ಪ್ರವಾಹದಂತೆ ಧುಮ್ಮಿಕ್ಕುವ ಹಿಮ : ಹಿಮಪಾತದ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಮ್ಮುಕಾಶ್ಮೀರದ ಸುಪ್ರಸಿದ್ಧ ಹಿಲ್ ಸ್ಟೇಷನ್ (Hill station) ಆಗಿರುವ ಸೋನಾ ಮಾರ್ಗ್‌ನಲ್ಲಿ(Sonamarg) ಇಂದು ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ  ಓರ್ವ ಕಾರ್ಮಿಕ ನಾಪತ್ತೆಯಾಗಿದ್ದು, ಮತ್ತೊರ್ವ ನಾಪತ್ತೆಯಾಗಿದ್ದಾನೆ.

one killed one missing after Avalanche In Kashmirs Sonamarg visual captured in camera akb

ಜಮ್ಮುಕಾಶ್ಮೀರ: ನೀರಿನ ಪ್ರವಾಹವನ್ನು ನೋಡಿರಬಹುದು. ಧುಮ್ಮಿಕ್ಕುತ್ತಾ ಸಾಗುವ ನೀರಿನ ಪ್ರವಾಹ ತನ್ನ ಎದುರಿಗೆ ಸಿಕ್ಕಿದ್ದೆಲ್ಲವನ್ನು ಕೊಚ್ಚಿಕೊಂಡು ಸಾಗುತ್ತದೆ.  ಆದರೆ ಇದೇ ರೀತಿ ಹಿಮ ಧುಮ್ಮುಕ್ಕುವುದನ್ನು ನೀವು ನೋಡಿದ್ದೀರಾ? ಇಲ್ಲ ಎಂದಾದರೆ ಇಲ್ಲಿದೆ ನೋಡಿ. ಜಮ್ಮು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ ಹಿಮ ಧುಮ್ಮಿಕ್ಕುತ್ತಿರುವ ವಿಡಿಯೋವೊಂದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ. 

ಜಮ್ಮುಕಾಶ್ಮೀರದ ಸುಪ್ರಸಿದ್ಧ ಹಿಲ್ ಸ್ಟೇಷನ್ (Hill station) ಆಗಿರುವ ಸೋನಾ ಮಾರ್ಗ್‌ನಲ್ಲಿ(Sonamarg) ಇಂದು ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ  ಓರ್ವ ಕಾರ್ಮಿಕ ನಾಪತ್ತೆಯಾಗಿದ್ದು, ಮತ್ತೊರ್ವ ನಾಪತ್ತೆಯಾಗಿದ್ದಾನೆ. ಈ ಹಿಮ ಪ್ರವಾಹದ ಭಯಾನಕ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದ್ದು,  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಹಿಮ ಪ್ರವಾಹವೂ ಮಧ್ಯ ಕಾಶ್ಮೀರದ ಗಂಡೇರ್ಬಾಲ್ (Ganderbal) ಜಿಲ್ಲೆಯಲ್ಲಿ ಬರುವ ಸೋನಮಾರ್ಗ್ (Sonamarg) ಪ್ರದೇಶದ ಬಲ್ಟಾಲ್ ಪ್ರದೇಶದಲ್ಲಿ (Baltal area) ಸಂಭವಿಸಿದೆ. 

ಉತ್ತರ ಭಾರತದಲ್ಲಿ ಮುಂದುವರೆದ ಮೈಕೊರೆವ ಚಳಿ: ದಿಲ್ಲಿಯಲ್ಲಿ 1.8 ಡಿಗ್ರಿ ಉಷ್ಣಾಂಶ

 ಇಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಹಿಮ ಪ್ರವಾಹದ ಬಳಿಕ ನಾಪತ್ತೆಯಾಗಿದ್ದು,  ಅವರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. ಮತ್ತೊರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮೃತನನ್ನು ಕಿಷ್ತ್ವಾರ್ (Kishtwar) ನಿವಾಸಿ ಸಂದೀಪ್ (Sandeep) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಕಾರ್ಮಿಕ ಹಿಮದಡಿಗೆ ಆಗಿದ್ದು, ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.  ಈ ಹಿಮಪಾತವೂ ಸಿಂಧ್ ನದಿಯ ಹರಿವನ್ನು ಕೂಡ ತಡೆ ಹಿಡಿದಿದೆ ಎಂದು ವರದಿಯಾಗಿದೆ. 

ವರದಿಯ ಪ್ರಕಾರ,  ಈ ಪ್ರದೇಶದಲ್ಲಿ ಮತ್ತೆರಡು ಹಿಮಪಾತಗಳು ನಡೆದಿದ್ದು, ಅಲ್ಲಿ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ ತಾಜಾ ಹಿಮಪಾತವೂ ಕಾಶ್ಮೀರದಾದ್ಯಂತ ರಾತ್ರಿ ಮಾಮೂಲಿ ಘನೀಕರಿಸುವ ಹಂತದ ಕನಿಷ್ಠ ತಾಪಮಾನಕ್ಕಿಂತಲೂ ಹೆಚ್ಚಿನ ಕಡಿಮೆ ತಾಪಮಾನ ದಾಖಲಿಸಿದೆ.  ಹಾಗೆಯೇ ಶ್ರೀನಗರದಲ್ಲಿ(Srinagar) 3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ,  ಕಾಶ್ಮೀರ ಕಣಿವೆಯ ಹೆಬ್ಬಾಗಿಲು ಎನಿಸಿದ ಖಾಜಿಗುಂಡ್‌ನಲ್ಲಿ (Qazigund) 1.6 ಡಿಗ್ರಿ ತಾಪಮಾನ ದಾಖಲಾಗುವ ಮೂಲಕ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. 

ಹಿಮಪಾತಕ್ಕೆ ಶೋ ಪೀಸ್‌ನಂತಾದ ಕಾರ್ ವಾಶಿಂಗ್ ಸೆಂಟರ್: ವಿಡಿಯೋ ವೈರಲ್

ಹಾಗೆಯೇ ವಾರ್ಷಿಕ ಅಮರನಾಥ್ (Anantnag) ಯಾತ್ರಾದ ಬೇಸ್ ಕ್ಯಾಂಪ್ ಇರುವ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ (Pahalgam) ಪ್ರದೇಶದಲ್ಲಿ ಅಂತ್ಯಂತ ಕನಿಷ್ಠ ಎಂದರೆ ಮೈನಸ್ 0.3 ಗರಿಷ್ಠ ಮೈನಸ್ 3.2 ಡಿಗ್ರಿ ತಾಪಮಾನ ದಾಖಲಾಗಿದೆ. ಹಾಗೆಯೇ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಗುಲ್ಮಾರ್ಗ್‌ನಲ್ಲಿ ಮೈನಸ್ 3 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.  ಪ್ರಸ್ತುತ ಕಾಶ್ಮೀರವೂ ಛಿಲಯಿ ಕಲಾನ್ (Chillai Kalan) ಎಂದು ಕರೆಯಲ್ಪಡುವ  40 ದಿನಗಳ ಅತ್ಯಂತ ಪ್ರತಿಕೂಲ ತಾಪಮಾನದ ಸ್ಥಿತಿ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಅತ್ಯಂತ ಕನಿಷ್ಠ ತಾಪಮಾನ ಹಾಗೂ ತೀವ್ರ ಹಿಮಪಾತವೂ ಆಗುವ ಸಾಧ್ಯತೆ ಇರುತ್ತದೆ.  ಕಳೆದ ಡಿಸೆಂಬರ್ 21ರಿಂದ ಇದು ಆರಂಭವಾಗಿದ್ದು, ಜನವರಿ 30ರವರೆಗೆ ಇರಲಿದೆ. 

 

 

Latest Videos
Follow Us:
Download App:
  • android
  • ios