ಬದುಕು ಅಂತ್ಯಗೊಳಿಸಲು ಮೆಟ್ರೋ ಹಳಿಯಲ್ಲಿ ಓಡಿದ ಯುವತಿ, ರೈಲು ನಿಲ್ಲಿಸಿ ಜೀವ ರಕ್ಷಿಸಿದ ಸಿಬ್ಬಂದಿ!

ಯವತಿಯೊಬ್ಬಳು ಮೆಟ್ರೋ ರೈಲು ಬರುತ್ತಿದ್ದಂತೆ ಬದುಕು ಅಂತ್ಯಗೊಳಿಸಲು ರೈಲಿನತ್ತ ಹಳಿಯಲ್ಲೇ ಓಡಿದ್ದಾಳೆ. ಮೆಟ್ರೋ ಲೋಕೋ ಪೈಲೆಟ್, ಸಿಬ್ಬಂದಿಗಳ ಪ್ರಯತ್ನದಿಂದ ಯುವತಿಯನ್ನು ರಕ್ಷಿಸಲಾಗಿದೆ.

Delhi metro diver and staff saves girl who try to end her life after jumps to track ckm

ನವದೆಹಲಿ(ಸೆ.08) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬದುಕು ಅಂತ್ಯಗೊಳಿಸಲು ಯವತಿಯೊಬ್ಬಳು ಮೆಟ್ರೋ ರೈಲು ಬರುತ್ತಿದ್ದಂತೆ ಹಳಿಯಲ್ಲಿ ಓಡಿದ ಘಟನೆ ನಡೆದಿದೆ. ಆದರೆ ಮೆಟ್ರೋ ರೈಲು ಲೋಕೋಪೈಲೆಟ್ ತಕ್ಷಣವೇ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ. ಇತ್ತ ಹಳಿಯಲ್ಲಿ ಪ್ರವಹಿಸುವ ವಿದ್ಯುತ್ ಆಫ್ ಮಾಡಲಾಗಿದೆ. ಅಷ್ಟೇ ವೇಗದಲ್ಲಿ ಸಿಬ್ಬಂದಿಗಳು ತೆರಳಿ ಯುವತಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿದೆ. ಈ ದೃಶ್ಯ ಸೆರೆಯಾಗಿದೆ.

ರಾಜೇಂದ್ರ ನಗರ ಮೆಟ್ರೋ ನಿಲ್ದಾಣದಲ್ಲಿ ಯುವತಿ ಮೆಟ್ರೋಗಾಗಿ ನಿಂತಿದ್ದಾಳೆ. ಆದರೆ ಮೆಟ್ರೋ ದೂರದಿಂದ ಬರುತ್ತಿರುವುದು ಖಚಿತವಾಗುತ್ತಿದ್ದಂತೆ ಯುವತಿ ಏಕಾಏಕಿ ಹಳಿಗೆ ಹಾರಿ ಮೆಟ್ರೋದತ್ತ ಓಡಿದ್ದಾಳೆ. ತಕ್ಷಣವೇ ಸಿಬ್ಬಂದಿಗಳು ಆಕೆಯನ್ನು ಹಿಡಿಯಲು ಹಿಂದೆ ಓಡಿದ್ದಾರೆ. ಆದರೆ ಯವತಿ ಹಳಿಯಲ್ಲಿ ಆಗಮಿಸುತ್ತಿರುವುದು ಗಮನಿಸಿದ ಮೆಟ್ರೋ ಲೋಕೋ ಪೈಲೆಟ್ ತಕ್ಷಣವೇ ಮೆಟ್ರೋ ನಿಲ್ಲಿಸಿದ್ದಾರೆ. ಇತ್ತ ಸಿಬ್ಬಂದಿಗಳು ಹಳಿಗಳ ಮೇಲೆ ಹರಿಯುತ್ತಿದ್ದ ವಿದ್ಯುತ್ ನಿಲ್ಲಿಸಿದ್ದಾರೆ.

ಮೆಟ್ರೋದಲ್ಲಿ ಯುವತಿಯ ಅಶ್ಲೀಲ ಡ್ಯಾನ್ಸ್, ರೀಲ್ಸ್ ಹುಚ್ಚಿಗೆ ಮಜುಗರಕ್ಕೀಡಾದ ಪ್ರಯಾಣಿಕರು!

ಮೆಟ್ರೋ ರೈಲಿನ ಬಳಿ ತೆರಳುತ್ತಿದ್ದಂತೆ ಯುವತಿಯನ್ನು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಅವಘಡ ತಪ್ಪಿಸಿದ್ದಾರೆ. ಯುವತಿ ಯಾವ ಕಾರಣಕ್ಕಾಗಿ ಹಳಿಯಲ್ಲಿ ಓಡಿದ್ದಾಳೆ. ಮೆಟ್ರೋ ರೈಲಿನತ್ತ ತೆರಳಿದ್ದಾಳೆ ಅನ್ನೋದು ಸ್ಪಷ್ಟವಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಯುವತಿ ಬದುಕು ಅಂತ್ಯಗೊಳಿಸಲು ಈ ರೀತಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯುವತಿಯನ್ನು ವಶಕ್ಕೆ ಪಡೆದ ಸಿಬ್ಬಂದಿಗಳ ವಿರುದ್ದವೇ ಆಕ್ರೋಶಗೊಂಡಿದ್ದಾಳೆ. ಗಲಾಟೆ ಮಾಡಲು ಆರಂಭಿಸಿದ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ಬಂದಿದ್ದಾರೆ. ಬಳಿಕ ಸಿಬ್ಬಂದಿಗಳು ಯುವತಿಗೆ ವಿಶ್ರಾಂತಿಗೆ ಸೂಚಿಸಿ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತು ಯುವತಿ ಯಾವುದೇ ಮಾಹಿತಿಯನ್ನು ಮೆಟ್ರೋ ಸಿಬ್ಬಂದಿಗಳ ಜೊತೆ ಹಂಚಿಕೊಂಡಿಲ್ಲ ಎನ್ನಲಾಗುತ್ತಿದೆ.  ಈ ಘಟನೆ ಕುರಿತ ಪೊಲೀಸ್ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ. 

 

 

ದೆಹಲಿ ಮೆಟ್ರೋದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿದೆ. ಹಳಿಗೆ ಜಿಗಿದ ಘಟನೆ, ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಜಗಳ, ಅಸಭ್ಯ ವರ್ತನೆ ಸೇರಿದಂತೆ ಹಲವು ಅಶಿಸ್ತಿನ ಘಟನೆಗಳು ನಡೆದಿದೆ. ಇದೀಗ ಎಲ್ಲರೂ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. ಯುವತಿ ರೈಲಿನ ಹಳಿಗೆ ಧುಮುಕಿ ರೈಲಿನತ್ತ ಓಡಿದ ಕಾರಣ ಮೆಟ್ರೋ ಕೆಲ ಕಾಲ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಲ ಹೊತ್ತಿನ ಬಳಿಕ ಮೆಟ್ರೋ ಸಂಚಾರ ಆರಂಭಗೊಂಡಿದೆ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಮೆಟ್ರೋ ರೈಲು ಹತ್ತುವ ರೀಲ್ಸ್ ಹುಚ್ಚಾಟದಲ್ಲಿ ಯುವತಿ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲೇ ಬಾಕಿ!

Latest Videos
Follow Us:
Download App:
  • android
  • ios