ವಿಮಾನ ನಿಲ್ದಾಣದಲ್ಲಿ ಸಿನ್ಹಾ ಬರ ಮಾಡಿಕೊಂಡ ಕಾಂಗ್ರೆಸ್ ರಾಜ್ಯಕ್ಕೆ ಆಗಮಿಸಿದ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಹೈದರಾಬಾದ್ ಭೇಟಿ ಬಳಿಕ ಬೆಂಗಳೂರಿಗೆ ಆಗಮನ
ಬೆಂಗಳೂರು(ಜು.02): ವಿಪಗಳ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಯಶವಂತ್ ಸಿನ್ಹಾ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಹೈದರಾಬಾದ್ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಸಿನ್ಹಾಗೆ ಕರ್ನಾಟಕ ಕಾಂಗ್ರೆಸ್ ಮುಖಂಡರು ಭರ್ಜರಿ ಸ್ವಾಗತ ನೀಡಿದ್ದಾರೆ.ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶವಂತ್ ಸಿನ್ಹಾರನ್ನು ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಂ, ಕೆಪಿಸಿಸಿ ಉಪಾಧ್ಯಕ್ಷರಾದ ಅಶೋಕ್ ಪಟ್ಟಣ ರಿಂದ ಸ್ವಾಗತ ಕೋರಿದರು.
ಕೆಸಿಆರ್‌ಗೆ ಮೋದಿ ಕಂಡ್ರೆ ಯಾಕಷ್ಟು ಕೋಪ? ಹೈದರಾಬಾದ್‌ಗೆ ಬಂದ ಪ್ರಧಾನಿ ಸ್ವಾಗತಿಸಲು ಗೈರು!
ಬೆಂಗಳೂರಿಗೂ ಮೊದಲು ಹೈದರಾಬಾದ್‌ಗೆ ಭೇಟಿ ನೀಡಿದ್ದ ಯಶವಂತ್ ಸಿನ್ಹಾಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹಾಗೂ ಟಿಆರ್‌ಎಸ್ ಪಕ್ಷ ಭರ್ಜರಿ ಸ್ವಾಗತ ನೀಡಿತ್ತು. ಮೆರವಣಿ ಮೂಲಕ ಟಿಆರ್‌ಎಸ್ ಅಭೂತಪೂರ್ವ ಬೆಂಬಲವನ್ನೂ ಸೂಚಿಸಿತ್ತು.
ಸಿನ್ಹಾ ಸ್ವಾಗತಿಸಿದ ಕೆಸಿಆರ್, ಮೋದಿ ಸ್ವಾಗತಕ್ಕೆ ಬರಲಿಲ್ಲ!: ತೆಲಂಗಾಣದ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದಾರೆ. ಆದರೆ ಕೆಲವು ಗಂಟೆಗಳ ನಂತರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ತೆರಳದೇ ಸಚಿವರೊಬ್ಬರನ್ನು ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಮಧ್ಯಾಹ್ನ ಇದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಅವರನ್ನು ಕಳುಹಿಸಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿ ಪ್ರಧಾನಿ ಆಗಮನದ ವೇಳೆ ಕೆಸಿಆರ್ ಅವರು ಶಿಷ್ಟಾಚಾರ ಮುರಿದಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ ಯಶವಂತ ಸಿನ್ಹಾ ಅವರ ಸ್ವಾಗತಕ್ಕೆ ಸ್ವತಃ ಹೋಗಿದ್ದು, ಮೋದಿ ಸ್ವಾಗತಕ್ಕೆ ಸಚಿವರೊಬ್ಬರನ್ನು ಕಳುಹಿಸಿದ್ದಕ್ಕೆ ಬಿಜೆಪಿ ಆಕ್ಷೇಪಿಸಿದೆ.
ರಾಷ್ಟ್ರಪತಿ ಚುನಾವಣೆಗೆ ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹ ನಾಮಪತ್ರ, ಟಿಆರ್‌ಎಸ್ ಬೆಂಬಲ!
ಮುರ್ಮು, ಸಿನ್ಹಾ ಮಾತ್ರ ರಾಷ್ಟ್ರಪತಿ ಕಣಕ್ಕೆ
ರಾಷ್ಟ್ರಪತಿ ಚುನಾವಣೆಯಲ್ಲಿ ಸಲ್ಲಿಸಿದ 115 ನಾಮಪತ್ರಗಳ ಪರಿಶೀಲನೆ ಬಳಿಕ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾರ ನಾಮಪತ್ರ ಮಾತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಲಾಗಿದ್ದು, ಹೀಗಾಗಿ ಇವರಿಬ್ಬರು ಮಾತ್ರವೇ ಜು.18ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ, ಬುಧವಾರದವರೆಗೆ ಸಲ್ಲಿಕೆಯಾದ 94 ಜನರ 115 ನಾಮಪತ್ರಗಳನ್ನು ಪರಿಶೀಲಿಸಿದ್ದು, ಅಗತ್ಯ ಮಾನದಂಡಗಳನ್ನು ಪೂರೈಸದ 107 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.
ಮುರ್ಮು ಹಾಗೂ ಸಿನ್ಹಾ ಅವರ ತಲಾ 4 ಸೆಟ್ ನಾಮಪತ್ರಗಳು ಮಾತ್ರ ಎಲ್ಲ ಅಗತ್ಯ ಮಾನದಂಡಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವುಗಳನ್ನು ಸ್ವೀಕರಿಸಲಾಗಿದೆ. ಜು.2 ರಂದು ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಅಂದೇ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.ಮುರ್ಮು ಹಾಗೂ ಸಿನ್ಹಾ ಹೊರತುಪಡಿಸಿ ಮುಂಬೈಯ ಸ್ಲಮ್ ಕಾರ್ಮಿಕ, ಲಾಲು ಪ್ರಸಾದ್ ಹೆಸರುಳ್ಳ ಬಿಹಾರದ ವ್ಯಕ್ತಿ, ದೆಹಲಿಯ ಪ್ರೊಫೆಸರ್ ಹಾಗೂ ತಮಿಳುನಾಡಿದ ಸಾಮಾಜಿಕ ಕಾರ್ಯಕರ್ತ ನಾಮಪತ್ರ ಸಲ್ಲಿಸಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಇವರ ನಾಮಪತ್ರಗಳು ತಿರಸ್ಕೃತವಾಗಿವೆ.
