ಉತ್ತರ ಪ್ರದೇಶದಲ್ಲಿ ಹಿಂದೂ ಧರ್ಮಕ್ಕೆ ಘರ್‌ ವಾಪಸಿಯಾದ 100 ಕ್ಕೂ ಹೆಚ್ಚು ಜನ..!

ವಿವಿಧ ಧರ್ಮಗಳಿಗೆ ಸೇರಿದ್ದ 20 ಕುಟುಂಬಗಳ 100 - 125 ಜನರು ಖುಷಿಯಿಂದ ಸನಾತನ ಧರ್ಮ (ಹಿಂದೂ ಧರ್ಮ) ಕ್ಕೆ ಮತಾಂತರಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಖುರ್ಜಾ ಶಾಸಕಿ ತಿಳಿಸಿದ್ದಾರೆ.

over 100 people convert to hinduism in uttar pradeshs khurja bjp mla minakshi singh ash

ಕ್ರಿಸ್ಮಸ್‌ (Christmas) ದಿನದಂದು ಅಂದರೆ ಡಿಸೆಂಬರ್ 25, 2022ರ ಭಾನುವಾರ 100 ಕ್ಕೂ ಹೆಚ್ಚು ಜನ ಹಿಂದೂ ದರ್ಮಕ್ಕೆ (Hindu Religion) ಮತಾಂತರಗೊಂಡಿದ್ದಾರೆ (Conversion) ಎಂದು ಬಿಜೆಪಿ ಶಾಸಕಿ (BJP MLA) ಹೇಳಿದ್ದಾರೆ. ಉತ್ತರ ಪ್ರದೇಶದ (Uttar Pradesh) ಖುರ್ಜಾದಲ್ಲಿ (Khurja) 20 ಕುಟುಂಬಗಳ 100 ಕ್ಕೂ ಅಧಿಕ ಜನ ಭಾನುವಾರ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಬಿಜೆಪಿ ಶಾಸಕಿ ಮೀನಾಕ್ಷಿ ಸಿಂಗ್ (Minakshi Singh) ಭಾನುವಾರ ಮಾಹಿತಿ ನೀಡಿದ್ದಾರೆ. ಬಲ ಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್‌ (Vishwa Hindu Parishat) (ವಿಎಚ್‌ಪಿ) (VHP) ಆಯೋಜನೆ ಮಾಡಿದ್ದ ಘರ್‌ ವಾಪಸಿ (Ghar Wapsi) ಕಾರ್ಯಕ್ರಮದಲ್ಲಿ ಈ ಮತಾಂತರವಾಗಿದೆ ಎಂದು ಸಾಮಾಜಿಕ ಸಂಘಟನೆಯೊಂದರ ಅಧ್ಯಕ್ಷರೂ ಆಗಿರುವ ಬಿಜೆಪಿ ಶಾಸಕರು ತಿಳಿಸಿದ್ದಾರೆ. ವಿವಿಧ ಧರ್ಮಗಳಿಗೆ ಸೇರಿದ್ದ 20 ಕುಟುಂಬಗಳ 100 - 125 ಜನರು ಖುಷಿಯಿಂದ ಸನಾತನ ಧರ್ಮ (ಹಿಂದೂ ಧರ್ಮ) ಕ್ಕೆ ಮತಾಂತರಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಖುರ್ಜಾ ಶಾಸಕಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹಲವು ವರ್ಷಗಳ ಹಿಂದೆ ಅಥವಾ ಹಲವು ತಲೆಮಾರುಗಳ ಹಿಂದೆ ಸನಾತನ ಧರ್ಮ ತೊರೆದಿದ್ದವರನ್ನು ಮತ್ತೆ ಹಿಂದೂ ಸಮಾಜಕ್ಕೆ ವಾಪಸ್‌ ತರಲಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಪರಿಸ್ಥಿತಿ ಅಥವಾ ಗೊಂದಲಗಳಿಂದಾಗಿ ಹಲವರು ಹಿಂದೂ ಧರ್ಮ ತೊರೆದಿದ್ದರು ಎಂದೂ ಮೀನಾಕ್ಷಿ ಸಿಂಗ್ ಹೇಳಿದ್ದಾರೆ. ಹಾಗೂ, ಶ್ರೀರಾಮ, ಶ್ರೀ ಕೃಷ್ಣ ಹಾಗೂ ಸನಾತನ ದೇವರು ಮತ್ತು ದೇವತೆಗಳನ್ನು ಪೂಜೆ ಮಾಡುವುದಾಗಿ ಎಲ್ಲರೂ ಪ್ರಮಾಣ ಮಾಡಿದ್ದಾರೆ ಎಂದೂ ಶಾಸಕಿ ಹೇಳಿದ್ದಾರೆ. ಇನ್ನು, ಕಾನೂನಾತ್ಮಕ ಪ್ರಕ್ರಿಯೆಯೂ ಸಹ ನಡೆದಿದ್ದು, ಆಚರಣೆಗಳನ್ನು ನಡೆಸುವ ಮೊದಲು ಎಲ್ಲಾ ಕುಟುಂಬಗಳು ಅಫಿಡವಿಟ್‌ಗಳಲ್ಲಿ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ ಎಂದೂ ಉತ್ತರ ಪ್ರದೇಶದ ಖುರ್ಜಾ ಶಾಸಕಿ ಮೀನಾಕ್ಷಿ ಸಿಂಗ್ ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: Ghar Wapsi ವಿಜಯನಗರ ಜಿಲ್ಲೆಯಲ್ಲಿ ಘರ್‌ವಾಪಸಿ, ಕ್ರೈಸ್ತರಾಗಿ ಮತಾಂತರಗೊಂಡಿದ್ದ 22 ಮಂದಿ ಮರಳಿ ಹಿಂಧೂ ಧರ್ಮ ಸೇರ್ಪಡೆ!

ವಿಎಚ್‌ಪಿ ಅವರೊಂದಿಗೆ ರಾಷ್ಟ್ರೀಯ ಚೇತನಾ ಮಿಷನ್‌ ಉತ್ತರ ಪ್ರದೇಶದ ಖುರ್ಜಾದ ಕಲಿಂದಿ ಕುಂಜ್‌ ಕಾಲೋನಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕಿ ಮೀನಾಕ್ಷಿ ಸಿಂಗ್ ಸನಾತನ ಧರ್ಮಕ್ಕ ಮರಳಿದವರಿಗೆ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮರಳಿದ ಸುಮಾರು 100 ಜನರು ತಮ್ಮಿಚ್ಚೆಯಂತೆ ವೇದ ಮಂತ್ರ ಜಪಿಸಿದರು ಹಾಗೂ ಕಾನೂನಿನ ಪ್ರಕ್ರಿಯೆ ಸಹ ನಡೆಯಿತು ಎಂದೂ ಮೀನಾಕ್ಷಿ ಸಿಂಗ್ ತಿಳಿಸಿದ್ದಾರೆ. 

ಹಿಂದೂ ದರ್ಮಕ್ಕೆ ಮತಾಂತರಗೊಂಡ ಸಂದೀಪ್‌ ವಾಲ್ಮೀಕಿ ಎಂಬುವರು ಘರ್ ವಾಪಸಿಯಾಗಿರುವ ಬಗ್ಗೆ ಮಾಹಿತಿ ನೀಡಿರುವುದು ಹೀಗೆ: ನಾನು ಏಸು ಕ್ರಿಸ್ತನನ್ನು ಪ್ರಾರ್ಥಿಸಿದ ಬಳಿಕ ನನ್ನ ಮಗನ ಆರೋಗ್ಯ ಗುಣಮುಖವಾಯಿತು. ಈ ಹಿನ್ನೆಲೆ ನಾನು ಕ್ರೈಸ್ತ ಧರ್ಮ ಅನುಸರಿಸುತ್ತಿದ್ದೆ. ಆದರೆ, ನನ್ನ ತಾಯಿ ಮೃತಪಟ್ಟ ಬಳಿಕ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲು ಒತ್ತಾಯಿಸಿದರು. ಆದರೆ, ನನ್ನ ತಾಯಿಗೆ ಹಿಂದೂ ಧರ್ಮದ ಪ್ರಕಾರವೇ ಅಂತ್ಯ ಸಂಸ್ಕಾರ ನಡೆಯುವ ಇಚ್ಛೆ ಇತ್ತು ಎಂದು ಸಂದೀಪ್‌ ವಾಲ್ಮೀಕಿ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಇದನ್ನೂ ಓದಿ: Ghar Wapsi : ಒಂದೇ ಕುಟುಂಬದ 9 ಮಂದಿ ಹಿಂದು ಧರ್ಮಕ್ಕೆ ವಾಪಸ್‌

Latest Videos
Follow Us:
Download App:
  • android
  • ios