ಒಮಿಕ್ರೋನ್‌ ಭೀತಿಯ ಹಿನ್ನೆಲೆಯಲ್ಲಿ ಚೆನ್ನೈ ಉಪನಗರ ರೈಲ್ವೆ ಸೇವೆಯನ್ನು ಬಳಸಲು ಪ್ರಯಾಣಿಕರಿಗೆ ಕೋವಿಡ್‌ ಲಸಿಕೆಯ ಎರಡೂ ಡೋಸುಗಳನ್ನು ಕಡ್ಡಾಯಗೊಳಿಸಲಾಗಿದೆ. ಜ. 10ರಿಂದ ಈ ಹೊಸ ನಿಯಮವು ಜಾರಿಗೆ ಬರಲಿದ್ದು ಜ. 31 ರವರೆಗೆ ಜಾರಿಯಲ್ಲಿರಲಿದೆ.

ಚೆನ್ನೈ (ಜ. 09): ಒಮಿಕ್ರೋನ್‌ (Omicron) ಭೀತಿಯ ಹಿನ್ನೆಲೆಯಲ್ಲಿ ಚೆನ್ನೈ ಉಪನಗರ ರೈಲ್ವೆ ಸೇವೆಯನ್ನು ಬಳಸಲು ಪ್ರಯಾಣಿಕರಿಗೆ ಕೋವಿಡ್‌ ಲಸಿಕೆಯ (Covid Vaccine) ಎರಡೂ ಡೋಸುಗಳನ್ನು (Double Dose) ಕಡ್ಡಾಯಗೊಳಿಸಲಾಗಿದೆ. ಜ. 10ರಿಂದ ಈ ಹೊಸ ನಿಯಮವು ಜಾರಿಗೆ ಬರಲಿದ್ದು ಜ. 31 ರವರೆಗೆ ಜಾರಿಯಲ್ಲಿರಲಿದೆ.

ಜ. 10ರಿಂದ ಕೋವಿಡ್‌ ಎರಡೂ ಲಸಿಕೆ ಪಡೆದ ಪ್ರಮಾಣ ಪತ್ರವನ್ನು (Certificate) ಹಾಗೂ ಗುರುತಿನ ಚೀಟಿಯನ್ನು ಹೊಂದಿರುವವರಿಗೆ ಮಾತ್ರ ರೈಲ್ವೆಯಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದು. ಪ್ರಯಾಣಿಕರು ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಅಷ್ಟೇ ಅಲ್ಲದೇ ಪ್ರಯಾಣಿಕರು ರೇಲ್ವೆ ಆವರಣದಲ್ಲಿ ಮಾಸ್ಕ್‌ ಧರಿಸದಿದ್ದರೆ 500 ರೂ. ದಂಡವನ್ನು ವಿಧಿಸಲಾಗುವುದು ಎಂದು ದಕ್ಷಿಣ ರೈಲ್ವೆ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

3ನೇ ಡೋಸ್‌ ನೀಡಲು ಸರ್ಕಾರಕ್ಕೆ IMA ಆಗ್ರಹ: ಒಮಿಕ್ರೋನ್‌ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಆರೋಗ್ಯ ಕಾರ್ಯಕರ್ತರು (Healthe Workers) ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮೂರನೇ ಡೋಸ್‌ ನೀಡಬೇಕೇ? ಬೇಡವೇ ಎಂಬುದರ ಕುರಿತು ಇನ್ನೂ ಗೊಂದಲ ಮುಂದುವರೆದಿದೆ. ಮೇಲ್ಕಂಡ ವರ್ಗಕ್ಕೆ ಹೆಚ್ಚುವರಿ ಡೋಸ್‌ ಕೋವಿಡ್‌ ಲಸಿಕೆ ನೀಡುವ ಸಂಬಂಧ ಘೋಷಣೆ ಮಾಡುವಂತೆ ಭಾರತೀಯ ವೈದ್ಯ ಸಂಘ ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ. 

Railway News: ನವೀಕೃತ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಇದೇ ವೇಳೆ 12-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾಪಕ್ಕೆ ಚುರುಕು ನೀಡುವಂತೆ ಸೂಚಿಸಿದೆ. ಸದ್ಯ ಕೋವಿಡ್‌ ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಮೂರನೆ ಅಲೆಯು ವ್ಯಾಪಕವಾಗಿ ಹರಡಬಹುದು ಎಂದು ಎಚ್ಚರಿಸಿದೆ. ಆದರೆ ಇದೇ ವಿಷಯದ ಕುರಿತು ಸಮಾಲೋಚನೆ ನಡೆಸಲು ಸೋಮವಾರ ಇಲ್ಲಿ ಸಭೆ ಸೇರಿದ್ದ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಗುಂಪಿನ ಸಭೆ (ಎನ್‌ಟಿಜಿಎ) ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. 

ಆದರೆ ಈ ಸಭೆಯಲ್ಲಿ ರೋಗದ ವಿರುದ್ಧ ಪ್ರತಿಕಾಯ ಸಾಮರ್ಥ್ಯವಿಲ್ಲದವರಿಗೆ ಹೆಚ್ಚುವರಿ ಡೋಸ್‌ ಕುರಿತು ಸದಸ್ಯರ ಮಧ್ಯೆ ಒಮ್ಮತ ಮೂಡಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಬೂಸ್ಟರ್‌ ಡೋಸ್‌ ಕುರಿತಾಗಿ ಹೆಚ್ಚಿನ ಅಧ್ಯಯನಗಳ ಅಗತ್ಯದ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಬೂಸ್ಟರ್‌ ಡೋಸ್‌ ಕುರಿತಾಗಿ ಚರ್ಚೆ ನಡೆಸಲಾಗಲಿಲ್ಲ ಎನ್ನಲಾಗಿದೆ.

Bharat Biotech: ಮಕ್ಕಳಿಗೆ ಕೋವ್ಯಾಕ್ಸಿನ್‌ ಬದಲು ಬೇರೆ ಲಸಿಕೆ ನೀಡಬೇಡಿ

ಒಮಿಕ್ರೋನ್‌ ಸಾಮರ್ಥ್ಯ 3 ಪಟ್ಟು ಹೆಚ್ಚು: ಲ್ಟಾರೂಪಾಂತರಿಗೆ ಹೋಲಿಸಿದರೆ ಒಮ್ಮೆ ಸೋಂಕು ತಗುಲಿದವರಿಗೆ 90 ದಿನಗಳ ಬಳಿಕ ಮರು ಸೋಂಕು ತಗುಲಿಸುವ ಸಾಮರ್ಥ್ಯವು ಡೆಲ್ಟಾವೈರಸ್‌ಗೆ ಹೋಲಿಸಿದರೆ ಒಮಿಕ್ರೋನ್‌ ರೂಪಾಂತರಿಗೆ ಮೂರು ಪಟ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್‌ ಅಭಿಪ್ರಾಯ ಪಟ್ಟಿದ್ದಾರೆ. ಒಮಿಕ್ರೋನ್‌ ಪ್ರಕರಣಗಳ ಏರಿಕೆ ಹಾಗೂ ಸೋಂಕಿತರು ಆಸ್ಪತ್ರೆಗೆ ದಾಖಲಾದ ಸಂಖ್ಯೆಗಳಲ್ಲಿ ಏರಿಕೆಯ ನಡುವೆ ಸಾಕಷ್ಟು ದಿನಗಳ ಅಂತರ ಕಂಡುಬಂದಿದೆ. ಹೀಗಾಗಿ ಒಮಿಕ್ರೋನ್‌ ಪ್ರಭಾವ ಎಷ್ಟುತೀವ್ರವಾಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಎರಡರಿಂದ ಮೂರು ವಾರಗಳ ಕಾಲ ಕಾಯಬೇಕಾಗಿದೆ ಎಂದಿದ್ದಾರೆ.