ಓಣಂ ಸ್ಪೆಷಲ್ ಕಾರ್ ಡ್ರೈವ್ ಮೇಳದಲ್ಲಿ 2.5 ಕೆ.ಜಿ. ಓರಿಸ್ಸಾ ಗೋಲ್ಡ್ ಸಾಗಾಟ!
ಕೇರಳದ ಪ್ರಸಿದ್ಧ ಹಬ್ಬ ಓಣಂ ಹಬ್ಬದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವುದಕ್ಕೆಂದು ಡಕೋಟಾ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 2.5 ಕೆ.ಜಿ. ಓರಿಸ್ಸಾ ಗೋಲ್ಡ್ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಶೂರ್ (ಸೆ.09): ಕೇರಳದ ಪ್ರಸಿದ್ಧ ಹಬ್ಬ ಓಣಂ ಹಬ್ಬದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವುದಕ್ಕೆಂದು ಡಕೋಟಾ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 2.5 ಕೆ.ಜಿ. ಓರಿಸ್ಸಾ ಗೋಲ್ಡ್ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಶೂರ್‌ನಲ್ಲಿ ಓಣಂ ಸ್ಪೆಷಲ್ ಡ್ರೈವ್ ವೇಳೆ ಕಾರಿನಲ್ಲಿ ಓರಿಸ್ಸಾ ಗೋಲ್ಡ್ ಎಂದೇ ಖ್ಯಾತವಾಗಿರುವ 2.5 ಕೆಜಿ ತೂಕದ ಗಾಂಜಾದೊಂದಿಗೆ ಮೂವರು ಸಿಕ್ಕಿಬಿದ್ದಿದ್ದಾರೆ. ತ್ರಿಶೂರ್ ಪೊಂಗನಂಗಾಡ್‌ನ ಅನೀಶ್, ಪೀಚಿಯ ವಿಷ್ಣು ಮತ್ತು ತಾಳಿಕುಲಂನ ಅಮಲ್ ಬಂಧಿತರು. ಓಣಂ ಹಬ್ಬದಂದು ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇರುವ ಒರಿಸ್ಸಾ ಗೋಲ್ಡ್ ಎಂದು ಕರೆಯಲ್ಪಡುವ ಗಾಂಜಾವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ವತನಪಲ್ಲಿ ಅಬಕಾರಿ ನಿರೀಕ್ಷಕ ವಿ.ಜಿ.ಸುನೀಲ್‌ಕುಮಾರ್ ಮತ್ತು ಅವರ ತಂಡ ಪ್ರಕರಣವನ್ನು ಪತ್ತೆ ಹಚ್ಚಿದೆ.
ಆಧಾರ್ ಕಾರ್ಡ್ ಅಪ್ಡೇಟ್‌ಗೆ ಸೆ.14 ಕೊನೇ ದಿನ: ಇಲ್ಲಿವೆ ನೋಡಿ ಫೋಟೋ ಬದಲಾಯಿಸುವ ಸರಳ ಹಂತಗಳು!
ವತನಪಲ್ಲಿ ಅಬಕಾರಿ ನಿರೀಕ್ಷಕ ವಿ.ಜಿ.ಸುನೀಲ್‌ಕುಮಾರ್ ಮತ್ತು ಅವರ ತಂಡ ಪ್ರಕರಣವನ್ನು ಪತ್ತೆ ಹಚ್ಚಿದೆ. ತಪಾಸಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ಹರಿದಾಸ್, ವಿಜಯನ್, ಸಿವಿಲ್ ಅಬಕಾರಿ ಅಧಿಕಾರಿಗಳಾದ ರಂಜಿತ್, ಬಸಿಲ್, ಅಭಿಜಿತ್, ಸಿವಿಲ್ ಅಬಕಾರಿ ಅಧಿಕಾರಿ ಚಾಲಕ ರಾಜೇಶ್ ಭಾಗವಹಿಸಿದ್ದರು. ಪಾಲಕ್ಕಾಡ್ ಅಬಕಾರಿ ವಿಶೇಷ ತಂಡದ ಸರ್ಕಲ್ ಇನ್ಸ್‌ಪೆಕ್ಟರ್ ಸೂಚನೆ ಮೇರೆಗೆ ನಡೆಸಿದ ತಪಾಸಣೆಯಲ್ಲಿ 18.6 ಕೆಜಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಪಾಲಕ್ಕಾಡ್ ಕಲ್ಮಂಡಪಂ ಮತ್ತು ಸ್ಟೇಡಿಯಂ ಬಸ್ ನಿಲ್ದಾಣದಂತಹ ಸ್ಥಳಗಳಲ್ಲಿ ದಾಳಿ ನಡೆದಿದೆ.