ಶ್ರೀನಗರ (ಏ. 14) ಉಗ್ರಗಾಮಿಗಳು ಮಗನ ಹತ್ಯೆ ಮಾಡಿ ಎರಡು ತಿಂಗಳು ಕಳೆದಿದೆ.  ಆ ಎಲ್ಲ ನೋವನ್ನು ಮೆಟ್ಟಿ ನಿಂತಿರುವ ತಂದೆ ಮತ್ತೆ ತಮ್ಮ ಎಂದಿನ ಕೆಲಸಕ್ಕೆ ಮರಳಿದ್ದಾರೆ.

ಜಮ್ಮು ಕಾಶ್ಮೀರ ಸೋನ್ವಾರ್ ಪ್ರದೇಶದಲ್ಲಿ ಉಗ್ರರು ಕೃಷ್ಣ ಬೋಜನಾಲಯದ ಮಾಲೀಕರ ಪುತ್ರನ ಹತ್ಯೆ ಮಾಡಿದ್ದರು. ತಂದೆ ರಮೇಶ್ ಕುಮಾರ್ ಈಗ ತಮ್ಮ ಹೋಟಲ್ ಮತ್ತೆ ಆರಂಭಿಸಿದ್ದಾರೆ.

ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕಿದ್ದ ಮದರಸಾ ಶಿಕ್ಷಕ

ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿದ್ದೇವೆ, ನಾವು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಉಗ್ರರ ದಾಳಿಗೆ ನಲುಗಿದ್ದ ಕೃಷ್ಣ ಡಾಬಾ ಫೆಬ್ರವರಿಯಿಂ,ದ  ಬಂದ್ ಆಗಿತ್ತು.  ರಮೇಶ್ ಅವರ ಪುತ್ರ ಆಕಾಶ್ ಮೆಹ್ರಾ ಅವರನ್ನುನ ಉಗ್ರರು ಅತಿ ಹತ್ತಿರದಿಂದ ಶೂಟ್ ಮಾಡಿದ್ದರು.

ಗಂಭೀರ ಗಾಯಗೊಂಡಿದ್ದ ಆಕಾಶ್ ಆಸ್ಪತ್ರೆಯಲ್ಲಿ ಸಾವು ಕಂಡಿದ್ದರು.  ಪ್ರಕರಣಕ್ಕೆ ಸಂಬಂಧಿಸಿ ಲಕ್ಷರ್-ಇ-ತೋಯ್ಬಾ ಸೋಘಟನೆಗೆ ಸೇರಿದ ಮೂವರನ್ನು ಜಮ್ಮು ಪೊಲೀಸರರು ಬಂಧಿಸಿದ್ದರು. ಮುಸ್ಲಿಂ ಜನ್ ಬಜ್ ಪೋರ್ಸ್ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ಪ್ರದೇಶದಲ್ಲಿ ಕಷ್ಣ ಡಾಬಾ ಇದೆ.  ವಿದೇಶದ ನಿಯೋಗವೊಂದು  ಭೇಟಿ ನೀಡಿದ್ದ ವೇಳೆ ದಾಳಿಯಾಗಿತ್ತು.