Asianet Suvarna News Asianet Suvarna News

ಆಸ್ಪ್ರೇಲಿಯಾದಲ್ಲೂ ನಮೋ ಅಲೆ: ಸಿಡ್ನಿಯಲ್ಲಿ ‘ಮೋದಿ ಮೋದಿ’ ಜೈಘೋಷ; ಮೋದಿಯೇ ಬಾಸ್‌ ಎಂದ ಆಸೀಸ್‌ ಪ್ರಧಾನಿ

21 ಸಾವಿರಕ್ಕೂ ಹೆಚ್ಚು ಭಾರತೀಯರು ಹಾಗೂ ಆಸ್ಪ್ರೇಲಿಯನ್ನರು ನೆರೆದಿದ್ದ ಬೃಹತ್‌ ಸ್ಟೇಡಿಯಂನಲ್ಲಿ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಮೋದಿಗೆ ಆತ್ಮೀಯ ಅಪ್ಪುಗೆಯ ಮೂಲಕ ಸ್ವಾಗತ ಕೋರಿದರು. ಬಳಿಕ ‘ಮೋದಿ ಮೋದಿ ಮೋದಿ’ ಘೋಷಣೆ ಮೊಳಗಿತು. ಈ ಘೋಷಣೆಗಳ ನಡುವೆಯೇ ಮೋದಿ ಭಾಷಣ ಮಾಡಿದರು.

overseas indians cheer for modi at rally in australia s sydney ash
Author
First Published May 24, 2023, 11:26 AM IST

ಸಿಡ್ನಿ (ಮೇ 24, 2023): ಆಸ್ಪ್ರೇಲಿಯಾಗೆ 3 ದಿನಗಳ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಸಿಡ್ನಿಯಲ್ಲಿ ಮಂಗಳವಾರ ನಡೆದ ಅವರ ಬಹಿರಂಗ ಶೋ ವೇಳೆ ಜನರು ದಾಂಗುಡಿ ಇಟ್ಟು, ‘ಮೋದಿ ಅಲೆ’ ಸೃಷ್ಟಿಸಿದ್ದಾರೆ.

ಆಸ್ಪ್ರೇಲಿಯಾಕ್ಕೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಅವರಿಗೆ ಸಿಡ್ನಿಯಲ್ಲಿ ಸಮಾರಂಭ ನಡೆದ ಕುಡೋಸ್‌ ಬ್ಯಾಂಕ್‌ ಅರೇನಾದಲ್ಲಿ ಮಂಗಳವಾರ ಭವ್ಯ ಸ್ವಾಗತ ದೊರಕಿತು. 21 ಸಾವಿರಕ್ಕೂ ಹೆಚ್ಚು ಭಾರತೀಯರು ಹಾಗೂ ಆಸ್ಪ್ರೇಲಿಯನ್ನರು ನೆರೆದಿದ್ದ ಬೃಹತ್‌ ಸ್ಟೇಡಿಯಂನಲ್ಲಿ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಮೋದಿಗೆ ಆತ್ಮೀಯ ಅಪ್ಪುಗೆಯ ಮೂಲಕ ಸ್ವಾಗತ ಕೋರಿದರು. ಬಳಿಕ ‘ಮೋದಿ ಮೋದಿ ಮೋದಿ’ ಘೋಷಣೆ ಮೊಳಗಿತು. ಈ ಘೋಷಣೆಗಳ ನಡುವೆಯೇ ಮೋದಿ ಭಾಷಣ ಮಾಡಿದರು.

ಇದನ್ನು ಓದಿ: ನಿಮ್ಮ ಬಳಿ ಆಟೋಗ್ರಾಫ್‌ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌!

ಇದೇ ವೇಳೆ, ಜನರು ತ್ರಿವರ್ಣಧ್ವಜ ಹಿಡಿದು ಭಾರತ್‌ ಮಾತಾ ಕೀ ಜೈ ಜಯಘೋಷ ಮೊಳಗಿಸಿದರು. ಕೆಲವರು ತ್ರಿವರ್ಣ ಧ್ವಜದ ಪೇಟ ಧರಿಸಿದ್ದರು.

ಮೋದಿ ಹಾಗೂ ಅಲ್ಬನೀಸ್‌ಗೆ ಇದೇ ವೇಳೆ ಹಿಂದೂ ಪುರೋಹಿತರು ಸ್ವಾಗತ ಕೋರಿ ಆಶೀರ್ವದಿಸಿದರು. ಭಾರತೀಯ ಕಲಾ ತಂಡಗಳು ಭಾರತದ ಸಂಸ್ಕೃತಿ ಪ್ರದರ್ಶಿಸುವ ನೃತ್ಯ, ಹಾಡುಗಾರಿಕೆ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಸೋಮವಾರ ರಾತ್ರಿ ಇದೇ ರೀತಿ ಸಿಡ್ನಿಯಲ್ಲಿ ಭಾರತೀಯರು ಅಪ್ಪಟ ದೇಶೀ ಉಡುಗೆಯಲ್ಲಿ ನೆರೆದು ಭರ್ಜರಿ ಸ್ವಾಗತ ಕೋರಿದ್ದರು.

ಇದನ್ನೂ ಓದಿ: ಕ್ವಾಡ್‌ ಶೃಂಗಸಭೆ ರದ್ದಾದ್ರೂ ಆಸ್ಪ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ; ಜೋ ಬೈಡೆನ್‌ ಭೇಟಿಯಾಗ್ತಾರಾ ಮೋದಿ?

ಮೋದಿಯೇ ಬಾಸ್‌: ಆಸ್ಪ್ರೇಲಿಯಾ ಪ್ರಧಾನಿ ಬಣ್ಣನೆ
ಪ್ರಧಾನಿ ನರೇಂದ್ರ ಮೋದಿ ‘ದಿ ಬಾಸ್‌’ ಎಂದು ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಬಣ್ಣಿಸಿದ್ದಾರೆ. ಮಂಗಳವಾರ ಸಿಡ್ನಿಯಲ್ಲಿ ಏರ್ಪಡಿಸಿದ್ದ ಭವ್ಯ ಸಮಾರಂಭದಲ್ಲಿ ಮೋದಿಯವರನ್ನು ಸ್ವಾಗತಿಸಿದ ಅಲ್ಬನೀಸ್‌, ‘ಪ್ರಧಾನಿ ಮೋದಿ ಹೋದಲ್ಲೆಲ್ಲ ಅವರಿಗೆ ರಾಕ್‌ಸ್ಟಾರ್‌ ರೀತಿಯ ಸ್ವಾಗತ ಸಿಗುತ್ತದೆ. ಹೀಗಾಗಿ ಅವರು ದಿ ಬಾಸ್‌’ ಎಂದು ಹೇಳಿದರು.

‘ಹಿಂದೆ ಇಲ್ಲಿಗೆ ಅಮೆರಿಕದ ಖ್ಯಾತ ಗಾಯಕ ಬ್ರೂಸ್‌ ಸ್ಟ್ರಿಂಗ್‌ಸ್ಟೀನ್‌ ಬಂದಿದ್ದರು. ಅವರಿಗೆ ‘ದಿ ಬಾಸ್‌’ ಎಂದು ಅಭಿಮಾನಿಗಳು ಕರೆಯುತ್ತಾರೆ. ಅವರು ಬಂದಾಗಲೂ ಇಲ್ಲಿ ಇಷ್ಟೊಂದು ಜನರು ಸೇರಿ ಈ ಪರಿಯ ಭವ್ಯ ಸ್ವಾಗತ ನೀಡಿರಲಿಲ್ಲ. ಹೀಗಾಗಿ ಮೋದಿ ಅವರು ಸ್ಟ್ರಿಂಗ್‌ಸ್ಟೀನ್‌ಗಿಂತ ಹೆಚ್ಚು ಪ್ರಸಿದ್ಧರು. ಇವರೇ ದಿ ಬಾಸ್‌’ ಎಂದು ಅಲ್ಬನೀಸ್‌ ಬಣ್ಣಿಸಿದರು. ಈ ಮಾತಿಗೆ ಕುಡೋಸ್‌ ಬ್ಯಾಂಕ್‌ ಅರೇನಾ ಸ್ಟೇಡಿಯಂನಲ್ಲಿ ನೆರೆದಿದ್ದ 21 ಸಾವಿರಕ್ಕೂ ಹೆಚ್ಚು ಜನರಿಂದ ಕಿವಗಡಚಿಕ್ಕುವ ಚಪ್ಪಾಳೆಯ ಮಳೆ ಸುರಿಯಿತು.

ಇದನ್ನೂ ಓದಿ: ಮೇ 19ರಿಂದ 6 ದಿನ ಮೋದಿ ವಿದೇಶ ಪ್ರವಾಸ: 71 ಸಾವಿರ ಜನರಿಗೆ ಉದ್ಯೋಗ ಪತ್ರ ವಿತರಣೆ

‘ಮೋದಿ ನನ್ನ ಡಿಯರ್‌ ಫ್ರೆಂಡ್‌. ಅವರು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಸ್ಫೂರ್ತಿಯನ್ನು ಆಸ್ಪ್ರೇಲಿಯಾಕ್ಕೆ ತಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟುಗಟ್ಟಿಯಾಗಿಸಲು ಅವರು ಸಹಾಯ ಮಾಡಿದ್ದಾರೆ’ ಎಂದೂ ಕೊಂಡಾಡಿದ ಅಲ್ಬನೀಸ್‌, ‘ನೀವು ಆಸ್ಪ್ರೇಲಿಯಾವನ್ನು ಶಕ್ತಿಶಾಲಿಯಾಗಿಸುತ್ತಿದ್ದೀರಿ’ ಎಂದರು.

ಇದನ್ನೂ ಓದಿ: ಸೆಪ್ಟೆಂಬರ್‌ಗೆ ಜೋ ಬೈಡೆನ್‌ ಭಾರತಕ್ಕೆ; 2024 ನಮ್ಮ ಬಾಂಧವ್ಯಕ್ಕೆ ದೊಡ್ಡ ವರ್ಷ: ಅಮೆರಿಕ

Follow Us:
Download App:
  • android
  • ios