Asianet Suvarna News Asianet Suvarna News

Terror Attack: ಶ್ರೀನಗರದಲ್ಲಿ ಮತ್ತೇ ಭಯೋತ್ಪಾದಕರ ಅಟ್ಟಹಾಸ : ವ್ಯಕ್ತಿ ಬಲಿ!

*ಭಯೋತ್ಪಾದಕರ ದಾಳಿಗೆ ಓರ್ವ ಬಲಿ
*ಬೋಹ್ರಿ ಕಡಲ್‌ ಸುತ್ತಮುತ್ತಲಿನ ಪ್ರದೇಶ  ಸುತ್ತುವರಿದ ಸೇನೆ
*ಘಟನೆ ಖಂಡಿಸಿ  ಒಮರ್ ಅಬ್ದುಲ್ಲಾ ಟ್ವೀಟ್!

One Civilian shot by terrorists in downtown Srinagar in jammu and Kashmir mnj
Author
Bengaluru, First Published Nov 8, 2021, 10:47 PM IST

ಕಾಶ್ಮೀರ (ನ.8 ) : ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶ್ರೀನಗರದಲ್ಲಿ (Sri Nagar) ಭಯೋತ್ಪಾದಕರ ಗುಂಡಿಗೆ (Terror Attack) ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಸೋಮವಾರ ಸಂಜೆ ಶ್ರೀನಗರದ ಬೋಹ್ರಿ ಕಡಲ್ ಪ್ರದೇಶದ ಅಂಗಡಿಯೊಂದರ ಹೊರಗೆ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮೊಹಮ್ಮದ್ ಇಬ್ರಾಹಿಂ ಖಾನ್ (Mohd Ibrahim Khan) ಎಂದು ಗುರುತಿಸಲಾಗಿದ್ದು ಬಂಡಿಪೋರಾದಲ್ಲಿ (Bandipora) ಸೇಲ್ಸ್‌ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಉಗ್ರರ  ದಾಳಿಯಿಂದ (Terrorist Attack) ಹೊಟ್ಟೆಯಲ್ಲಿ ಗುಂಡು ತಗುಲಿದ್ದ ಇಬ್ರಾಹಿಂರನ್ನು  ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ (Maharaj Hari Singh) ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ.

Terror Attack: ಶ್ರೀನರದಲ್ಲಿ ಉಗ್ರರ ಗುಂಡಿನ ದಾಳಿಗೆ 29 ವರ್ಷದ ಪೊಲೀಸ್ ಹುತಾತ್ಮ!

ಮೃತ ವ್ಯಕ್ತಿ ಕಾಶ್ಮೀರಿ ಪಂಡಿತಯೊಬ್ಬರು (Kashmiri Pandit) ವೈದ್ಯರು ನಡೆಸುತ್ತಿದ್ದ ಔಷಧಾಲಯದಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದ ಬಂದಿದೆ. ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಶ್ರೀನಗರ ಪೊಲೀಸರು ಬೋಹ್ರಿ ಕಡಲ್ (Bohri Kadal) ಪ್ರದೇಶದಲ್ಲಿ ರಾತ್ರಿ 8:10 ರ ಸುಮಾರಿಗೆ "ಭಯೋತ್ಪಾದಕ  ದಾಳಿ ನಡೆದಿದೆ" ಯ ಬಗ್ಗೆ ಮಾಹಿತಿ ಪಡೆದರು ಎಂದು ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಭಯೋತ್ಪಾದಕರ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿರುವುದನ್ನು ಪೋಲಿಸರು ಖಚಿತಪಡಿಸಿಕೊಂಡಿದ್ದಾರೆ.

ಈ ಬಗ್ಗೆ ವಿವಿಧ ಸೆಕ್ಷನ್‌ಗಳ (Section) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ (Investigation) ನಡೆಸಲಾಗುತ್ತಿದೆ. ಅಪರಾಧ (crime) ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸೇನೆ ಸುತ್ತುವರಿದಿದೆ, ದಾಳಿಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಜೆಕೆಎನ್‌ಸಿ (JKNC) ನಾಯಕ ಮತ್ತು ಮಾಜಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah ) ಅವರು, "ಇಬ್ರಾಹಿಂ ಅವರ ಭೀಕರ ಹತ್ಯೆ ಖಂಡನೀಯ ಮತ್ತು ನಾನು ಅದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ. ಅಲ್ಲಾ ಇಬ್ರಾಹಿಂ ಅವರಿಗೆ ಜನ್ನತ್‌ನಲ್ಲಿ ಸ್ಥಾನ ನೀಡಲಿ"  ಎಂದು ಟ್ವೀಟ್‌ನಲ್ಲಿ (Tweet) ಹೇಳಿದ್ದಾರೆ.

 

 

ನವೆಂಬರ 7 ರಂದು ಕೂಡ ಶ್ರೀನಗರದಲ್ಲಿ ಉಗ್ರರ ದಾಳಿ ನಡೆದಿತ್ತು. 29 ವರ್ಷದ ಪೊಲೀಸ್ ಪೇದೆ( Police constable) ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಪೊಲೀಸ್ ಪೇದೆ ಹುತಾತ್ಮರಾಗಿದ್ದರು. ಬಾಟಾಮಾಲೂ ಬಳಿಯ ಎಸ್‌ಡಿ ಕಾಲೋನಿಯಲ್ಲಿರುವ ನಿವಾಸದ ಬಳಿ ಪೊಲೀಸ್ ಪೇದೆ ತೌಸಿಫ್ ಅಹಮ್ಮದ್ ಮೇಲೆ ಗುಂಡಿನ ದಾಳಿ ನಡೆದಿತ್ತು. ರಾತ್ರಿ 8 ಗಂಟೆಗೆ ಉಗ್ರರು ತೌಸಿಫ್ ಅಹಮ್ಮದ್ ಮೇಲೆ ದಾಳಿ(Terror Attack) ನಡೆಸಿದ್ದರು.  ರಕ್ತದ ಮಡುವಿನಲ್ಲಿ ಬಿದ್ದಿದ್ದ ತೌಸಿಫ್ ಅಹಮ್ಮದ್‌ನನ್ನು ತಕ್ಷಣವೇ  ಸ್ಥಳೀಯ SMHS ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೌಸಿಫ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದರು. ತೌಸಿಫ್ ಅಹಮ್ಮದ್ ನಿವಾಸದ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದಾರು. ಇತ್ತ ಅಡಗಿ ಕುಳಿತಿರುವ ಉಗ್ರರಿಗಾಗಿ ಕಾರ್ಯಾಚರಣೆ ಆರಂಭಿಸಲಾಗಿತ್ತು.  ದಾಳಿಯನ್ನು ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫೆರೆನ್ಸ್ ಪಕ್ಷ ಸೇರಿದಂತೆ ಹಲವು ನಾಯಕರು ಖಂಡಿಸಿದ್ದರು.  ಈಗ ಮತ್ತೇ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರ ಬಾಲ ಬಿಚ್ಚಿದ್ದು ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಪೋಲಿಸರು ಹಾಗೂ ಸೇನೆ ದಾಳಿ ನೆಡದ ಪ್ರದೇಶವನ್ನು ಸುತ್ತುವರೆದಿದ್ದು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಒಮರ್‌ ಅಬ್ದುಲ್ಲಾ ಟ್ವೀಟ್‌ ಮಾಡಿ ದಾಳಿಯನ್ನು ಖಂಡಿಸಿದ್ದಾರೆ.

Follow Us:
Download App:
  • android
  • ios