ನವದೆಹಲಿ(ಮೇ 13) ಸ್ವದೇಶಿ ವಸ್ತುಗಳ ಮಾರಾಟ , ತಯಾರಿಕೆಗೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ತೆಗೆುಕೊಂಡಿರುವುದು ಗೊತ್ತೆ ಇದೆ.  ಪ್ರಧಾನಿ ನರೇಂದ್ರ ಮೋದಿ ಅತಿದೊಡ್ಡ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರ ನಂತರ ಕೇಂದ್ರ ಗೃಹ ಇಲಾಖೆ ಸಹ ಬದಲಾವಣೆಯ ಕ್ರಮವೊಂದನ್ನು ತೆಗೆದುಕೊಂಡಿದೆ.

ಇನ್ನು ಮುಂದೆ ಸೆಂಟ್ರಲ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್ ಗಳಲ್ಲಿ ಜೂನ್ 1 ರಿಂದ ದೇಶಿಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಟ್ವೀಟ್ ಮೂಲಕ ವಿಚಾರ ತಿಳಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ  ಜೂನ್ 1 ರಿಂದ ದೇಶಿಯ ಉತ್ಪನ್ನ ಬಳಕೆ ಎಂದು ಹೇಳಿದ್ದಾರೆ.

ಸ್ವಾವಲಂಬಿ ಭಾರತಕ್ಕೆ ಮದ್ದು ಯಾವುದೆಂದು ತಿಳಿಸಿದ ವಿತ್ತ ಸಚಿವೆ

ದೇಶ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶಿಯ ಉತ್ಪನ್ನಬಳಕೆ ಮಾಡಲು ಕರೆ ಕೊಟ್ಟಿದ್ದಾರೆ.  ಮುಂಬರುವ ಸವಾಲುಗಳನ್ನು ಎದುರಿಸಲು ದೇಶ ಸನ್ನಧ್ಧವಾಗಬೇಕಿದ್ದು ಇಂದಿನಿಂದಲೇ ಅಭ್ಯಾಸ ಆಗಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

 ಪ್ರಧಾನಿ ದೇಶವನ್ನು ಸ್ವಾವಲಂಭಿಯನ್ನಾಗಿ ಮಾಡಲು ಮತ್ತು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಮನವಿ ಮಾಡಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ನೇತೃತ್ವ ವಹಿಸಲು ಖಂಡಿತವಾಗಿಯೂ ದಾರಿ ಮಾಡಿಕೊಡಲಿದೆ" ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಮಿತ್ ಶಾ, " ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ದೇಶಾದ್ಯಂತ ಇರುವ ಸುಮಾರು 10 ಲಕ್ಷ CAPF ಸಿಬ್ಬಂದಿಗಳ 50 ಲಕ್ಷ ಕುಟುಂಬಸ್ಥರು ಕೇವಲ ಸ್ವದೇಶಿಯನ್ನೇ ಬಳಸಲಿದ್ದಾರೆ.  ಎಲ್ಲ ಭಾರತೀಯರು ಸ್ವದೇಶಿ ಉತ್ಪನ್ನ ಬಳಕೆಯ ನಿರ್ಧಾರನ ಕೈಗೊಂಡರೆ ಮುಂದಿನ 5 ವರ್ಷಗಳಲ್ಲಿ ದೇಶ ಸುಭಿಕ್ಷವಾಗಲಿದೆ.