ಅಯೋಧ್ಯೆ ಭಾಷಣದಲ್ಲಿ 8 ಕೋಟಿ ಭಾರತೀಯರ ಹೊರಗಿಟ್ಟ ಮೋದಿ; ಆತಂಕ ವ್ಯಕ್ತಪಡಿಸಿದ ತರೂರ್!
ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಈ ಸಂಭ್ರಮ ದೇಶದಲ್ಲಿ ಮನೆ ಮಾಡಿದೆ. ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಡಿದ ಭಾಷಣದಲ್ಲಿ ಮೋದಿ, 8 ಕೋಟಿ ಭಾರತೀಯರ ಕುರಿತು ಸೊಲ್ಲೆತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಬಳಿಕ ಮೋದಿ 8 ಕೋಟಿ ಮಂದಿಯನ್ನು ಹೊರಗಿಟ್ಟಿದ್ದೇಕೆ? ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ.
ನವದೆಹಲಿ(ಆ.07): ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ಬಳಿಕ ಕಾಂಗ್ರೆಸ್ ಕೂಡ ರಾಮ ಜಪ ಮಾಡುತ್ತಿದೆ. ರಾಮ ಮಂದಿರ ನಿರ್ಮಾಣ ಶ್ರೇಯಸ್ಸು ಬಿಜೆಪಿ ಮಾತ್ರ ಹೆಗಲೆ ಮೇಲೆ ಹೊತ್ತರೆ ಆಪತ್ತು ಎಂದು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದೀಗ ಶಿಲಾನ್ಯಾಸದ ಬಳಿಕ ಮೋದಿ ಭಾಷಣವನ್ನು ಕೆದಕಿ ಹೊಸ ವಿಚಾರ ತೇಲಿ ಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್, ಪ್ರಧಾನಿ ಮೋದಿ 8 ಕೋಟಿ ಮಂದಿಯನ್ನು ತಮ್ಮ ಭಾಷಣದಲ್ಲಿ ಹೊರಗಿಟ್ಟಿದ್ದೇಕೆ? ಪೌರತ್ವ ತಿದ್ದು ಪಡಿ ಕಾಯ್ದೆ ಬಳಿಕ ಮೋದಿ ಈ ಹೇಳಿಕೆಯ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರಕ್ಕೆ ಹೋರಾಡಿದ ಅಡ್ವಾಣಿಯನ್ನ ಕಡೆಗಣಿಸಿದ್ರಾ ಮೋದಿ? ಪ್ರಧಾನಿಗೆ ಗುಂಡೂರಾವ್ ಪ್ರಶ್ನೆ
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನರೇಂದ್ರ ಮೋದಿ, ಜನತೆಯನ್ನುದ್ದೇಶಿ ಭಾಷಣ ಮಾಡಿದ್ದರು. ಈ ವೇಳೆ ಶ್ರೀ ರಾಮ ಮಂದಿರಕ್ಕಾಗಿ ಹಲವರು ಬಲಿದಾನ ಮಾಡಿದ್ದಾರೆ. ನಿರಂತರ ಹೋರಾಟ ಮಾಡಿದ್ದಾರೆ. ಅವೆರಲ್ಲರ ಫಲದಿಂದ ಇದೀಗ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಭಾರತದ 130 ಕೋಟಿ ಜನತೆಯ ಪರವಾಗಿ ರಾಮ ಮಂದಿರಕ್ಕಾಗಿ ತ್ಯಾಗ ಬಲಿದಾನ ಮಾಡಿದರಿಗೆ ಗೌರವ ಸಮಪರ್ಪಿಸುತ್ತೇನೆ ಎಂದು ಮೋದಿ ಹೇಳಿದ್ದರು.
ನರೇಂದ್ರ ಮೋದಿ, ರಾಮ ಜನ್ಮಭೂಮಿಗೆ ಭೇಟಿ ಕೊಟ್ಟ ದೇಶದ ಮೊದಲ ಪ್ರಧಾನ ಮಂತ್ರಿ!
ಮೋದಿ ಭಾಷಣದ ಈ ತುಣುಕು ಕೈಗೆತ್ತಿಕೊಂಡ ಶಶಿ ತರೂರ್, ಭಾರತದ ಜನಸಂಖ್ಯೆ 138 ಕೋಟಿ. ಪೌರತ್ವ ಕಾಯ್ದೆ ಬಳಿಕ ಮೋದಿ ಕೇವಲ 130 ಕೋಟಿ ಮಂದಿಯನ್ನು ಮಾತ್ರ ಉಲ್ಲೇಖಿಸಿದ್ದಾರೆ. ಉಳಿದ 8 ಮಂದಿ ಕತೆ ಏನು ? ಎಂದು ಪ್ರಶ್ನಿಸಿದ್ದಾರೆ.
ರಾಮ ಮಂದಿರ ಶಿಲಾನ್ಯಾಸದ ಬಳಿದ ಮೋದಿ ತಮ್ಮ ಭಾಷಣದಲ್ಲಿ 130 ಕೋಟಿ ಭಾರತೀಯರಿಗೆ ಅಭಿನಂದನೆ ತಿಳಿಸಿದ್ದಾರೆ. ಆದರೆ ಸದ್ಯ ಭಾರತದ ಜನಸಂಖ್ಯೆ 1,38,00,04,385. CAA/NRC ಕಾಯ್ದೆ ತಿದ್ದುಪಡಿ ಬಳಿಕ 8 ಕೋಟಿ ಮಂದಿಯನ್ನು ಮೋದಿ ಹೊರಗಿಟ್ಟಿದ್ದು ಆತಂಕ ತಂದಿದೆ. ಇದು ಅಜಾಗರೂಕತೆಯಿಂದ ಆಗಿದ್ದರೆ ತಿದ್ದುಪಡಿ ಮಾಡಿದರೆ ಹೊರಗಿಟ್ಟ 8 ಕೋಟಿ ಮಂದಿಗೆ ಧೈರ್ಯ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.