ ಕಾರಿಡಾರ್‌ ತೆರೆಯಲು ಸಿದ್ಧ ಎಂದ ಪಾಕ್‌ಗೆ ಭಾರತ ತಿರುಗೇಟು

Pak offers to reopen Kartarpur corridor India says too short a notice will evaluate
Author
Bangalore, First Published Jun 28, 2020, 2:44 PM IST

ಇಸ್ಲಾಮಾಬಾದ್(ಜೂ.28): ಕರ್ತಾರ್‌ಪುರ ಕಾರಿಡಾರ್‌ ತೆರೆಯುವ ಸಂಬಂಧ ಭಾರತ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.

ಕೊರೋನಾ ಸಂಕ್ರಮಣದಿಂದಾಗಿ ಮುಚ್ಚಲಾಗಿದ್ದ ಸಿಖ್ಖರ ಪವಿತ್ರ ಸ್ಥಳ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ಅನ್ನು ಮತ್ತೆ ಆರಂಭಿಸಲು ಸಿದ್ದ ಇರುವುದಾಗಿ ಪಾಕಿಸ್ತಾನ ಹೇಳಿದೆ. ವಿಶ್ವಾದ್ಯಂತ ಧಾರ್ಮಿಕ ಕೇಂದ್ರಗಳು ಮತ್ತೆ ಬಾಗಿಲು ತೆರೆಯುತ್ತಿರುವುದರಿಂದ ಕರ್ತಾರ್‌ಪುರ ಕಾರಿಡಾರ್‌ ಅನ್ನು ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸಲು ತಯಾರಿದ್ದೇವೆ ಎಂದು ಭಾರತಕ್ಕೆ ಪಾಕಿಸ್ತಾನ ಹೇಳಿದೆ.

ಆದರೆ ತಾನು ಸೌಹಾರ್ಧ ಸಂಬಂಧ ಹರಿಕಾರ ಎಂದು ಬಿಂಬಿಸಿಕೊಳ್ಳಲು ಇದು ಪಾಕ್‌ ಆಡುತ್ತಿರುವ ನಾಟಕ. ಸೋಮವಾರದಿಂದ ಕಾರಿಡಾರ್‌ ಆರಂಭವಾಗುವುದಿದ್ದರೆ ಮೊದಲೇ ಈ ವಿಷಯ ತಿಳಿಸಬೇಕಿತ್ತು ಎಂದು ಭಾರತ ತಿರುಗೇಟು ನೀಡಿದೆ.

Follow Us:
Download App:
  • android
  • ios