Asianet Suvarna News Asianet Suvarna News

ಹೊಟೆಲ್‌ನಲ್ಲಿ 20 ದಿನ ಯುವತಿ ಕೂಡಿ ಹಾಕಿದ ಆನ್‌ಲೈನ್ ಗೆಳೆಯ, ಸಿನಿಮಿಯ ಕಾರ್ಯಾಚರಣೆ!

ಆನ್‌ಲೈನ್ ಮೂಲಕ ಪರಿಚಯವಾದ ಗೆಳೆಯ 18 ವರ್ಷದ ವಿದ್ಯಾರ್ಥಿನಿಯನ್ನು ಹೈದರಾಬಾದ್‌ ಹೊಟೆಲ್‌‌ನಲ್ಲಿ 20 ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ. She ತಂಡದ ಕಾರ್ಯಾಚರಣೆಯಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

Online friend lock girl student in Hyderabad hotel for 20 days police she team rescued ckm
Author
First Published Sep 9, 2024, 12:13 PM IST | Last Updated Sep 9, 2024, 12:13 PM IST

ಹೈದರಾಬಾದ್(ಸೆ.09) ಆನ್‌ಲೈನ್ ಮೂಲಕ ಪರಿಚಯ, ಗೆಳೆತನ ಮಾಡಿಕೊಳ್ಳುವ ಮಂದಿ ಈ ಆಘಾತಕಾರಿ ಘಟನೆಯನ್ನು ತಿಳಿಯಲೇಬೇಕು. 18 ವರ್ಷದ ವಿದ್ಯಾರ್ಥಿನಿಗೆ ಆನ್‌ಲೈನ್ ಮೂಲಕ 19ರ ಹರೆಯದ ಯುವಕನ ಪರಿಚಯವಾಗಿದೆ. ಗೆಳೆತನ ಶುರುವಾಗಿದೆ. ಆದರೆ ಆತನ ಬೇಡಿಕೆ, ಮಾತಗಳು, ಡಬಲ್ ಮೀನಿಂಗ್ ಸಂದೇಶಕ್ಕೆ ರೋಸಿ ಹೋದ ಯುವತಿ ಫ್ರೆಂಡ್‌ಶಿಪ್ ಕಟ್ ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಯುವಕ, ಆಕೆಯನ್ನು ಹೈದರಾಬಾದ್‌ಗೆ ಕರೆಯಿಸಿಕೊಂಡು ಹೊಟೆಲ್ ರೂಂನಲ್ಲಿ ಕೂಡಿ ಹಾಕಿದ್ದಾರೆ. ಬರೋಬ್ಬರಿ 20 ದಿನ ಹೊಟೆಲ್ ರೂಂನಲ್ಲಿ ಕೂಡಿ ಹಾಕಿದ್ದಾನೆ. ಹೈದರಾಬಾದ್ ಪೊಲೀಸ್ ವಿಭಾಗ She(ಶಿ) ಟೀಂ ಕಾರ್ಯಾಚರಣೆಯಿಂದ ಯುವತಿಯನ್ನು ರಕ್ಷಿಸಲಾಗಿದ್ದು, ಯುವಕನ ಬಂಧಿಸಲಾಗಿದೆ.

ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಆನ್‌ಲೈನ್ ಮೂಲಕ ಪರಿಚಯವಾದ 19 ವರ್ಷದ ಯುವಕನ ಜೊತೆ ಚಾಟಿಂಗ್ ಆರಂಭಿಸಿದ್ದಾಳೆ. ಬರುಬರುತ್ತಾ ಯುವಕನ ಡಬಲ್ ಮೀನಿಂಗ್ ಸಂದೇಶಗಳಿಂದ ಯುವತಿ ಕೋಪಗೊಂಡಿದ್ದಾಳೆ. ಇಷ್ಟೇ ಅಲ್ಲ ಆತನ ಅನ್‌ಫಾಲೋ ಮಾಡಿ ಸಂಬಂಧ ಕಡಿದುಕೊಂಡಿದ್ದಾಳೆ. ಇದು ಯುವಕನ ಆಕ್ರೋಶಕ್ಕೆ ಕಾರಣವಾಗಿದೆ.

ಬದುಕು ಅಂತ್ಯಗೊಳಿಸಲು ಮೆಟ್ರೋ ಹಳಿಯಲ್ಲಿ ಓಡಿದ ಯುವತಿ, ರೈಲು ನಿಲ್ಲಿಸಿ ಜೀವ ರಕ್ಷಿಸಿದ ಸಿಬ್ಬಂದಿ!

ಯುವತಿ ಮಾಡಿದ ಮೆಸೇಜ್, ಕೆಲ ಫೋಟೋಗಳನ್ನು ಮುಂದಿಟ್ಟುಕೊಂಡು ಆಕೆಗೆ ಬೆದರಿಕೆ ಹಾಕಿದ್ದಾನೆ. ತಕ್ಷಣವೇ ಹೈದರಾಬಾದ್‌ಗೆ ಬರುವಂತೆ ಬೆದರಿಸಿದ್ದಾನೆ. ಇದೇ ವಿಚಾರ ಪೋಷಕರಿಗೂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಈತನ ಬೆದರಿಕೆಗೆ ಬೆಚ್ಚಿದ ಯುವತಿ ಯುವಕ ಹೇಳಿದ ಭೈನ್ಸಾ ಟೌನ್ ಪ್ರದೇಶಕ್ಕೆ ತೆರಳಿದ್ದಾಳೆ. 

ಯುವತಿಯನ್ನು ಕರೆದುಕೊಂಡು ಹೋಟೆಲ್ ರೂಂನಲ್ಲಿ ಕೂಡಿ ಹಾಕಿದ ಆನ್‌ಲೈನ್ ಗೆಳೆಯ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾನೆ. ಇದೇ ವೇಳೆ ಹೊಟೆಲ್ ರೂಂನಲ್ಲಿ ಕೂಡಿ ಹಾಕಿರುವ ಮಾಹಿತಿ ಹೊರಗೆ ಬಾರದಂತೆ ನೋಡಿಕೊಂಡಿದ್ದಾನೆ. ಮನೆಯವರಿಗೆ ಕರೆ ಮಾಡಲು ಮಾತ್ರ ಆಕೆಗೆ ಫೋನ್ ನೀಡುತ್ತಿದ್ದ. ಹೀಗೆ ಬರೋಬ್ಬರಿ 20 ದಿನ ಕಳೆದಿದೆ. ಇದರ ನಡುವೆ ಪೋಷಕರಿಗೆ ಕರೆ ಮಾಡಲು ಫೋನ್ ನೀಡಿದ ವೇಳೆ ಈಕೆ ಲೋಕೇಶನ್ ಕಳುಹಿಸಿದ್ದಾಳೆ. ಜೊತೆ ಟ್ರಾಪ್ ಆಗಿರುವುದಾಗಿ ಸೂಚಿಸಿದ್ದಾಳೆ.

ತಕ್ಷಣವೆ ಹೈದರಾಬಾದ್ ಮಹಿಳಾ ಪೊಲೀಸ್ ರಕ್ಷಣಾ ತಂಡ ಶಿ(She)ಗೆ ದೂರು ದಾಖಲಿಸಿದ ಪೋಷಕರು ತಮಗೆ ಲಭ್ಯವಿದ್ದ ಮಾಹಿತಿ ನೀಡಿದ್ದಾರೆ. ತಕ್ಷಣವೆ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಹೊಟೆಲ್‌ಗೆ ತೆರಳಿದೆ. ಈ ವೇಳೆ ಹೊಟೆಲ್ ಸಿಬ್ಬಂದಿಗೆ ಆತನ ಕೊಠಡಿಗೆ ಆಹಾರ ನೀಡಲು ಸೂಚಿಸಿದ್ದಾರೆ. ಈ ವೇಳೆ ಸಿಬ್ಬಂದಿ ಜೊತೆಗೆ ಪೊಲೀಸರು ತೆರಳಿದ್ದಾಳೆ. ಬಳಿಕ ಸಿಬ್ಬಂದಿ ಆಹಾರ ನೀಡಲು ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಪೊಲೀಸರು ನುಗ್ಗಿ ಯುವಕನ ವಶಕ್ಕೆ ಪಡೆದಿದ್ದಾರೆ. ಬಳಿಕ ಯುವತಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. 

ಬಾಯ್‌ಫ್ರೆಂಡ್ ಜೊತೆ ಓಡಿ ಹೋಗ್ತಿದ್ದ ಯುವತಿ; ರೈಲಿನೊಳಗೆ ಹೋಗುವಾಗ ಹುಡುಗಿಗೆ ನೆನಾಪದ ಅಪ್ಪ!

Latest Videos
Follow Us:
Download App:
  • android
  • ios