ಪುದುಚೇರಿ(ಫೆ.21):  ಪುದುಚೇರಿ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ನಡೆಯುತ್ತಿದೆ. ಪಕ್ಷದ ನಡತೆಯಿಂದ ಬೇಸತ್ತು ಒಬ್ಬರ ಹಿಂದೊಬ್ಬರು ನಾಯಕರು ರಾಜೀನಾಮೆ ನೀಡುತ್ತಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಹುಮತವನ್ನೇ ಕಸಿದುಕೊಂಡಿದೆ.  ಇದೀಗ ಮತ್ತೋರ್ವ ಶಾಸಕ ರಾಜೀನಾಮೆ ನೀಡಿದ್ದು, ಪುದುಚೇರಿ ಶಾಸಕಾಂಗ ಸಭೆ ಸಂಖ್ಯಾಬಲ 13ಕ್ಕೆ ಕುಸಿದಿದೆ.

ಫೆ.22ಕ್ಕೆ ವಿಶ್ವಾಸಮತ ಯಾಚನೆಗೆ ಪುದುಚೇರಿ ಸಿಎಂಗೆ ಸೂಚನೆ.

ಪುದುಚೇರಿ ಕಾಂಗ್ರೆಸ್‌ನಲ್ಲಿ 4 ಬಾರಿ ಶಾಸಕನಾಗಿ ಆಯ್ಕೆಯಾದ ಕೆ ಲಕ್ಷ್ಮಿನಾರಾಯಣನ್ ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಡತೆ ಹಾಗೂ ಸರಿಯಾದ ಸ್ಥಾನ ಮಾನ ನೀಡಿದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಕೆ ಲಕ್ಷ್ಮಿನಾರಾಯಣನ್ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಈ ರಾಜೀನಾಮೆಯಲ್ಲಿ ಪುದುಚೇರಿ ಶಾಸಕಾಂಗದ ಸಂಖ್ಯಾಬಲ 27 ರಿಂದ 13ಕ್ಕೆ ಕುಸಿದಿದೆ.  ಕಾಂಗ್ರೆಸ್‌ ಹಿರಿಯ ನಾಯಕ, 4 ಬಾರಿ ಗೆದ್ದಿದ್ದರೂ, ಒಂದೇ ಒಂದು ಭಾರಿ ಸಚಿವ ಸ್ಥಾನ ನೀಡಿಲ್ಲ. ಬೇರೆ ಪಕ್ಷ ಸೇರುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೆ ಲಕ್ಷ್ಮಿನಾರಾಯಣನ್ ಹೇಳಿದ್ದಾರೆ.