Asianet Suvarna News Asianet Suvarna News

Covid Third Wave: ಜನವರಿಗೆ ಉತ್ತುಂಗಕ್ಕೆ, ಪ್ರತಿದಿನ 10 ಲಕ್ಷ ಕೇಸ್: IISc ಅಧ್ಯಯನ!

* ದೇಶದಲ್ಲಿ ಕೊರೋನಾ ಅಬ್ಬರ ಆರಂಭ

* ಜನವರಿಯಲ್ಲಿ ಕೊರೋನಾ ಗರಿಷ್ಠಕ್ಕೆ ಎಂದ ವಿಜ್ಞಾನಿಗಳು

* ಪ್ರತಿದಿನ 10 ಲಕ್ಷ ಕೇಸ್ ವರದಿಯಾಗುವ ಸಾಧ್ಯತೆ

Omicron Led Third Covid Wave May Peak by Jan end With Daily Cases Touching 10 Lakh New Model Predicts pod
Author
Bangalore, First Published Jan 7, 2022, 12:08 PM IST

ನವದೆಹಲಿ(ಜ.07): ಕೊರೋನಾದ ಹೊಸ ರೂಪಾಂತರವಾದ ಓಮಿಕ್ರಾನ್ ಬಗ್ಗೆ ಇಡೀ ಜಗತ್ತಿನಲ್ಲಿ ಆತಂಕ ವ್ಯಕ್ತವಾಗಿದೆ. ಈಗ ಒಮಿಕ್ರಾನ್‌ನಿಂದಾಗಿ, ಭಾರತದಲ್ಲಿ ಕೊರೋನಾ ವೈರಸ್‌ನ ಮೂರನೇ ಅಲೆ ಆರಮಭವಾಗಿದೆ. ತಜ್ಞರ ಪ್ರಕಾರ, ಮೂರನೇ ಅಲೆ ಜನವರಿಯಲ್ಲಿ ಉತ್ತುಂಗಕ್ಕೇರಬಹುದು. ಅಂದರೆ, ಈ ತಿಂಗಳು, ಒಂದು ದಿನದಲ್ಲಿ ಗರಿಷ್ಠ ಕೊರೋನಾ ಪ್ರಕರಣಗಳು ವರದಿಯಾಗಬಹುದು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು (IISc) ಮತ್ತು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ (ISI) ಬೆಂಗಳೂರು ಪ್ರಕಾರ, ಜನವರಿ ಕೊನೆಯ ವಾರದಲ್ಲಿ, ಪ್ರತಿದಿನ 10 ಲಕ್ಷ ಪ್ರಕರಣಗಳು ಬರುತ್ತವೆ. ಶುಕ್ರವಾರ, ಒಂದು ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಬಂದಿವೆ ಎಂಬುವುದು ಉಲ್ಲೇಖನೀಯ.

ಪ್ರೊಫೆಸರ್ ಶಿವ ಆತ್ರೇಯ, ಪ್ರೊಫೆಸರ್ ರಾಜೇಶ್ ಸುಂದರ್‌ಸನ್, ಐಐಎಸ್‌ಸಿ ಮತ್ತು ಐಎಸ್‌ಐ ಬೆಂಗಳೂರು ತಂಡ ಈ ಅಧ್ಯಯನ ನಡೆಸಿದೆ. ತಜ್ಞರ ಪ್ರಕಾರ, ಓಮಿಕ್ರಾನ್ ಸೋಂಕನ್ನು ಗಮನದಲ್ಲಿಟ್ಟುಕೊಂಡು ಈ ಅಂದಾಜನ್ನು ಮಾಡಲಾಗಿದೆ. ಜನವರಿ ಕೊನೆಯ ವಾರದಲ್ಲಿ ಗರಿಷ್ಠ ಕೊರೋನಾ ಪ್ರಕರಣಗಳು ಬರಲಿವೆ ಮತ್ತು ಅದರ ಪರಿಣಾಮ ಫೆಬ್ರವರಿಯಲ್ಲಿ ಗೋಚರಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಆದಾಗ್ಯೂ, ವಿವಿಧ ರಾಜ್ಯಗಳಲ್ಲಿ ವಿಭಿನ್ನ ಸಮಯದಲ್ಲಿ ಕೊರೋನಾ ಗರಿಷ್ಠಕ್ಕೆ ತಲುಪಬಹುದು ಎನ್ನಲಾಗಿದೆ. ಕೊರೋನದ ಹೆಚ್ಚಿನ ಪ್ರಕರಣಗಳು ಜನವರಿ ಮಧ್ಯದಿಂದ ಫೆಬ್ರವರಿ ಎರಡನೇ ವಾರದವರೆಗೆ ಕಂಡುಬರುತ್ತವೆ. ಅಲ್ಲದೆ, ಮಾರ್ಚ್‌ನಿಂದ ಕೊರೋನಾ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.

ರಾಜ್ಯಗಳ ಸ್ಥಿತಿ

ಅಧ್ಯಯನದ ಮಾದರಿಯ ಪ್ರಕಾರ, ಜನವರಿ ಮಧ್ಯದಲ್ಲಿ ಅಥವಾ ಮೂರನೇ ವಾರದ ವೇಳೆಗೆ ದೆಹಲಿಯಲ್ಲಿ ಗರಿಷ್ಠ ಮಟ್ಟ ತಲುಪಬಹುದು. ತಮಿಳುನಾಡಿಗೆ ಇದು ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಇರುತ್ತದೆ. ಹಿಂದಿನ ಸೋಂಕು ಮತ್ತು ಲಸಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಅಂದಾಜನ್ನು ಸಿದ್ಧಪಡಿಸಲಾಗಿದೆ. ಜನಸಂಖ್ಯೆಯ 30%, 60% ಅಥವಾ 100% ಜನರು ಒಳಗಾಗುತ್ತಾರೆ ಎಂದು ಮಾದರಿ ಊಹಿಸಿದೆ. ವೈರಸ್‌ಗೆ ಗುರಿಯಾಗುವ ಜನರ ಶೇಕಡಾವಾರು ಪ್ರಮಾಣವನ್ನು ಅವಲಂಬಿಸಿ, ಭಾರತದಲ್ಲಿ ದೈನಂದಿನ ಪ್ರಕರಣಗಳು ಗರಿಷ್ಠ ಸಮಯದಲ್ಲಿ ಸುಮಾರು 3 ಲಕ್ಷ, 6 ಲಕ್ಷ ಅಥವಾ 10 ಲಕ್ಷ ಆಗಿರಬಹುದು.

ಐಐಟಿ ಕಾನ್ಪುರ ಹೇಳಿದ್ದೇನು?
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ಸಂಶೋಧಕರ ಇದೇ ರೀತಿಯ ಅಧ್ಯಯನವು ಫೆಬ್ರವರಿ 3 ರ ವೇಳೆಗೆ ಭಾರತದಲ್ಲಿ COVID-19 ಸಾಂಕ್ರಾಮಿಕದ ಮೂರನೇ ale ತಲುಪಬಹುದು ಎಂದು ಅಂದಾಜಿಸಿದೆ. ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಸಮಿತಿಯು ಕಳೆದ ತಿಂಗಳು ಕೊರೋನಾ ವೈರಸ್‌ನ ಮೂರನೇ ಅಲೆ ಫೆಬ್ರವರಿಯಲ್ಲಿ ಭಾರತವನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿತ್ತು.

ಇತರ ಸಂಶೋಧಕರು ಏನು ಹೇಳುತ್ತಾರೆ?

ಕೋವಿಡ್-19 ಟ್ರ್ಯಾಕರ್ ಇಂಡಿಯಾ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ ಟ್ರ್ಯಾಕರ್, ಡಿಸೆಂಬರ್ ಕೊನೆಯ ವಾರದಿಂದ ಹೊಸ ಸೋಂಕು ಹೆಚ್ಚಾಗಲು ಪ್ರಾರಂಭಿಸುತ್ತವೆ ಎಂದು ಭವಿಷ್ಯ ನುಡಿದಿದೆ. ಭಾರತವು ದೈನಂದಿನ ಪ್ರಕರಣಗಳಲ್ಲಿ ಭಾರೀ ಹೆಚ್ಚಳ ಕಾಣುವ ಸಾಧ್ಯತೆಯಿದೆ. ಕೊರೋನಾ ಸೋಂಕಿನ ವೇಗವು ಬಹಳ ಕಡಿಮೆ ಸಮಯದವರೆಗೆ ಇರುತ್ತದೆ ಎಂದೂ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios