Asianet Suvarna News Asianet Suvarna News

Omicron ಆತಂಕದ ನಡುವೆ ದ. ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 10 ಪ್ರಯಾಣಿಕರು ನಾಪತ್ತೆ!

* ದಕ್ಷಿಣ ಆಫ್ರಿಕಾದಿಂದ ಹತ್ತು ಮಂದಿ ನಾಪತ್ತೆ

* ಕರ್ನಾಟಕ ಸರ್ಕಾರಕ್ಕೆ ಮತ್ತೊಂದು ತಲೆನೋವು

* ನಾಪತ್ತೆಯಾದವರ ಹುಡುಕಾಟಕ್ಕೆ ಮುಂದಾದ ಸರ್ಕಾರ

Omicron scare 10 South African nationals go missing Karnataka government worried pod
Author
Bangalore, First Published Dec 3, 2021, 4:43 PM IST

ಬೆಂಗಳೂರು(ಡಿ.03): ಒಮಿಕ್ರಾನ್ ಭೀತಿ ನಡುವೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಹತ್ತು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕುವ ಯತ್ನ ಆರಮಭಿಸಲಾಗಿದೆಯಾದರೂ, ಈವರೆಗೆ ಒಬ್ಬರೂ ಪತ್ತೆಯಾಗಿಲ್ಲ. ಈ ಎಲ್ಲಾ ವಿದೇಶಿಗರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಇಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದರಿಂದ ಆರೋಗ್ಯ ಇಲಾಖೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಬಂದವರ ಟ್ರಾವೆಲ್ ಹಿಸ್ಟರಿ

ಸದ್ಯ ನಾಪತ್ತೆಯಾಗಿರುವ ಈ ಹತ್ತೂ ವಿದೇಶಿಗರು ದಕ್ಷಿಣ ಆಫ್ರಿಕಾದಿಂದ ಬಂದವರಾಗಿದ್ದಾರೆ. ಆಡಳಿತಾಧಿಕಾರಿಗಳ ಬಳಿ ಇವರ ವಿಳಾಸವೂ ಇಲ್ಲ, ಕೊಟ್ಟ ನಂಬರ್ ಸ್ವಿಚ್ ಆಫ್ ಬರುತ್ತಿದೆ. ಮಾಹಿತಿ ಕೊರತೆಯಿಂದ ಬಿಬಿಎಂಪಿ ಕೈ, ಕಾಲು ಕಟ್ಟಿ ಹಾಕಿದಂತಾಗಿದೆ. 

ಅತ್ತ ಆಂಧ್ರಪ್ರದೇಶದಲ್ಲಿ ವಿದೇಶದಿಂದ ಹಿಂತಿರುಗಿದ 30 ಮಂದಿ ನಾಪತ್ತೆ

ವಿದೇಶದಿಂದ ಮರಳಿದ 60 ಜನರ ಪೈಕಿ 30 ಜನರನ್ನು ಆಂಧ್ರಪ್ರದೇಶ ಸರ್ಕಾರ ಹುಡುಕುತ್ತಿದೆ. ಒಮಿಕ್ರಾನ್‌ನ ಆತಂಕ ಗಮನದಲ್ಲಿಟ್ಟುಕೊಂಡು, ಸರ್ಕಾರವು ಇವರಿಗಾಗಿ ಹುಡುಕಾಟ ಆರಂಭಿಸಿದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಬೇಕಾಗಿದೆ. ಕಳೆದ 10 ದಿನಗಳಲ್ಲಿ ಆಫ್ರಿಕಾದ 9 ಮಂದಿ ಸೇರಿದಂತೆ ಸುಮಾರು 60 ಪ್ರಯಾಣಿಕರು ವಿಶಾಖಪಟ್ಟಣಂ ತಲುಪಿದ್ದಾರೆ. ಇವರಲ್ಲಿ 30 ಮಂದಿ ಪ್ರಸ್ತುತ ವಿಶಾಖಪಟ್ಟಣದಲ್ಲಿ ಉಳಿದುಕೊಂಡಿದ್ದರೆ, ಉಳಿದ 30 ಮಂದಿ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಿದ್ದಾರೆ. ಇವರಲ್ಲಿ ಕೆಲವರು ದೂರವಾಣಿ ಕರೆಗಳಿಗೆ ಉತ್ತರಿಸುತ್ತಿಲ್ಲ, ಇದರಿಂದಾಗಿ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರ

ಕೋವಿಡ್-19 ರ ಹೊಸ ರೂಪಾಂತರ, ಓಮಿಕ್ರಾನ್ (B.1.1.529) ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದಿದೆ. ವಿಜ್ಞಾನಿಗಳ ಪ್ರಕಾರ, ಈ ರೂಪಾಂತರವು 50 ವಿಧದ ರೂಪಾಂತರಗಳನ್ನು ಹೊಂದಿದೆ, ಅದರಲ್ಲಿ 30 ಅದರ ಸ್ಪೈಕ್ ಪ್ರೋಟೀನ್ನಲ್ಲಿವೆ. ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ.

ಕರ್ನಾಟಕದಲ್ಲಿ ಒಮಿಕ್ರಾನ್ ಆತಂಕ, ಹೊಸ ಮಾರ್ಗಸೂಚಿ ಪ್ರಕಟ

 

ಕರ್ನಾಟಕದಲ್ಲಿ ಒಮಿಕ್ರಾನ್(omicron) ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇಂದು (ಡಿ.03) ಕರೆದಿದ್ದ ಮಹತ್ವದ ಸಭೆ ಅಂತ್ಯವಾಗಿದ್ದು, ಸಭಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಹತ್ವದ ಚರ್ಚೆಯಾಗಿದೆ. ಸಭಯ ಬಳಿಕೆ ಕಂದಾಯ ಸಚಿವ ಆರ್​.ಅಶೋಕ್(R Ashok), ಸರ್ಕಾರ ಮಾಡಿಕೊಳ್ಳುತ್ತಿರುವ ಸಿದ್ಧತೆ ಮತ್ತು ಹೊಸ ನಿಯಮಾವಳಿಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.

Omicron ಕರ್ನಾಟಕದಲ್ಲಿ ಈಗಾಗಲೇ ಹಬ್ಬಿದೆಯಾ?: ಆಘಾತಕಾರಿ ಸುದ್ದಿ ನೀಡಿದ ವೈದ್ಯರು

ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೊವಿಡ್ ಬೆಡ್, ಐಸಿಯು ಬೆಡ್‌ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲಾಗುವುದು.  ಅದಕ್ಕೆ ಬೇಕಾದ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಔಷಧಿಗಳನ್ನು ಮುಂಚಿತವಾಗಿಯೇ ಖರೀದಿಸುವಂತೆ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಕೊವಿಡ್​ ಉಸ್ತುವಾರಿಗಾಗಿ ಶಿಲ್ಪಾ ನಾಗರಾಜ್ ಅವರನ್ನು ಸರ್ವೆಲೈನ್ಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೊವಿಡ್ ಟೆಸ್ಟ್‌ಗೆ ₹ 500 ದರ ನಿಗದಿ ಮಾಡಲಾಗಿದೆ. ಅಬೇಟ್‌ ಟೆಸ್ಟ್​ಗೆ  3 ಸಾವಿರ ನಿಗದಿ ಮಾಡಲಾಗಿದೆ. ಮೊದಲೇ ಸಮಯದ ವೇಳಾಪಟ್ಟಿ ನಿಗದಿ ಮಾಡಿರುತ್ತೇವೆ. ಏರ್‌ಪೋರ್ಟ್‌ನಲ್ಲಿಯೂ ಕಟ್ಟುನಿಟ್ಟಾಗಿ ಕೊವಿಡ್ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ನಂತರ ಏರ್‌ಪೋರ್ಟ್‌ನಿಂದ ಹೊರಕ್ಕೆ ಕಳಿಸಲಾಗುವುದು. ಬೆಳಗಾವಿ ಸುವರ್ಣಸೌಧದಲ್ಲಿಯೇ ಅಧಿವೇಶನ ನಡೆಯುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವವರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ, ಮೆಟ್ರೋ ರೈಲು, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‍ಗಳು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಸಂತೆ ಮೈದಾನ ಸೇರಿದಂತೆ ಮತ್ತಿತರ ಕಡೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

Follow Us:
Download App:
  • android
  • ios