Asianet Suvarna News Asianet Suvarna News

ಅಯೋಧ್ಯೆ: 5.51 ಲಕ್ಷ ದೀಪ ಬೆಳಗಲು ಸಿದ್ಧತೆ!

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಬಗೆಹರಿದು ರಾಮಮಂದಿರ ಶಂಕುಸ್ಥಾಪನೆ| ಅಯೋಧ್ಯೆ: 5.51 ಲಕ್ಷ ದೀಪ ಬೆಳಗಲು ಸಿದ್ಧತೆ

Over 5 5 lakh diyas lit up in Ayodhya world record set pod
Author
Bangalore, First Published Nov 8, 2020, 4:47 PM IST

 

ಅಯೋಧ್ಯೆ(ನ.08): ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಬಗೆಹರಿದು ರಾಮಮಂದಿರ ಶಂಕುಸ್ಥಾಪನೆ ನೆರವೇರಿದ ನಂತರ ಇದೇ ಮೊದಲ ಬಾರಿ ರಾಮಜನ್ಮಸ್ಥಳದಲ್ಲಿ ದೀಪಾವಳಿ ಆಚರಣೆ ನಡೆಯುತ್ತಿದೆ.

ಭಾರೀ ದೊಡ್ಡ ಪ್ರಮಾಣದಲ್ಲಿ ದೀಪಾವಳಿ ಅಯೋಜನೆ ಆಗಿದ್ದು, ಅಯೋಧ್ಯೆಯಲ್ಲಿ 5.51 ಲಕ್ಷ ದೀಪಗಳನ್ನು ಬೆಳಗಿಸಲು ನಿರ್ಧರಿಸಲಾಗಿದೆ. ಬೆಳಕಿನ ಹಬ್ಬದ ಸಂದರ್ಭದಲ್ಲಿ ರಾಮ್‌ ಕೀ ಪೈಡಿ ಘಾಟ್‌ಗಳಲ್ಲಿ 5.51 ಲಕ್ಷ ದೀಪಗಳನ್ನು ಪ್ರಜ್ವಲಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖುದ್ದು ಯೋಗಿ ಅವರು ಈ ಶುಭ ಸಂದರ್ಭಕ್ಕೆ ಆಗಮಿಸಿ ದೀಪ ಬೆಳಗಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

‘500 ವರ್ಷಗಳ ಬಳಿಕ ಮಂದಿರದ ವಿವಾದ ಬಗೆಹರಿದಿದೆ. ವಿವಾದ ಇತ್ಯರ್ಥದ ನಂತರದ ಮೊದಲ ದೀಪಾವಳಿ ಇದು. ಆದರೆ ಕೊರೋನಾ ವೈರಸ್‌ ಹರಡುವಿಕೆ ಕಾರಣ ಭಾರೀ ಪ್ರಮಾಣದ ಜನರನ್ನು ಸೇರಿಸಲು ಅವಕಾಶ ನೀಡದೇ, ಕೊರೋನಾ ಮಾರ್ಗಸೂಚಿಗಳ ಪ್ರಕಾರ ಕಾರ್ಯಕ್ಮ ಆಯೋಜಿಸಲಾಗುತ್ತಿದೆ. ಕೊರೋನಾ ಇಲ್ಲದಿದ್ದರೆ ಕೋಟ್ಯಂತರ ಜನರಿಗೆ ಭಾಗವಹಿಸಲು ಅವಕಾಶವಿತ್ತು. ಆದಾಗ್ಯೂ ವೆಬ್‌ಸೈಟ್‌ನಲ್ಲಿ ದೀಪೋತ್ಸವ ನೇರ ಪ್ರಸಾರ ಇರಲಿದ್ದು, ಜನರು ನೋಡಿ ಆನಂದಿಸಬಹುದು’ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ.

Follow Us:
Download App:
  • android
  • ios