ಕೋಲ್ಕತ್ತಾ(ನ  02)  ಉಗ್ರ ಸಂಘಟನೆ ಅಲ್-ಖೈದಾ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಬ್ದುಲ್ ಮೊಮಿನ್ ಮಂಡಲ್ ಎಂಬಾತನ ಬಂಧನ ಮಾಡಿದೆ. ಪಶ್ಚಿಮ ಬಂಗಾಳದ ಮುಷಿರಾಬಾದ್ ನಿವಾಸಿಯ ಬಂಧನವಾಗಿದ್ದು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಉಗ್ರ ಸಂಘಟನೆ ನಂಟು ಹೊಂದಿದ್ದ ಎನ್ನಲಾಗಿದೆ.

ಆಗಸ್ಟ್ ತಿಂಗಳಿನಿಂದಲೇ ಎನ್‌ಐಎಗೆ ಇವನ ಚಟುವಟಿಕೆ ಮೇಲೆ ನಿಗಾ ಇತ್ತು. ಹತ್ತಕ್ಕೂ ಅಧಿಕ ಮಂದಿ ಜಿಹಾದಿ ಹೆಸರಿನಲ್ಲಿ ಆಲ್ ಖೈದಾ ಪರ ಕೆಲಸ ಮಾಡುತ್ತಿದ್ದು ವಿಧ್ವಂಸಕ ಕೃತ್ಯಕ್ಕೆ ಸಿದ್ಧರಾಗುತ್ತಿದ್ದಾರೆ ಎಂಬ ಮಾಹಿತಿಯಿತ್ತು.  ದೆಹಲಿ, ಪಶ್ಚಿಮ ಬಂಗಾಳ ಮತ್ತು ಕೇರಳವನ್ನು ಟಾರ್ಗೆಟ್ ಮಾಡಿಕೊಂಡಿದ್ದರು.

ಮಾನಗೇಡಿ ಪಾಕಿಸ್ತಾನ ಪುಲ್ವಾಮಾ ದಾಳಿ ಒಪ್ಪಿಕೊಂಡ ಮೇಲೆ ಏನಾಯ್ತು?

ರಾಯಪುರದ ಮದರಸಾ ಒಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿರುವ ಅಬ್ದುಲ್ ಮೊಮಿನ್ ಮಂಡಲ್ ಅಲ್ ಖೈದಾ ಜತೆಗೆ ನಂಟು ಹೊಂದಿ ಉಗ್ರ ಸಂಘಟನೆಯ ಸಭೆಯಲ್ಲಿ ಭಾಗವಹಿಸಿರುವುದು ಬಹಿರಂಗವಾಗಿದೆ.  ಅನೇಕ ಜನರನ್ನು ಉಗ್ರ ಸಂಘಟನೆ ಕಡೆ ಸೆಳೆಯುವ ಕೆಲಸ ಮಾಡುತ್ತಿದ್ದ. ಈತನ ಮನೆ ಮೇಲೆಯೂ ದಾಳಿ ಮಾಡಲಾಗಿದ್ದು ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ದಾಳಿ ನಡೆಸಿದ ವೇಳೆ ಡಿಜಿಟಲ್‌ ಉಪಕರಣ, ಪ್ರಮುಖ ತಾಣಗಳು, ಸ್ಥಳಗಳ ಮ್ಯಾಪ್‌, ದಾಖಲೆಗಳು, ಜಿಹಾದಿ ಸಾಹಿತ್ಯ, ದೇಶೀ ನಿರ್ಮಿತ ಶಸ್ತ್ರಾಸ್ತ್ರ, ಸ್ಫೋಟಕ ತಯಾರಿಸುವ ವಿಧಾನದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಅಲ್-ಖೈದಾ ಜತೆಗಿನ ನಂಟಿನ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಒಟ್ಟು ಹನ್ನೊಂದು ಜನರನ್ನು ಬಂಧಿಸಲಾಗಿದ್ದು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ನಿರಂತರ ಕಾರ್ಯಾಚಾರಣೆ ನಡೆದಿದೆ.  ವಿಚಾರಣೆ ನಂತರ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಂದರೆ ಅಚ್ಚರಿ ಇಲ್ಲ.