Bengaluru: 28 ಟನ್ ತೂಕದ 60 ಕೋಟಿ ಡ್ರಗ್ಸ್ ನಾಶ ಮಾಡಿದ ಪೊಲೀಸರು!
‘ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಅಂಗವಾಗಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸುಮಾರು 60 ಕೋಟಿ ಮೌಲ್ಯದ 28 ಟನ್ ಡ್ರಗ್ಸ್ ಅನ್ನು ಭಾನುವಾರ ಪೊಲೀಸ್ ಇಲಾಖೆ ನಾಶಗೊಳಿಸಿದೆ.
ಬೆಂಗಳೂರು (ಜೂ.27): ‘ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಅಂಗವಾಗಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸುಮಾರು 60 ಕೋಟಿ ಮೌಲ್ಯದ 28 ಟನ್ ಡ್ರಗ್ಸ್ ಅನ್ನು ಭಾನುವಾರ ಪೊಲೀಸ್ ಇಲಾಖೆ ನಾಶಗೊಳಿಸಿದೆ. ತನ್ಮೂಲಕ ಎರಡು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅಂದಾಜು 110 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ನಾಶವಾದಂತಾಗಿದೆ.
‘ಡ್ರಗ್ಸ್ ಮುಕ್ತ ಕರ್ನಾಟಕ’ವನ್ನಾಗಿಸುವುದಾಗಿ ಘೋಷಿಸಿರುವ ರಾಜ್ಯ ಸರ್ಕಾರವು, ನಾಡಿನಲ್ಲಿರುವ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಮರ ಸಾರಿದೆ. ಪ್ರತಿ ಠಾಣಾ ಮಟ್ಟದಲ್ಲಿ ಕೂಡಾ ಡ್ರಗ್ಸ್ ಮಾರಾಟಗಾರರನ್ನು ಹೆಡೆ ಮುರಿ ಕಟ್ಟುವಂತೆ ಪೊಲೀಸರಿಗೆ ಸರ್ಕಾರವು ಸ್ಪಷ್ಟವಾಗಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ಬಿರುಸುಗೊಳಿಸಿರುವ ಪೊಲೀಸರು, ಕಳೆದ ವರ್ಷ .50.23 ಕೋಟಿ ಮೌಲ್ಯದ 24 ಟನ್ ಡ್ರಗ್ಸ್ ಅನ್ನು ಜಪ್ತಿಮಾಡಿ ನಾಶಗೊಳಿಸಿದ್ದರು. ಪ್ರಸಕ್ತ ವರ್ಷ ಸುಮಾರು 60 ಕೋಟಿ ಮೌಲ್ಯದ ಡ್ರಗ್ಸ್ ಹಾನಿಗೊಳಿಸಿದ್ದಾರೆ. ಇದರೊಂದಿಗೆ ಎರಡು ವರ್ಷದಲ್ಲಿ ಶತ ಕೋಟಿ ಮೌಲ್ಯದ ಡ್ರಗ್ಸ್ ನಾಶವಾಗಿದೆ.
3 ಲಕ್ಷದ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿದ ಉಡುಪಿ ಪೊಲೀಸ್ರು
ಬೆಂಗಳೂರಲ್ಲೇ ಹೆಚ್ಚು: ಇನ್ನು ಡ್ರಗ್ಸ್ ಜಾಲದ ದೊಡ್ಡ ಮಾರುಕಟ್ಟೆಎಂಬ ಕುಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಈ ವರ್ಷವು ಸಹ ಹೆಚ್ಚಿನ ಡ್ರಗ್ಸ್ ಪತ್ತೆಯಾಗಿದ್ದು, ನೆಲಮಂಗಲ ತಾಲೂಕಿನ ದಾಬಸಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಗರದಲ್ಲಿ ಜಪ್ತಿಯಾಗಿದ್ದ .41.90 ಕೋಟಿ ಮೌಲ್ಯದ 4.3 ಟನ್ ಡ್ರಗ್‌್ಸ ಅನ್ನು ನಾಶಗೊಳಿಸಲಾಗಿದೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಎಸ್ಪಿಗಳ ನೇತೃತ್ವದಲ್ಲಿ ಡ್ರಗ್‌್ಸ ಅನ್ನು ನಾಶ ಮಾಡಲಾಗಿದೆ. ಈ ಸಂಬಂಧ ಸಂಬಂಧಪಟ್ಟ ನ್ಯಾಯಾಲದಿಂದ ಕೂಡಾ ಅನುಮತಿ ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಡ್ರಗ್ಸ್ ದಂಧೆ ನಡೆಸುತ್ತಿದ್ದ ಡಿಜೆ ಮೂವರು ವಿದೇಶಿ ಪ್ರಜೆಗಳ ಬಂಧನ
ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್, ಹಾಗೂ ಸಿಂಥೆಟಿಕ್ ಡ್ರಗ್ಸ್‌ಗಳಾದ ಎಂಡಿಎಂ, ಎಲ್‌ಎಸ್‌ಡಿ ಸೇರಿದಂತೆ ಡ್ರಗ್ಸ್‌ಗಳು ಸೇರಿವೆ. 2021-22ರಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರಾಜ್ಯದಲ್ಲಿ 8505 ಮಾದಕವಸ್ತು ಪ್ರಕರಣಗಳನ್ನು ಭೇದಿಸಿದ ಪೊಲೀಸರು, 185 ವಿದೇಶಿಯರು ಸೇರಿದಂತೆ 7846 ಆರೋಪಿಗಳನ್ನು ಬಂಧಿಸಿದ್ದರು. ಪತ್ತೆಯಾದ ಪ್ರಕರಣಗಳಲ್ಲಿ 5363 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.