ಒಡಿಶಾ(ಆ.01): ಆನ್‌ಲೈನ್‌ ತರಗತಿಗಳು ಆರಂಭವಾದ ಮೇಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಗೋಳು ಹೇಳತೀರದು. ಮನೆ ಏರಿ, ಬೆಟ್ಟಏರಿ ಮೊಬೈಲ್‌ ನೆಟ್‌ವರ್ಕ್ ಹುಡುಕುವ ಸ್ಥಿತಿಯಲ್ಲಿ ಇದ್ದಾರೆ ವಿದ್ಯಾರ್ಥಿಗಳು. 

ಇನ್ನು ಒಡಿಶಾದ ಸಂಬಲ್‌ಪುರ ಜಿಲ್ಲೆಯ ಲಾಂಡಿಬಲ್‌ ವಿದ್ಯಾರ್ಥಿಗಳು ಇದೀಗ ನಿತ್ಯವೂ 150 ಅಡಿ ಎತ್ತರದ ವಾಂಟರ್‌ ಟ್ಯಾಂಕ್‌ ಏರಿ ಪಾಠ ಆಲಿಸುತ್ತಿದ್ದಾರೆ. ಪ್ರಾಣವನ್ನೇ ಒತ್ತೆಯಿಟ್ಟು ಮೊಬೈಲ್‌, ಹೆಡ್‌ಫೋನ್‌, ಪುಸ್ತಕ ಮತ್ತು ಪೆನ್ನುಗಳ ಜೊತೆ ಹತ್ತಿರದಲ್ಲಿರುವ 150 ಅಡಿ ಎತ್ತರವಿರುವ ವಾಟರ್‌ ಟ್ಯಾಂಕ್‌ ಏರುತ್ತಾರೆ. 

ಇಷ್ಟು ಎತ್ತರದ ವಾಟರ್‌ ಟ್ಯಾಂಕ್‌ ಏರುವ ವಿದ್ಯಾರ್ಥಿಗಳು ಕೆಲವು ವೇಳೆ ತಲೆ ಸುತ್ತು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಷ್ಟಾಗಿಯೂ, ಈ ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳ ಬಳಿ ಆನ್‌ಲೈನ್‌ ಕ್ಲಾಸ್‌ಗೆ ಭಾಗಿಯಾಗಲು ಅಗತ್ಯವಿರುವ ಸ್ಮಾರ್ಟ್‌ಫೋನ್‌ಗಳು ಸಹ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು

ಶಿಕ್ಷಣ ಸಚಿವರೇ.. ಆನ್‌ಲೈನ್ ಶಿಕ್ಷಣ ದುಡ್ಡಿದ್ದವರಿಗೆ ಮಾತ್ರನಾ..?

ಕೊರೋನಾ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಅದರಲ್ಲೂ ಆನ್‌ಲೈನ್ ಶಿಕ್ಷಣ ಬಡವರು ಕಣ್ಣೀರು ಹಾಕುವಂತೆ ಮಾಡಿದೆ. ಒಂದು ಕಡೆ ಜೀವಾನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಸ್ಮಾರ್ಟ್ ಫೋನ್ ಖರೀದಿಸಿದ್ದರೆ, ನಮ್ಮ ರಾಜ್ಯದಲ್ಲಿ ಮಹಿಳೆಯೊಬ್ಬರು ತಮ್ಮ ತಾಳಿಯನ್ನು ಮಾರಿ ಮಕ್ಕಳು ದೂರದರ್ಶನ ಪಾಠ ಕೇಳಲು ಟೀವಿಯನ್ನು ಖರೀದಿಸಿದ್ದನ್ನು ನೋಡಿದ್ದೇವೆ.