PM Narendra Modi ಒಂದು ಘೋಷಣೆಯಿಂದ ಅರೆಬೆಂದ ಕನಸುಗಳು ನಾಶ: ಕ್ಯಾಪ್ಟನ್‌ ಅಮರಿಂದರ್!

*ಜನರ ಅಭಿಪ್ರಾಯ ಮೋದಿ ಆಲಿಸಿದ್ದಾರೆ
*ಪ್ರಧಾನಿ ಮೋದಿಯಿಂದ ದೃಢ ನಿರ್ಧಾರ
*ಜನರ ಇಚ್ಛೆಗಿಂತ ದೊಡ್ಡದು ಯಾವುದು ಇಲ್ಲ 
*ಕೃಷಿ ಕಾಯ್ದೆ ವಾಪಸ್‌ : ಕ್ಯಾಪ್ಟನ್ ಶ್ಲಾಘನೆ!

One announcement by the PM Narendra Modi punctured half baked dreams  Captain Amarinder Singh mnj

ಪಂಜಾಬ್‌(ನ.23): ನವೆಂಬರ್‌ 19 ಗುರುನಾನಕ್‌  ಜಯಂತಿಯಂದೇ ಪ್ರಧಾನಿ ಮೋದಿ ಕೃಷಿ ಕಾಯ್ದೆ ಹಿಂಪಡೆಯುವುದಾಗಿ (Farm Laws Repealed) ಘೋಷಿಸಿದ್ದರು. ಸರ್ಕಾರ ಅಂತಿಮವಾಗಿ ರೈತರ ಪ್ರತಿಭಟನೆಗೆ ತಲೆಬಾಗಿದ್ದಕ್ಕೆ ವಿರೋಧ ಪಕ್ಷಗಳು (opposition Parties) ಪ್ರತಿಕ್ರಿಯಿಸಿದ್ದು ಅಭಿನಂದನೆ ಕೂಡ ಸಲ್ಲಿಸಿದ್ದವು. ಅಲ್ಲದೇ ರೈತರ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ಹಲವು ನಾಯಕರು ಹೇಳಿದ್ದರು. ಈಗ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಅವರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಶ್ಲಾಘಿಸಿದ್ದಾರೆ, ಈ  ಮಹತ್ವದ ಹೆಜ್ಜೆ ಇಡುವ ಮೂಲಕ "ಸಾರ್ವಜನಿಕರ ಅಭಿಪ್ರಾಯವನ್ನು (Common man's voice) ಆಲಿಸಲಾಗಿದೆ" ಎಂದು ಮೋದಿ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಅರೆಬೆಂದ ಕನಸುಗಳನ್ನು ನಾಶ ಮಾಡಿದೆ!

ಟೀಕಾಕಾರರು ಮತ್ತು ಪಾಕಿಸ್ತಾನದ  (Pakistan) ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, "ಪಾಕಿಸ್ತಾನದಂತಹ ರಾಷ್ಟ್ರಗಳು, ಎಂದಿಗೂ ಯುದ್ಧಭೂಮಿಯಲ್ಲಿ ನಮ್ಮನ್ನು ಯಾವತ್ತೂ ಸೋಲಿಸಿಲ್ಲ (defeat) ಮತ್ತು ಸೋಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ನಮ್ಮ ಹೆಮ್ಮೆಯ ಮತ್ತು ದೇಶಭಕ್ತ ರೈತರನ್ನು (Nationalist Farmers) ಬಳಸಿಕೊಂಡು ಪರೋಕ್ಷ  ಯುದ್ಧಕ್ಕೆ (Proxy War) ತಮ್ಮ ತಂತ್ರಗಳನ್ನು ಸಿದ್ಧಪಡಿಸಿ ಸೋಲಿಸಲು ಸಾಧ್ಯವಿಲ್ಲ. ಪ್ರಧಾನಿಯವರ ಈ ಒಂದು ಘೋಷಣೆಯು ಆ ಅರೆಬೆಂದ ಕನಸುಗಳನ್ನು (Half Baked Dreams) ನಾಶ ಮಾಡಿದೆ” ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯಿಂದ ದೃಢ ನಿರ್ಧಾರ!

ಪಂಜಾಬ್‌ನಲ್ಲಿ ರಾಜಕೀಯ (Punjab Politics) ಬೆಳವಣಿಗೆಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಂಗ್ ಕೃಷಿ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ.  “ಪ್ರಧಾನಿ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಯಾವುದೇ ಷರತ್ತುಬದ್ಧ (Condition) ಅಥವಾ ಹಂತಹಂತವಾಗಿ ಕಾಯ್ದೆ ಹಿಂಪಡಿಯದೇ ಇರುವುದು ಉತ್ತಮ ಬೆಳವಣಿಗೆ. ಬೇರೆಯವರಿಂದ ಘೋಷಣೆ ಮಾಡುವುದು ಅಥವಾ ಸಂಸತ್ತಿನ ನೆಲದ (Parliament Floor) ಮೇಲೆ ಅದನ್ನು ಘೋಷಿಸುವುದು ಅತ್ಯಂತ ಸುಲಭ. ಆದರೂ ಸೋಲು-ಗೆಲುವು ಎಂಬ ಯಾವುದೇ ರಾಜಕೀಯ ಪರಿಗಣನೆ ಇಲ್ಲದೆ ಇದನ್ನು ಮಾಡಲಾಗಿದೆ. ಪ್ರಧಾನ ಮಂತ್ರಿಯವರ ನಿರ್ಧಾರವನ್ನು "ಗೆಲುವು" ಅಥವಾ "ಸೋಲು" ಎಂದು ನೋಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ (Democracy), ಜನರ ಇಚ್ಛೆಯನ್ನು ಕೇಳುವುದಕ್ಕಿಂತ ದೊಡ್ಡದು ಯಾವುದೂ ಇಲ್ಲ ಮತ್ತು ಅದನ್ನು ಮಾಡುವ ನಾಯಕನಿಗಿಂತ ದೊಡ್ಡ ಪ್ರಜಾಪ್ರಭುತ್ವವಾದಿ ಇಲ್ಲ ಎಂದು ಅವರು ಹೇಳಿದ್ದಾರೆ.

Farm Laws Repealed : ಪ್ರಧಾನಿ ಮೋದಿ ಮಹಾ ನಿರ್ಧಾರಕ್ಕೆ ಜನ ಕೊಟ್ಟ ಮಾರ್ಕ್ಸ್‌ ಎಷ್ಟು?

ಕೆಲವು ಘಟನೆಗಳು  ನಮಗೆಲ್ಲರಿಗೂ ನೋವುಂಟು ಮಾಡಿವೆ!

ವಿವಾದಾತ್ಮಕ ಕೃಷಿ ಕಾನೂನುಗಳ ರದ್ದತಿಯನ್ನು ಶ್ಲಾಘಿಸಿದ ಸಿಂಗ್, “ಯಾವುದೇ ರಾಷ್ಟ್ರೀಯವಾದಿ, ನಮ್ಮ ರೈತ ಮತ್ತು ಕೃಷಿ ಕ್ಷೇತ್ರದ ಕಲ್ಯಾಣದ ಬಗ್ಗೆ ಯೋಚಿಸುವ ಯಾವುದೇ ವ್ಯಕ್ತಿ ಈ ಘೋಷಣೆಯನ್ನು ಸ್ವಾಗತಿಸುತ್ತಾರೆ. ಈ ಹಿಂದೆ ನಡೆದ ಘಟನೆಗಳಿಗೆ ಅಂತ್ಯ ಹಾಡಲು ಇದು ಉತ್ತಮ ನಿರ್ಧಾರ. ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಘಟನೆಗಳು ನಮಗೆಲ್ಲರಿಗೂ ನೋವುಂಟು ಮಾಡಿದೆ. ನಾನು ಕೂಡ ಧೈರ್ಯ ತೋರಿದ ರೈತರಿಗೆ ಮತ್ತೊಮ್ಮೆ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.  "ಸಿಖ್ ಧರ್ಮವನ್ನು ತಮ್ಮ ಸ್ವಂತ ರಾಜಕೀಯಕ್ಕಾಗಿ ಬಳಸಬೇಡಿ 1980 ರ ದಶಕದ ನೆನಪುಗಳು ಮತ್ತು ಗಾಯಗಳು ಎಲ್ಲರಿಗೂ ಕಾಣುತ್ತವೆ. ಈ ವಿಚಾರದಲ್ಲಿ ಯಾರಾದರೂ ರಾಜಕೀಯ ಮಾಡಿದರೆ ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ." ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.

Farm Laws Repeal: ಸರ್ಕಾರ ಕದನ ವಿರಾಮ ಘೋಷಿಸಿದೆ, ನಾವಲ್ಲ : ಸಂಯುಕ್ತ ಕಿಸಾನ್‌ ಮೋರ್ಚಾ!

Latest Videos
Follow Us:
Download App:
  • android
  • ios