Asianet Suvarna News Asianet Suvarna News

ಒಂದೇ ದಿನ 1 ಕೋಟಿ ಡೋಸ್‌ ಲಸಿ​ಕೆ!

* 88 ಲಕ್ಷ ಡೋಸ್‌ ಈವರೆಗಿನ ದಾಖಲೆಯಾಗಿತ್ತು

* ಒಂದೇ ದಿನ 1 ಕೋಟಿ ಡೋಸ್‌ ಲಸಿ​ಕೆ

Over 1 crore doses India records highest single day vaccine coverage pod
Author
Bangalore, First Published Aug 28, 2021, 10:05 AM IST
  • Facebook
  • Twitter
  • Whatsapp

 

ನವದೆಹಲಿ(ಆ.28): ದೇಶದ ಜನತೆಯನ್ನು ಕೊರೋನಾ ವೈರಸ್‌ನಿಂದ ರಕ್ಷಿಸಲು ಲಸಿಕೆ ಅಭಿಯಾನ ತೀವ್ರಗೊಳಿಸಿರುವ ಕೇಂದ್ರ ಸರ್ಕಾರ ಶುಕ್ರವಾರ ಒಂದೇ ದಿನ ದಾಖಲೆಯ ಒಂದು ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡಿದೆ. ಇದರೊಂದಿಗೆ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ ಈವರೆಗೆ 62 ಕೋಟಿ ಡೋಸ್‌ಗಳನ್ನು ನೀಡಿದಂತಾಗಿದೆ.

"

ಈ ಸಂಬಂಧ ಟ್ವೀಟ್‌ ಮಾಡಿದ ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನಸು​ಖ್‌ ಮಾಂಡವೀಯ ಅವರು, ದೇಶದಲ್ಲಿ ಶುಕ್ರವಾರ ಐತಿಹಾಸಿಕ ದಾಖಲೆಯ ಡೋಸ್‌ಗಳನ್ನು ನೀಡಲಾಗಿದೆ. ಇದಕ್ಕಾಗಿ ದೇಶದ ಜನತೆಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಆ.17ರಂದು ದೇಶಾದ್ಯಂತ 88 ಲಕ್ಷ ಡೋಸ್‌ಗಳನ್ನು ನೀಡಲಾಗಿತ್ತು. ಅದು ಈವರೆಗಿನ ದಾಖಲೆಯಾಗಿತ್ತು. ಆದರೆ ಶುಕ್ರ​ವಾ​ರ 1 ಕೋಟಿ (100,64,032)ಗಿಂತ ಹೆಚ್ಚು ಮಂದಿಗೆ ಲಸಿಕೆ ನೀಡುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ.

ಇನ್ನು ಕರ್ನಾಟಕದಲ್ಲಿ 10.6 ಲಕ್ಷ ಡೋಸ್‌ಗಳು ಹಾಗೂ ಉತ್ತರ ಪ್ರದೇಶದಲ್ಲಿ ಅತಿ ಗರಿ​ಷ್ಠ 28 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ.

ದೇಶದಲ್ಲಿ ಈವರೆಗೆ 18-44 ವರ್ಷದ 23.72 ಕೋಟಿ ಮಂದಿಗೆ ಮೊದಲ ಡೋಸ್‌ ನೀಡಲಾಗಿದ್ದು, 2.45 ಕೋಟಿ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ.

ಮೋದಿ ಹರ್ಷ

ಇಂದು (ಶುಕ್ರವಾರ) ದಾಖಲೆಯ 1 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಲಸಿಕೆ ಪಡೆದ ಹಾಗೂ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆಗಳು.

- ನರೇಂದ್ರ ಮೋದಿ, ಪ್ರಧಾ​ನಿ

Follow Us:
Download App:
  • android
  • ios