ರಾಷ್ಟ್ರಪತಿ ಚುನಾವಣೆಗೆ ಗಣ್ಯರ ಸಮ್ಮುಖದಲ್ಲಿ ಸಿನ್ಹ ನಾಮಪತ್ರ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ದ ಸ್ಪರ್ಧೆ ಕೊನೆ ಕ್ಷಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಬೆಂಬಲ
ನವದೆಹಲಿ(ಜೂ.27): ರಾಷ್ಟ್ರಪತಿ ಚುನಾವಣೆ ಕಣ ರಂಗೇರಿದೆ. ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ ಇಂದು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರ ಎನ್‌ಸಿ ಫಾರೂಖ್ ಅಬ್ದುಲ್ಲಾ, CPI(M)ನ ಸಿತಾರಾಂ ಯಚೂರಿ, DMK ರಾಜಾ, ಟಿಆರ್‌ಎಸ್ ಕೆಟಿ ರಾಮರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳು ಸೂಚಿಸಿದ ಆರಂಭಿಕ 3 ಅಭ್ಯರ್ಥಿಗಳು ಆಫರ್ ತಿರಸ್ಕರಿಸಿದ ಕಾರಣ ನಾಲ್ಕನೇ ಅಭ್ಯರ್ಥಿಯಾಗಿ ಯಶವಂತ್ ಸಿನ್ಹ ಸೂಚಿಸಿತ್ತು. ಆದರೆ ಬಿಜೆಪಿ ಮಹತ್ವದ ಸಭೆ ನಡೆಸಿ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಹೆಸರನ್ನು ಸೂಚಿಸಿತ್ತು. ಇದು ವಿಪಕ್ಷಗಳ ಲೆಕ್ಕಾಚಾರ ತಲೆಕೆಳಗೆ ಮಾಡಿತ್ತು.
NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಳ್ಳಿಯಲ್ಲಿ ವಿದ್ಯುತ್ ಇಲ್ಲ, ಈಗ ಎಚ್ಚೆತ್ತ ಒಡಿಶಾ ಸರ್ಕಾರ!
ಮಾಯಾವತಿಯ ಬಿಎಸ್‌ಪಿ ಹಾಗೂ ಒಡಿಶಾದ ಬಿಜೆಡಿ ಆದಿವಾಸಿ ಸಮುದಾಯದ ನಾಯಕಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದೆ. ಇಂದು ಯಶವಂತ್ ಸಿನ್ಹ ನಾಮಪತ್ರಕ್ಕೆ ಆಮ್ ಆದ್ಮಿ ಪಾರ್ಟಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ತನ್ನ ಪ್ರತಿನಿಧಿಗಳನ್ನು ಕಳುಹಿಸಿಲ್ಲ. ಹೀಗಾಗಿ ಈ ಎರಡು ಪಕ್ಷಗಳ ಬೆಂಬಲ ಯಾರಿಗೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.
ಜು.18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ನನ್ನ ವೈಯಕ್ತಿಕ ಸ್ಪರ್ಧೆಗಿಂತ ಪ್ರಸ್ತುತ ಸರ್ಕಾರದ ಸರ್ವಾಧಿಕಾರಕ್ಕೆ ಸವಾಲಾಗುವ ದಿಟ್ಟಹೆಜ್ಜೆಯಾಗಿದೆ ಎಂದು ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಸಂಸದ ಮತ್ತು ನನ್ನ ಪುತ್ರ ಜಯಂತ್ ಸಿನ್ಹಾ ಬೆಂಬಲ ಪಡೆಯದೇ ಇರುವುದು ‘ಧರ್ಮ ಸಂಕಟ’ ಪರಿಸ್ಥಿತಿಯಲ್ಲ. ನಾನು ‘ರಾಷ್ಟ್ರಧರ್ಮ’ ನಿಭಾಯಿಸುತ್ತೇನೆ, ಮಗ ‘ರಾಜಧರ್ಮ’ ನಿಭಾಯಿಸಲಿ ಎಂದಿದ್ದಾರೆ.
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಜು.1ರಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ. ಜೊತೆಗೆ ಬುಡಕಟ್ಟು ಸಮುದಾಯ ಹೆಚ್ಚಿರುವ ಪ್ರದೇಶದಿಂದ ಅವರು ತಮ್ಮ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ಈಗಾಗಲೇ ಸೋನಿಯಾ, ಮಮತಾ, ಪವಾರ್ ಸೇರಿ ಹಲವು ನಾಯಕರಿಗೆ ಕರೆ ಮಾಡಿ ಬೆಂಬಲ ಯಾಚಿಸಿರುವ ದ್ರೌಪದಿ ಅವರು ಶೀಘ್ರವೇ ಡಿಎಂಕೆ, ಟಿಆರ್‌ಎಸ್ ಮೊದಲಾದ ಪಕ್ಷಗಳ ನಾಯಕರಿಗೂ ಕರೆ ಮಾಡಿ ಬೆಂಬಲ ಯಾಚಿಸಲಿದ್ದಾರೆ ಎನ್ನಲಾಗಿದೆ. ಜು.18ರಂದು ಮತದಾನ ನಡೆಯಲಿದೆ.
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಪ್ರಧಾನಿ ಮೋದಿ!
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 29. ನಾಮಪ್ತರ ಹಿಪಡೆಯಲು ಜುಲೈ 2ರ ವರೆಗೆ ಅವಕಾಶವಿದೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ಕ್ಕೆ ಫಲಿತಾಂಶ ಹೊರಬೀಳಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ 5 ವರ್ಷಗಳ ಅವದಿ ಜುಲೈ 21ಕ್ಕೆ ಅಂತ್ಯಗೊಳ್ಳಲಿದೆ.
