ಕೆಲವು ಟೀವಿ ಚಾನೆಲ್‌, ನಿರೂಪಕರಿಗೆ ಇಂಡಿಯಾ ಕೂಟದ ಬಹಿಷ್ಕಾರ

ವಿಪಕ್ಷಗಳ ಇಂಡಿಯಾ ಕೂಟವು ಕೆಲವು ಸುದ್ದಿವಾಹಿನಿಗಳು ಹಾಗೂ ಇತರ ಮಾಧ್ಯಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಬುಧವಾರ ನಡೆದ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

Opposition Team India group has decided to boycott some news channels and news anchors akb

ನವದೆಹಲಿ: ವಿಪಕ್ಷಗಳ ಇಂಡಿಯಾ ಕೂಟವು ಕೆಲವು ಸುದ್ದಿವಾಹಿನಿಗಳು ಹಾಗೂ ಇತರ ಮಾಧ್ಯಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಬುಧವಾರ ನಡೆದ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇಂಡಿಯಾ ಕೂಟದ ಬಗ್ಗೆ ಪದೇ ಪದೇ ಋಣಾತ್ಮಕ ಪ್ರಚಾರ ಮಾಡುತ್ತಿರುವ ಚಾನೆಲ್‌ಗಳನ್ನು ಬಹಿಷ್ಕರಿಸಲಾಗುತ್ತದೆ. ಆ ಚಾನೆಲ್‌ಗಳು ಯಾವುವು ಹಾಗೂ ನಿರೂಪಕರು ಯಾರು ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುತ್ತದೆ ಎಂದು ಕೂಟದ ನಾಯಕರು ಹೇಳಿದ್ದಾರೆ. ಭಾರತ್‌ ಜೋಡೋ ಯಾತ್ರೆ ವೇಳೆಯಲ್ಲಂತೂ ಈ ಚಾನೆಲ್‌ಗಳು ನಕಾರಾತ್ಮಕವಾಗಿ ನಡೆದುಕೊಂಡಿದ್ದವು ಎಂದು ದೂಷಿಸಿದ್ದಾರೆ.

ಗೌತಮ್‌ ಅದಾನಿ ಎನ್‌ಡಿಎ’: ಬಿಜೆಪಿಗೆ ಜೈರಾಂ ರಮೇಶ್‌ ತಿರುಗೇಟು

ನವದೆಹಲಿ: ವಿಪಕ್ಷಗಳ ಮೈತ್ರಿಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಘಮಂಡಿಯಾ’ ಎಂದು ಕರೆದಿರುವುದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ಎನ್‌ಡಿಎ ಮೈತ್ರಿಕೂಟವನ್ನು ಗೌತಮ್‌ ಅದಾನಿ ಎನ್‌ಡಿಎ (GNDA) ಎಂದು ಕರೆದಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jai Ram Ramesh), ‘ಪ್ರಧಾನಿ ಮೋದಿ ಅವರು ಇಂಡಿಯಾ ಕೂಟವನ್ನು ಅವಮಾನಿಸುವ ಕೆಲಸವನ್ನು ಮತ್ತೆ ಮಾಡಿದ್ದಾರೆ. ಈ ಕೂಟವನ್ನು ‘ಘಮಂಡಿಯಾ’ ಎಂದು ಕರೆದಿದ್ದಾರೆ. ಇದಕ್ಕಾಗಿ ಸರ್ಕಾರಿ ಕಾರ್ಯಕ್ರಮವನ್ನು ವೇದಿಕೆ ಮಾಡಿಕೊಂಡಿದ್ದು, ಅವರ ದರ್ಜೆಯನ್ನು ಕೆಳಮಟ್ಟಕ್ಕೆ ತಳ್ಳಿದೆ. ಅವರ ಮೈತ್ರಿಕೂಟವೇ ಗೌತಮ್‌ ಅದಾನಿ ಎನ್‌ಡಿಎ ಆಗಿರುವಾಗ ನಮ್ಮನ್ನು ಟೀಕಿಸುತ್ತಿದ್ದಾರೆ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ವಿಪಕ್ಷಗಳ ಮೈತ್ರಿಕೂಟವನ್ನು ಘಮಂಡಿಯಾ ಎಂದು ಕರೆದಿದ್ದರು. 

 

ಇನ್ಮುಂದೆ ಸುಪ್ರೀಂ ಕೇಸುಗಳ ಮಾಹಿತಿಯೂ ಕ್ಷಣದಲ್ಲೇ ವೆಬ್‌ಸೈಟ್‌ನಲ್ಲಿ ಲಭ್ಯ

Latest Videos
Follow Us:
Download App:
  • android
  • ios