Asianet Suvarna News Asianet Suvarna News

ರಷ್ಯಾದ ಕೊರೋನಾ ಲಸಿಕೆ ಶೀಘ್ರ ಭಾರತದಲ್ಲೂ ಪರೀಕ್ಷೆ?

- ಸ್ಪುಟ್ನಿಕ್‌-5 ಲಸಿಕೆಯ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿಕೆ. - 2 ಹಂತದ ಪ್ರಯೋಗಗಳಲ್ಲಿ ಯಶ ಕಂಡಿರುವ ರಷ್ಯಾ

Corona vaccine to be tested even India says Sputnick
Author
Bengaluru, First Published Sep 8, 2020, 8:38 AM IST

ನವದೆಹಲಿ/ಮಾಸ್ಕೋ: ಕೊರೋನಾ ವೈರಸ್‌ ನಿಗ್ರಹಕ್ಕೆ ಸಿದ್ಧಪಡಿಸಿರುವ ವಿಶ್ವದ ಮೊದಲ ಲಸಿಕೆ ‘ಸ್ಪುಟ್ನಿಕ್‌-5’ ಲಸಿಕೆಯ ಸಮಗ್ರ ಮಾಹಿತಿಯನ್ನು ಭಾರತದೊಂದಿಗೆ ರಷ್ಯಾ ಹಂಚಿಕೊಂಡಿದೆ. ಇದರೊಂದಿಗೆ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ.

3ನೇ ಹಂತದ ಪ್ರಯೋಗದ ಕುರಿತು ಭಾರತ ಸರ್ಕಾರ ಈವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲವಾದರೂ, ಇದೇ ತಿಂಗಳಾಂತ್ಯಕ್ಕೆ ಭಾರತ, ಸೌದಿ ಅರೇಬಿಯಾ, ಯುಎಇ, ಫಿಲಿಪ್ಪೀನ್ಸ್‌ ಮತ್ತು ಬ್ರೆಜಿಲ್‌ನಲ್ಲಿ ಪ್ರಯೋಗ ಆರಂಭವಾಗಲಿದೆ. ಅಕ್ಟೋಬರ್‌- ನವೆಂಬರ್‌ನಲ್ಲಿ ಈ ಪ್ರಯೋಗದ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಫಂಡ್‌ನ ಮುಖ್ಯಸ್ಥ ಕಿರ್ರಿಲ್‌ ಡಿಮೆಟ್ರೀವ್‌ ಸೋಮವಾರ ಹೇಳಿಕೆ ನೀಡಿದ್ದಾರೆ.

Corona vaccine to be tested even India says Sputnick

ಮಾಹಿತಿ ರವಾನೆ:
ಲಸಿಕೆಗಳ ಉತ್ಪಾದನೆ ಮತ್ತು ಪ್ರಯೋಗ ಕುರಿತು ರಷ್ಯಾ ಸರ್ಕಾರದ ಭಾರತದ ಸಹಭಾಗಿತ್ವ ಬಯಸಿತ್ತು. ಆದರೆ ಇಂಥದ್ದೊಂದು ಸಹಭಾಗಿತ್ವಕ್ಕೂ ಮುನ್ನ ಸಾಕಷ್ಟುವಿವಾದಕ್ಕೆ ಕಾರಣವಾಗಿರುವ ಲಸಿಕೆ ಕುರಿತ ಎಲ್ಲಾ ಮಾಹಿತಿ ಪಡೆಯಲು ಭಾರತ ಬಯಸಿತ್ತು. ಅದರಂತೆ ರಷ್ಯಾ ಮಾಹಿತಿ ಹಂಚಿಕೊಂಡಿದೆ ಎನ್ನಲಾಗಿದೆ.

ಕೊರೋನಾದಿಂದ ಕಂಗೆಟ್ಟವರಿಗೆ ಗುಡ್ ನ್ಯೂಸ್

ರಷ್ಯಾ ಹಂಚಿಕೊಂಡ ಮಾಹಿತಿಯನ್ನು ಭಾರತ ಅವಲೋಕಿಸುತ್ತಿದೆ. ಭಾರತದಲ್ಲಿ ಈ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಈಗಾಗಲೇ ಸ್ಪುಟ್ನಿಕ್‌ ಲಸಿಕೆಯ ಮೊದಲ ಹಾಗೂ 2ನೇ ಹಂತದ ಪ್ರಯೋಗ 76 ಜನರ ಮೇಲೆ ನಡೆದಿದೆ. ಇದು ಬಹುತೇಕ ಯಶ ಕಂಡಿದೆ. ಇದೇ ತಿಂಗಳು ಲಸಿಕೆ ಉತ್ಪಾದನೆ ಮಾಡುವ ಉದ್ದೇಶವನ್ನು ರಷ್ಯಾ ಹೊಂದಿದೆ. ತಿಂಗಳಿಗೆ 60 ಲಕ್ಷ ಡೋಸ್‌ಗಳನ್ನು ಪ್ರತಿ ತಿಂಗಳು ಉತ್ಪಾದಿಸುವ ಉದ್ದೇಶವಿದೆ.

ಕೋವಿಡ್ ಚುಚ್ಚುಮದ್ದನ್ನು ನನ್ನ ಮೇಲೆ ಪ್ರಯೋಗಿಸಿ ಎಂದ ವಕೀಲ

Follow Us:
Download App:
  • android
  • ios