ನವದೆಹಲಿ[ಜ.16]: 2014 ರಿಂದ 2018ರ ಅವಧಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬರೋಬ್ಬರಿ 85 ಸಾವಿರ ಪಾದಾಚಾರಿಗಳು ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಂಕಿ ಅಂಶಗಳೇ ಹೇಳಿವೆ.

2018ರಲ್ಲಿ ಸುಮಾರು 20,457 ಪಾದಾಚಾರಿಗಳು ಸಾವನ್ನಪ್ಪಿದ್ದು, 2017ಕ್ಕೆ ಹೋಲಿಕೆ ಮಾಡಿದರೆ ಇದು ಶೇ.10.11ರಷ್ಟುಹೆಚ್ಚು. 2016, 2015 ಹಾಗೂ 2014ರಲ್ಲಿ ಕ್ರಮವಾಗಿ 15,746, 13,894 ಹಾಗೂ 12,300 ಪಾದಾಚಾರಿಗಳು ಅಪಘಾತಕ್ಕೆ ಬಲಿಯಾಗಿದ್ದರು. 

2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ!

2018ರಲ್ಲಿ ಒಟ್ಟು ಅಪಘಾತದಲ್ಲಿ ಉಂಟಾದ ಸಾವುಗಳಲ್ಲಿ ಶೇ.15ರಷ್ಟುಮಂದಿ ಪಾದಾಚಾರಿಗಳಿದ್ದಾರೆ. 2015 ಹಾಗೂ 2016ರಲ್ಲಿ ಇದರ ಶೇ. ಕ್ರಮವಾಗಿ ಶೇ.9.5 ಹಾಗೂ ಶೇ.13.8 ಇತ್ತು.

2019ರಲ್ಲಿ ರೈಲ್ವೆ ಭದ್ರತಾ ಪಡೆಗಳಿಂದ ನಿಲ್ದಾಣದಲ್ಲಿ 16457 ಮಕ್ಕಳ ರಕ್ಷಣೆ!

2019ರಲ್ಲಿ ರೈಲ್ವೇ ರಕ್ಷಣಾ ಪಡೆಗಳು ದೇಶಾದ್ಯಂತ ರೈಲ್ವೇ ನಿಲ್ದಾಣಗಳಲ್ಲಿ ಬರೋಬ್ಬರಿ 16,457 ಮಕ್ಕಳನ್ನು ರಕ್ಷಣೆ ಮಾಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ!

ಈ ಪೈಕಿ 68 ಮಾನವ ಕಳ್ಳಸಾಗಣೆದಾರರಿಂದ 446 ಮಕ್ಕಳನ್ನು, ಮನೆ ಬಿಟ್ಟು ಬಂದ 13,025, ನಿಲ್ದಾಣಗಳಲ್ಲಿ ಬಿಟ್ಟು ಹೋದ 1,294, ಕಾಣೆಯಾದ 1,091, ನಿರ್ಗತಿಕ 252, ಬೀದಿ ಬದಿಯ 133, ಮಾನಸಿಕ ಅಸ್ವಸ್ಥ 108, ಅಪಹರಣಕ್ಕೊಳಗಾದ 89 ಹಾಗೂ ಚಲಿಸುವ ರೈಲಿಂದ ಬಿದ್ದ 13 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ