ರಾಂಚಿ(ಮೇ.23): ಕೊರೋನಾ ಹಿನ್ನೆ​ಲೆ​ಯಲ್ಲಿ ಮದುವೆ ಸಮಾ​ರಂಭ​ಗ​ಳಿಗೆ ನಿಯಂತ್ರಣ ಹೇರಿದ್ದರೂ ಅನೇಕ ಮಂದಿ ನೆಂಟ​ರಿ​ಷ್ಟ​ರನ್ನು ಸೇರಿಸಿ ಆಡಂಬ​ರದ ಮದುವೆ ಆಗು​ತ್ತಿದ್ದಾರೆ. ಆದ​ರೆ, ಜಾರ್ಖಂಡ್‌ ಶಾಸ​ಕ​ರೊ​ಬ್ಬರು ಸರ್ಕಾ​ರದ ನಿಯ​ಮ​ದಂತೆ ಕೇವಲ 11 ಮಂದಿಯ ಸಮ್ಮು​ಖ​ದಲ್ಲಿ ಮದುವೆ ಆಗುವ ಮೂಲಕ ಇತರ​ರಿಗೆ ಮಾದರಿ ಆಗಿದ್ದಾರೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

ರಾಂಚಿ​ಯಲ್ಲಿ ಗುರು​ವಾರ ದಾಂಪತ್ಯ ಜೀವ​ನಕ್ಕೆ ಕಾಲಿಟ್ಟ ನಮನ್‌ ಬಿಕ್ಸಲ್‌ ಕೊಂಗಾರಿ ಅವರ ಮದುವೆಗೆ ಬಂದಿದ್ದು ಕೇವಲ 11 ಮಂದಿ ಮಾತ್ರ. ಹೆಣ್ಣಿನ ಕಡೆ​ಯ ಸಂಬಂಧಿ​ಕರು 6 ಮಂದಿ ಹಾಗೂ ಗಂಡಿನ ಕಡೆ​ಯವ​ರಿಂದ 5 ಮಂದಿ ಮದು​ವೆ​ಯಲ್ಲಿ ಪಾಲ್ಗೊಂಡಿ​ದ್ದರು. ಅಲ್ಲದೇ ಕೊಂಗಾರಿ ಅವ​ರು ವಧು​ವಿನ ಊರಾದ ದಿಬ್ಡಿಹ್‌ನಿಂದ 100 ಕಿ.ಮೀ.ದೂರದ ರಾಂಚಿಗೆ ತಾವೇ ಸ್ವತಃ ಕಾರು ಚಲಾ​ಯಿ​ಸಿ​ಕೊಂಡು ಬಂದು ಹಸೆ​ಮಣೆ ಏರಿ​ದ್ದಾ​ರೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಜಾರ್ಖಂಡ್‌​ನಲ್ಲಿ ಮೇ 27ರವ​ರೆಗೆ ಲಾಕ್‌​ಡೌನ್‌ ಜಾರಿ ಮಾಡ​ಲಾ​ಗಿದ್ದು, ಮದು​ವೆಗೆ ಕೇವಲ 11 ಮಂದಿ ಮಾತ್ರ ಭಾಗ​ವ​ಹಿ​ಸು​ವು​ದಕ್ಕೆ ಅವ​ಕಾಶ ನೀಡ​ಲಾ​ಗಿದೆ. ಆದರೆ, ಬಹು​ತೇಕ ಕಡೆ​ಗ​ಳಲ್ಲಿ ಈ ನಿಯಮ ಪಾಲನೆ ಆಗು​ತ್ತಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona