Asianet Suvarna News Asianet Suvarna News

ಭಾರತ-ಪಾಕ್‌ ಗಡಿಯಲ್ಲಿ ಬಿಎಸ್‌ಎಫ್‌ ಸೆರೆ ಹಿಡಿದ ಗಿಡುಗನ ಕಾಲಿನಲ್ಲಿತ್ತು 15 ಲಕ್ಷದ ಜಿಪಿಎಸ್‌!

ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಶಂಕಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಗಿಡುಗವನ್ನು ಗಡಿ ಭದ್ರತಾ ಪಡೆಯ ಸೈನಿಕರು ಸೆರೆ ಹಿಡಿದ್ದಾರೆ. ಈ ವೇಳೆ ಗಿಡುಗನ ಕಾಲಿನಲ್ಲಿ ಜಿಪಿಎಸ್‌ ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು 15 ಲಕ್ಷ ರೂಪಾಯಿ ಎನ್ನಲಾಗಿದೆ.

on Indo-Pak border BSF captures falcon fitted with GPS With training costs Rs 15 lakh san
Author
First Published Feb 6, 2024, 10:59 PM IST

ನವದೆಹಲಿ (ಫೆ.6): ರಾಜಸ್ಥಾನದ ಜೈಸಲ್ಮೇರ್‌ನ ಶಹಗಢ್ ಪ್ರದೇಶದ ಪಕ್ಕದಲ್ಲಿರುವ ಇಂಡೋ-ಪಾಕ್ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರು ಭಾನುವಾರ ಸಂಜೆ ಅನುಮಾನಾಸ್ಪದ ಗಿಡುಗವನ್ನು ಸೆರೆಹಿಡಿದ್ದಾರೆ. ತರಬೇತಿ ಪಡೆದಿರುಉವ ಗಿಡುಗ ಇದಾಗಿದೆ ಎಂದು ಬಿಎಸ್‌ಎಫ್‌ ತಿಳಿಸಿದ್ದು, ಹೆಚ್ಚಿನ ತನಿಖೆಗಾಗಿ ಗಿಡುಗವನ್ನು ಅನ್ನು ಶಹಗಢ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆದರೆ, ಗಿಡುಗನ ಬಳಿ ಆಕ್ಷೇಪಾರ್ಹವಾದ ಯಾವುದೂ ವಿಚಾರ ಇನ್ನೂ ಸಿಕ್ಕಿಲ್ಲ. ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಫಾಲ್ಕನ್‌ ಅಂದರೆ ಗಿಡುಗ ಅಪಾಯಕಾರಿ ಪಕ್ಷಿ. ಇದು ಪ್ರಾಣಿಗಳು ಮಾತ್ರವಲ್ಲ, ಪಕ್ಷಿಗಳು ಹಾಗೂ ಮನುಷ್ಯರ ಮೇಲೂ ದಾಳಿ ಮಾಡುತ್ತದೆ ಎಂದು ಬಿಎಸ್‌ಎಫ್‌ ತಿಳಿಸಿದೆ.  ಇನ್ನು ಗಿಡುಗನ ಕಾಲಿಗೆ ಜೋಡಿಸಲಾದ ಆಂಟೆನಾದ ವೆಚ್ಚ ಸುಮಾರು 400 ಡಾಲರ್‌ಗಳು ಮತ್ತು ಅದರ ತರಬೇತಿಗೆ ಸುಮಾರು 10 ರಿಂದ 15 ಲಕ್ಷ ರೂಪಾಯಿ ಖರ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸೌದಿ ಅರೇಬಿಯಾದ ರಾಜಮನೆತನದ ಹಲವಾರು ಸದಸ್ಯರು ಅಪರೂಪದ ಹೌಬಾರಾ ಪಕ್ಷಿಯನ್ನು ಬೇಟೆಯಾಡಲು ತಮ್ಮ ವಿಶೇಷ ತರಬೇತಿ ಪಡೆದ ಬೇಟೆಯ ಗಿಡುಗಗಳೊಂದಿಗೆ ಪಾಕಿಸ್ತಾನದ ಹತ್ತಿರದ ಮರುಭೂಮಿ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಹುಶಃ ಈ ಪಕ್ಷಿ ಅವರದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇದೇ ಮೊದಲ ಬಾರಿಗೆ ಸ್ಪೇಸ್‌ಎಕ್ಸ್‌ ರಾಕೆಟ್‌ ಮೂಲಕ ಉಡಾವಣೆಯಾಗಲಿದೆ ಭಾರತದ ಜಿಸ್ಯಾಟ್ ಉಪಗ್ರಹ

ಸೌದಿ ಅರೇಬಿಯಾದ ರಾಜಮನೆತನದಿಂದ ಅಪಾರ ಪ್ರಮಾಣದ ಹಣವನ್ನು ಪಾಕಿಸ್ತಾನ ಸರ್ಕಾರಕ್ಕೆ ನೀಡಿರುವುದರಿಂದ ಹೆಚ್ಚಿನ ಸಂಖ್ಯೆಯ ಪರವಾನಗಿಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಈ ರಾಜ ಮನೆತನಗಳಿಗೆ ಬೇಟೆಯಾಡಲು ಪಾಕಿಸ್ತಾನ ಸರ್ಕಾರಗಳು ಬೇರೆ ಬೇರೆ ಮರುಭೂಮಿ ಪ್ರದೇಶಗಳನ್ನು ಮಂಜೂರು ಮಾಡಿವೆ. ಪಾಕಿಸ್ತಾನದ ರಹಿಮಿಯಾರ್ ಖಾನ್, ಸಾದಿಕಾಬಾದ್, ಸಂಗಡ್, ಇಸ್ಲಾಂಘರ್, ಖಿಪ್ರೋ ಮತ್ತು ಸಖರ್‌ನಂತಹ ಶಹಗರ್ ಬಲ್ಗೆಯಲ್ಲಿ ಸೌದಿಯ ರಾಜಮನೆತನದವರು ತಮ್ಮ ಶಿಬಿರಗಳನ್ನು ಸ್ಥಾಪನೆ ಮಾಡಿದ್ದಾರೆ ಎಂದು ತಿಳಿಸಿದೆ.

ನೀತಾ ಅಂಬಾನಿ, ಚಿನ್ನಲೇಪಿತ, ವಜ್ರ ಹುದುಗಿಸಿದ ವಿಶ್ವದ ಅತೀ ದುಬಾರಿ ಐಫೋನ್‌ ಬಳಸ್ತಾರಾ? ಸತ್ಯಾಂಶವೇನು?

Follow Us:
Download App:
  • android
  • ios