ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಕಾರಣ ಎಂದು ಹೇಳಿದ ಬಾಲಕನಿಗೆ ತಾಯಿ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್. ಪಾಕಿಸ್ತಾನದ ಹೆಸರು ಹೇಳದಂತೆ ತಾಯಿ ಎಚ್ಚರಿಸಿದರೂ, ಬಾಲಕ ದೃಢವಾಗಿ ತನ್ನ ನಿಲುವು ಮಂಡಿಸಿದ. ಈ ವಿಡಿಯೋ ಕಾಶ್ಮೀರ ಅಥವಾ ಪಾಕಿಸ್ತಾನದ್ದೆಂದು ದೃಢಪಟ್ಟಿಲ್ಲ. ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯನ್ನು ಇಡೀ ಜಗತ್ತು ಖಂಡಿಸಿದೆ. ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕಾಗಿ ಇಡೀ ಭಾರತ ಕಾಯುತ್ತಿದೆ. ಪ್ರತೀಕಾರ ಎಂದು ಭಾರತೀಯರು ಘೋಷಣೆ ಕೂಗುತ್ತಿದ್ದಾರೆ. ಈ ದಾಳಿ ಬಳಿಕ ಭಾರತ ತೆಗೆದುಕೊಂಡಿರುವ ಕಠಿಣ ನಿರ್ಧಾರಗಳಿಂದ ಪಾಕಿಸ್ತಾನ ಗಢಗಢ ನಡಗುತ್ತಿದೆ. ಭಾರತ ಯುದ್ಧ ಮಾಡಲಿದೆ ಎಂದು ಪಾಕಿಸ್ತಾನಿಗಳು ಭಯಗೊಂಡಿದ್ದಾರೆ. ಇದೀಗ ಬಾಲಕನೋರ್ವ ಕ್ಯಾಮೆರಾ ಮುಂದೆ ಪಾಕಿಸ್ತಾನ ಅಸಲಿ ಮುಖ ಬಯಲು ಮಾಡುತ್ತಿದ್ದ ಬಾಲಕನ ಕೆನ್ನೆಗೆ ಆ ತಾಯಿ ಹೊಡೆದಿದ್ದಾಳೆ. ತಾಯಿಯಿಂದ ವಿರೋಧ ವ್ಯಕ್ತವಾದ್ರೂ ಬಾಲಕ ತನ್ನ ಅಭಿಪ್ರಾಯವನ್ನು ಕ್ಯಾಮೆರಾ ಮುಂದೆ ವ್ಯಕ್ತಪಡಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು, ಸಾರ್ವಜನಿಕವಾಗಿ ಭಾರತವನ್ನು ಬೆಂಬಲಿಸಿದ್ರೆ ಜನರುಗೆ ಅಪಾಯವಿದೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಆ ತಾಯಿಗಿರುವ ಮಕ್ಕಳ ಮೇಲಿನ ಕಾಳಜಿ ಬಗ್ಗೆಯೂ ಮಾತನಾಡಿದ್ದಾರೆ.

ಈ ಬಾಲಕ ಕ್ಯಾಮೆರಾ ಮುಂದೆ ಪಹಲ್ಗಾಂ ದಾಳಿಗೆ ಪಾಕಿಸ್ತಾನವೇ ಕಾರಣ. ಕಾಶ್ಮೀರದಲ್ಲಿ ಇಂತಹ ನಡೆಸಲು ಮತ್ಯಾರಿಂದ ಸಾಧ್ಯ ಎಂದು ನಿರ್ಭೀತಿಯಿಂದ ಹೇಳಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು, ಬಾಲಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸತ್ಯ ಬಯಲು ಮಾಡಿರುವ ಬಾಲಕನ ವಿಡಿಯೋವನ್ನು ಮಿಸ್ ಮಾಡದೇ ನೋಡಬೇಕು. 

ವೈರಲ್ ವಿಡಿಯೋದಲ್ಲಿ ಬಾಲಕ ಹೇಳಿದ್ದೇನು?
ವ್ಯಕ್ತಿತಯೋರ್ವ ಕ್ಯಾಮೆರಾ ಹಿಡಿದುಕೊಂಡು ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳುತ್ತಾನೆ. ಕುಳಿತ ಜಾಗದಿಂದ ಎದ್ದು ಕ್ಯಾಮೆರಾ ಮುಂದೆ ಬಾಲಕ, ನೋಡಿ.. ಕಾಶ್ಮೀರಿ ಜನರು ಹೀಗೆ ಮಾಡಲು ಸಾಧ್ಯವೇ ಇಲ್ಲ. ಈ ದಾಳಿಯನ್ನು ಕಾಶ್ಮೀರಿಗರು ನಡೆಸಿಲ್ಲ ಎಂಬ ಗ್ಯಾರಂಟಿಯನ್ನ ನಿಮಗೆ ನಾನು ನೀಡುತ್ತೇನೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳುತ್ತಾನೆ. ಆ ಬಾಲಕ ಪಾಕಿಸ್ತಾನ ಎಂದು ಹೆಸರು ಹೇಳುತ್ತಿದ್ದಂತೆ ಆತನ ತಾಯಿ ಕಪಾಳಕ್ಕೆ ಹೊಡೆಯುತ್ತಾಳೆ. ಪಾಕಿಸ್ತಾನದ ಹೆಸರು ಹೇಳದಂತೆ ಮಗನಿಗೆ ಎಚ್ಚರಿಸುತ್ತಾಳೆ ಮತ್ತು ಆತನಿಗೆ ಏನೇನು ಕೇಳಬೇಡಿ ಎಂದು ಕ್ಯಾಮೆರಾ ಹಿಡಿದ ವ್ಯಕ್ತಿಗೂ ಹೇಳುತ್ತಾಳೆ. ತಾಯಿ ವಿರೋಧ ವ್ಯಕ್ತಪಡಿಸುತ್ತಿದ್ರೂ ಬಾಲಕ ಮಾತ್ರ ಧೈರ್ಯದಿಂದ ಈ ದಾಳಿಯ ಹಿಂದೆ ಬೇರೆ ಯಾರೂ ಇಲ್ಲ, ಅದು ಪಾಕಿಸ್ತಾನ ಮಾತ್ರ ಎಂದು ಮತ್ತೆ ಹೇಳುತ್ತಾನೆ. 

ಮಗ ಮತ್ತೆ ಪಾಕಿಸ್ತಾನದ ಹೆಸರು ಹೇಳುತ್ತಿದ್ದಂತೆ ತಾಯಿ ಎಚ್ಚರಿಸುತ್ತಾಳೆ. ಈ ದಾಳಿ ಯಾರು ಮಾಡಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಯಾರಾದ್ರೂ ಮಾಡಿರಬಹುದು. ಹೀಗೆ ಪಾಕಿಸ್ತಾನದ ವಿರೋಧವಾಗಿ ಮಾತನಾಡಿದ್ರೆ ಮನೆಯಲ್ಲಿ ನಮಗೆ ಹೊಡೆಯಲಾಗುತ್ತದೆ. ಭಾರತವೇ ಈ ದಾಳಿ ನಡೆಸಿರಬಹುದು ಎಂದು ಬಾಲಕನ ತಾಯಿ ಹೇಳುತ್ತಾಳೆ. ಇದೇ ವೇಳೆ ಓರ್ವ ವೃದ್ಧ ಅಲ್ಲಿಗೆ ಬಂದು, ಈ ಪ್ರಶ್ನೆಯನ್ನು ಬಾಲಕನಿಗೆ ಯಾಕೆ ಕೇಳುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ.

ಇದನ್ನೂ ಓದಿ: 'ಹುಡುಕಿ, ಹುಡುಕಿ ಸೇಡು ತೀರಿಸಿಕೊಳ್ತವೆ..' ಪಹಲ್ಗಾಮ್‌ ದಾಳಿ ಬಳಿಕ ಮೊದಲ ಭಾಷಣದಲ್ಲಿ ಅಮಿತ್‌ ಶಾ ಶಪಥ

ಭಯೋತ್ಪಾದಕರು ಮತ್ತು ಪಾಕಿಸ್ತಾನ ಪರ ಗುಂಪುಗಳ ಒತ್ತಡದಿಂದಾಗಿ ಅಸಲಿ ವಿಷಯವನ್ನು ಬಹಿರಂಗವಾಗಿ ಮಾತನಾಡಲು ಜನರು ಹೆದರುತ್ತಾರೆ ಅನ್ನೋದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಬಾಲಕನ ತಾಯಿಯ ಮುಖದಲ್ಲಿ ಆ ಭಯ ಕಾಣಿಸುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಯನಿಕಾ ಲಿಟ್ (@LogicLitLatte) ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.ಇಲ್ಲಿಯವರೆಗೆ ಈ ವಿಡಿಯೋ 13 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಆದರೆ, ಈ ವಿಡಿಯೋ ಕಾಶ್ಮೀರದ್ದೋ ಅಥವಾ ಪಾಕಿಸ್ತಾನದ್ದೋ ಎಂಬುದು ಇನ್ನೂ ದೃಢಪಟ್ಟಿಲ್ಲ.

ದಾಳಿ ಖಚಿತ ಎಂದ ಪಾಕಿಸ್ತಾನದ ರಕ್ಷಣಾ ಸಚಿವ 
26 ಜನರನ್ನು ಬಲಿಪಡೆದ ಪಹಲ್ಗಾಂ ನರಮೇಧದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಖಚಿತ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ.ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಖಚಿತ. ಅದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಸೇನೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಗಡಿಯಲ್ಲಿ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಬಾಂಬ್‌ ದಾಳಿಯ ಭಯ, ಖೈಬರ್ ಪಖ್ತುಂಖ್ವಾದಲ್ಲಿ ಎಮರ್ಜೆನ್ಸಿ ಸೈರನ್‌ ಸ್ಥಾಪಿಸಿದ ಪಾಕ್‌ ಸರ್ಕಾರ!

Scroll to load tweet…