ಕೇರಳ ಮದ್ಯದ ಮಳಿಗೆ ಸಿಬ್ಬಂದಿ ಪೈಕಿ ಶೇ.50ರಷ್ಟು ಮಹಿಳೆಯರು : ಸ್ತ್ರೀಯರ ಪಾಲು ಇಷ್ಟು ಇನ್ನೆಲ್ಲೂ ಇಲ್ಲ
ಇಲ್ಲಿಯ ಮಹಿಳೆಯರು ಕುಟುಂಬಸ್ಥರ ವಿರೋಧದ ನಡುವೆಯೂ ಮದ್ಯದಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ತ್ರೀಯರ ಪಾಲು ಇಷ್ಟು ಬೇರಾವ ರಾಜ್ಯದಲ್ಲಿಯೂ ಕಂಡು ಬರುವದಿಲ್ಲ.
ತಿರುವನಂತಪುರಂ: ಮದ್ಯದ ಅಂಗಡಿಗಳೆಂದರೆ ಮಹಿಳೆಯರು ದೂರ ದೂರ. ಇನ್ನು ಮದ್ಯ ಮಾರಾಟ ಮಳಿಗೆಗಳಲ್ಲಿ ಅವರನ್ನು ಕಾಣುವುದೂ ಕಷ್ಟ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕೇರಳದ ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ.
ಕೇರಳದಲ್ಲಿ ಸರ್ಕಾರವೇ ಮದ್ಯ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತದೆ. ಅದರ ಹೊಣೆ ಕೇರಳ ರಾಜ್ಯ ಪಾನೀಯ ನಿಗಮ ನಿಯಮಿತ(ಬಿಇವಿಸಿಒ)ಯದ್ದು. ಅದರಲ್ಲಿ ಇದೀಗ ಶೇ.50ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿಗಳಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಲಿಕ್ಕರ್ ಮಳಿಗೆಗಳಲ್ಲಿ ಕೆಲಸ ನಿರ್ವಹಿಸಿರುವುದು ದೇಶದಲ್ಲಿ ಕೇರಳವೇ ಮೊದಲು.
Explainer: ಶೇ.90 ರಷ್ಟು ಹಿಂದೂಗಳೇ ಇರುವ ಸಂಪೂರ್ಣ ಗ್ರಾಮವೇ ತಮ್ಮದು ಎಂದ ವಕ್ಫ್ ಬೋರ್ಡ್, ಏನಿದು ಇಡೀ ವಿವಾದ!
ಆರಂಭದಲ್ಲಿ ಬಿಇವಿಸಿಒ ಮಳಿಗೆಗಳಲ್ಲಿ ಕೆಲಸ ಮಾಡುವುದು ಮಹಿಳೆಯರಿಗೆ ಸವಾಲಿನ ಕೆಲಸವಾಗಿತ್ತು. ಕೌಟುಂಬಿಕ ವಿರೋಧಗಳು ಎದುರಾಗಿತ್ತು. ಆದರೆ ಅದೆಲ್ಲವನ್ನೂ ನಿಭಾಯಿಸಿ ಮಹಿಳೆಯರಿಗೆ ಮದ್ಯದ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇರಳದ ಸ್ತ್ರೀಯರು ಲಿಕ್ಕರ್ ಮಳಿಗೆಗಳಲ್ಲಿ ಹೆಚ್ಚೆಚ್ಚು ಕೆಲಸಕ್ಕೆ ತೊಡಗಿಸಿಕೊಂಡಿರುವುದರ ಪರಿಣಾಮ ಬಿಇವಿಸಿಒನಲ್ಲಿ ಕೆಲಸ ಗಿಟ್ಟಿಸಿಳ್ಳಲು ಮಹಿಳೆಯರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ತೋರುತ್ತಿದ್ದಾರೆ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.
ಬಿಹಾರದಲ್ಲಿ ದಲಿತರ 35 ಮನೆಗಳಿಗೆ ಬೆಂಕಿ; ಇತ್ತ ರಾಜಕೀಯ ನಾಯಕರ ಕೆಸರೆರಾಚಟ