ಅತ್ಯಾಚಾರ: ಶೇ. 25 ಅಪ್ರಾಪ್ತೆಯರೇ ಗುರಿ, ಪರಿಚಯಿಸ್ಥರಿಂದಲೇ ಶೇ.94 ರಷ್ಟು ರೇಪ್!
ರೇಪ್ ಕೇಸಲ್ಲಿ ಶೇ.25ರಷ್ಟು ಅಪ್ರಾಪ್ತೆಯರು| 2018ನೇ ಸಾಲಿನ ಎನ್‌ಸಿಆರ್‌ಬಿ ವರದಿ| ಶೇ.94ರಷ್ಟುರೇಪ್ ಪರಿಚಯಿಸ್ಥರಿಂದಲೇ
ನವದೆಹಲಿ[ಜ./11]: 2018ರಲ್ಲಿ ದೇಶಾದ್ಯಂತ 33,356 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ದಿನಕ್ಕೆ ಸರಾಸರಿ 89 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.
2018ರಲ್ಲಿ ದೇಶದೆಲ್ಲೆಡೆ ನಡೆದ ಅತ್ಯಾಚಾರಗಳ ಪೈಕಿ ಪ್ರತಿ ನಾಲ್ಕರಲ್ಲಿ ಒಬ್ಬ ಸಂತ್ರಸ್ತೆ ಅಪ್ರಾಪ್ತೆ ಆಗಿದ್ದಾಳೆ. ಅಂದರೆ ಅಪ್ರಾಪ್ತೆಯರ ಪ್ರಮಾಣ ಶೇ.25ರಷ್ಟಿದೆ. ಇನ್ನು ಶೇ.50ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸಂತ್ರಸ್ತರು 18ರಿಂದ 30 ವರ್ಷದವರಾಗಿದ್ದಾರೆ. ಶೇ.94ರಷ್ಟುಪ್ರಕರಣಗಳಲ್ಲಿ ತಪ್ಪಿತಸ್ಥರು ಸಂತ್ರಸ್ತೆಗೆ ಗೊತ್ತಿದ್ದವರೇ ಆಗಿದ್ದಾರೆ. ಅಂದರೆ, ಅವರು ಸಂತ್ರಸ್ತೆಯ ಕುಟುಂಬ ಸದಸ್ಯರು, ಸ್ನೇಹಿತರು, ಜೊತೆಗಾರರು, ಉದ್ಯೋಗದಾತರು ಆಗಿದ್ದಾರೆ ಎಂದು ವರದಿ ಹೇಳಿದೆ.
ಇದು ಭಾರತದ ಅತ್ಯಂತ ಸುರಕ್ಷಿತ ನಗರ: NCRB ವರದಿ!
ಮಧ್ಯಪ್ರದೇಶದಲ್ಲಿ ಅತಿ ಹಚ್ಚು ಅಂದರೆ 5,433 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ನಂತರದಲ್ಲಿರುವ ರಾಜಸ್ಥಾನ (4,335), ಉತ್ತರ ಪ್ರದೇಶ (3,946) ರಾಜ್ಯಗಳಿವೆ.