Asianet Suvarna News Asianet Suvarna News

ಗುಜರಾತ್‌ನಲ್ಲಿಂದು ಅಮಿತ್ ಶಾ ಸಮ್ಮುಖದಲ್ಲಿ 12,000 ಕೆ.ಜಿ.ಗೂ ಅಧಿಕ Drugs ನಾಶ

ಕೇಂದ್ರ ಗೃಹ ಸಚಿವರು ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಗುಜರಾತ್‌ನ ಗಾಂಧಿನಗರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಈ ವೇಳೆ ವಶಪಡಿಸಿಕೊಂಡಿರುವ ಒಟ್ಟು ₹ 632.68 ಕೋಟಿ ಮೌಲ್ಯದ 12,438.96 ಕೆಜಿ ಡ್ರಗ್ಸ್ ನಾಶವಾಗಲಿದೆ.

over 12000 kg Of drugs to be destroyed today in gujarat in amit shahs presence ash
Author
First Published Oct 26, 2022, 2:52 PM IST

ಇತ್ತೀಚಿನ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ (Central Government) ಮಾದಕ ವಸ್ತು (Narcotics) ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ದೇಶಾದ್ಯಂತ ಡ್ರಗ್‌ ಪೆಡ್ಲರ್‌ಗಳನ್ನು (Drug Peddler) ವಶಕ್ಕೆ ಪಡೆಯುವುದು, ಡ್ರಗ್ಸ್‌ (Drugs) ನಾಶ ಮಾಡುವುದು - ಇಂತಹ ಹಲವು ಕ್ರಮಗಳನ್ನು ಮೋದಿ ಸರ್ಕಾರ (Modi Government) ತೆಗೆದುಕೊಂಡಿದೆ. ಈಗಾಗಲೇ ಲಕ್ಷ ಕೆಜಿಗೂ ಹೆಚ್ಚು ಡ್ರಗ್ಸ್‌ಗಳನ್ನು ನಾಶ ಮಾಡಿದೆ. ಈಗ ಅದೇ ರೀತಿ, ಗುಜರಾತ್‌ನಲ್ಲಿ (Gujarat) ಕೇಂದ್ರ ಗೃಹ ಸಚಿವ (Union Home Minister) ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಬುಧವಾರ ಸಂಜೆ 12,000 ಕೆಜಿಗಳಷ್ಟು ಡ್ರಗ್ಸ್‌ ನಾಶಪಡಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿದೆ. ವಿವಿಧೆಡೆ ವಶಪಡಿಸಿಕೊಂಡ 632.68 ಕೋಟಿ ರೂ. ಮೌಲ್ಯದ 12,438.96 ಕೆಜಿ ಡ್ರಗ್ಸ್ ನಾಶವಾಗಲಿದೆ ಎಂದು ತಿಳಿದುಬಂದಿದೆ.

ಕೇಂದ್ರ ಗೃಹ ಸಚಿವರು ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಗುಜರಾತ್‌ನ ಗಾಂಧಿನಗರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಈ ವೇಳೆ ವಶಪಡಿಸಿಕೊಂಡಿರುವ ಒಟ್ಟು ₹ 632.68 ಕೋಟಿ ಮೌಲ್ಯದ 12,438.96 ಕೆಜಿ ಡ್ರಗ್ಸ್ ನಾಶವಾಗಲಿದೆ. ಈ ಸಭೆಯಲ್ಲಿ ಗೋವಾ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಆಡಳಿತಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಇದನ್ನು ಓದಿ: ಅಮಿತ್‌ ಶಾ ಎದುರು 30 ಸಾವಿರ ಕೇಜಿ ಡ್ರಗ್ಸ್‌ ನಾಶ

ಈ ಮಧ್ಯೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ನೇ ವರ್ಷವನ್ನು ಗುರುತಿಸಲು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) 75 ದಿನಗಳಲ್ಲಿ ಜಪ್ತಿ ಮಾಡಿದ ಕನಿಷ್ಠ 75,000 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸುವ ಗುರಿಯನ್ನು ಹೊಂದಿತ್ತು. ಈ ವರ್ಷ ಜುಲೈ 30 ರಂದು ಚಂಡೀಗಢದಲ್ಲಿ 31,000 ಕೆಜಿಗೂ ಹೆಚ್ಚು ಡ್ರಗ್ಸ್ ನಾಶಪಡಿಸುವ ಮೂಲಕ ಗೃಹ ಸಚಿವರು ಈ ಕಾರ್ಯಾಚರಣೆ ಆರಂಭಿಸಿದ್ದರು. 

ಅಲ್ಲದೆ, ವಾರಗಳ ಹಿಂದೆ, 40,000 ಕೆಜಿ ಡ್ರಗ್ಸ್ ಮತ್ತು ಮಾದಕ ವಸ್ತುಗಳನ್ನು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಇನ್ನು, ಎನ್‌ಸಿಬಿ ತನ್ನ ಗುರಿಯನ್ನು 60 ದಿನಗಳಲ್ಲಿ ಸಾಧಿಸಿದ್ದು, ಇದುವರೆಗೆ ಒಂದು ಲಕ್ಷ ಕೆ.ಜಿ.ಗೂ ಹೆಚ್ಚು ಡ್ರಗ್ಸ್ ಮತ್ತು ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.

ಇದನ್ನೂ ಓದಿ: Bengaluru: 28 ಟನ್‌ ತೂಕದ 60 ಕೋಟಿ ಡ್ರಗ್ಸ್‌ ನಾಶ ಮಾಡಿದ ಪೊಲೀಸರು!

Follow Us:
Download App:
  • android
  • ios