ಪಣಜಿ[ಫೆ.10]: ಹಿಂದು ಸಮುದಾಯವೆಂದರೆ, ಬಿಜೆಪಿ ಎಂದು ಭಾವಿಸಬೇಕಿಲ್ಲ. ಅಲ್ಲದೆ, ಬಿಜೆಪಿ ವಿರೋಧಿಸುವವರು ಹಿಂದುಗಳ ವಿರೋಧಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆರ್‌ಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ ಜೋಶಿ ಹೇಳಿದ್ದಾರೆ. ಬಿಜೆಪಿಯ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್‌ನ ಈ ಹೇಳಿಕೆ ಭಾರೀ ಸಂಚಲನವನ್ನುಂಟು ಮಾಡಿದೆ.

ಭಾರತದಲ್ಲಿ ಹಿಂದೂ ಸಮುದಾಯದೊಂದಿಗೆ ವ್ಯವಹರಿಸಿ: ಆರ್‌ಎಸ್‌ಎಸ್‌ ನಾಯಕ!

ಗೋವಾದಲ್ಲಿ ನಡೆದ ವಿಶ್ವಗುರು ಭಾರತ ಕಾರ್ಯಕ್ರಮದಲ್ಲಿ ಹಿಂದುಗಳು ಏಕೆ ತಮ್ಮ ಸ್ವಂತ ಸಮುದಾಯದ ವಿರೋಧಿಗಳಾಗುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಭಯ್ಯಾಜಿ, ಬಿಜೆಪಿ ವಿರೋಧಿಸುವವರನ್ನು ಹಿಂದುಗಳ ವಿರೋಧಿಗಳಂತೆ ಭಾವಿಸಬೇಕಿಲ್ಲ. ರಾಜಕೀಯ ಹೋರಾಟ ನಡೆಯುತ್ತಲೇ ಇರುತ್ತದೆ. ಅದನ್ನು ಧರ್ಮಕ್ಕೆ ಜೋಡಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇಮಕ

ಕೆಲವರು ಸ್ವಾಮಿ ವಿವೇಕಾನಂದ ಅವರ ಹಿಂದುತ್ವ ಶ್ರೇಷ್ಠ ಎನ್ನುತ್ತಾರೆ ಮತ್ತೆ ಕೆಲವರು ವಿನಾಯಕ ಸಾವರ್ಕರ್‌ ಅವರದ್ದು ಶ್ರೇಷ್ಠ ಎಂದು ಪ್ರತಿಪಾದಿಸುವರು. ಪಶ್ಚಿಮಬಂಗಾಳ ಮತ್ತು ಕೇರಳದಲ್ಲಿ ಕಮ್ಯುನಿಸ್ಟ್‌ಗಳು ತಾವು ಹಿಂದುಗಳ ವಿರೋಧಿಗಳೆಂದು ಹೇಳಿಕೊಳ್ಳುತ್ತಾರೆ. ಆದರೆ, ಬಂಗಾಳದಲ್ಲಿ ದುರ್ಗಾಪೂಜೆ ಮಂಡಲದ ಮುಖ್ಯಸ್ಥರಾಗಲು ಹಾಗೆಯೇ, ಕೇರಳದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದರು.