ರಾಜ್ಯದ ಮೊದಲ ಒಮಿಕ್ರೋನ್‌ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖ ಭಾರತದಲ್ಲಿ 68ಕ್ಕೆ ಏರಿದ ಓಮಿಕ್ರಾನ್ ಪ್ರಕರಣ ಬ್ರಿಟನ್ ದೇಶದ 6.7 ಕೋಟಿ ಜನರ ಪೈಕಿ 1.1 ಕೋಟಿ ಜನಕ್ಕೆ ಸೋಂಕು  

ಬೆಂಗಳೂರು(ಡಿ.16): ರಾಜ್ಯದ ಮೊದಲ ಒಮಿಕ್ರೋನ್‌(Karnataka Omicron case) ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಬುಧವಾರ ನಗರದ ಬೌರಿಂಗ್‌ ಆಸ್ಪತ್ರೆಯಿಂದ(Hospital) ಬಿಡುಗಡೆಯಾಗಿದ್ದಾರೆ. ಮಂಗಳವಾರವಷ್ಟೇ 2ನೇ ಸೋಂಕಿತ ಗುಣವಾಗಿದ್ದರು. ಇನ್ನೊಬ್ಬ ಸೋಂಕಿತ ಈ ಹಿಂದೆಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ. ಹೀಗಾಗಿ ರಾಜ್ಯದಲ್ಲೀಗ ಒಂದೂ ಒಮಿಕ್ರೋನ್‌ ಸಕ್ರಿಯ ಪ್ರಕರಣ ಇಲ್ಲದಂತಾಗಿದೆ.

7 ವರ್ಷದ ಬಾಲಕ ಸೇರಿ 7 ಜನರಿಗೆ ಒಮಿಕ್ರೋನ್‌
ಭಾರತದಲ್ಲಿ(India Omicron Case) ಬುಧವಾರ ಮತ್ತೆ 7 ಜನರಲ್ಲಿ ಹೊಸದಾಗಿ ಒಮಿಕ್ರೋನ್‌ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 68ಕ್ಕೆ ತಲುಪಿದೆ. ಬುಧವಾರ ಮಹಾರಾಷ್ಟ್ರದಲ್ಲಿ 4, ತೆಲಂಗಾಣದಲ್ಲಿ 2, ಪಶ್ಚಿಮ ಬಂಗಾಳದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಪಶ್ಚಿಮ ಬಂಗಾಳದ ಪ್ರಕರಣದಲ್ಲಿ 7 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ತೆಲಂಗಾಣದಲ್ಲಿ ಇಬ್ಬರು ವಿದೇಶಿಯರಲ್ಲಿ ಸೋಂಕು ಪತ್ತೆಯಾಗಿದೆ.

Omicron Variant ಕಂಡು ಕೇಳರಿಯದ ವೇಗದಲ್ಲಿ ಹಬ್ಬುತ್ತಿದೆ ಓಮಿಕ್ರಾನ್, ತಪ್ಪು ಅಭಿಪ್ರಾಯ ಬೇಡ, WHO ಎಚ್ಚರಿಕೆ!

ಬ್ರಿಟನ್ನಲ್ಲಿ ಕೋವಿಡ್‌ ಸ್ಫೋಟ:
ಬ್ರಿಟನ್‌ನಲ್ಲಿ(Britain Covid 19) ಕೊರೋನಾ ಸ್ಫೋಟಗೊಂಡಿದ್ದು ಗುರುವಾರ 78,610 ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕದ ಆರಂಭದಿಂದಲೂ ಒಂದೇ ದಿನ ದಾಖಲಾದ ಪ್ರಕರಣಗಳಲ್ಲಿ ಇದು ಗರಿಷ್ಟವಾಗಿದೆ. ಈ ಹಿಂದೆ ಜ.8ರಂದು 68,053 ಮಂದಿಗೆ ಸೋಂಕು ಹಬ್ಬಿದ್ದು, ಈವರೆಗಿನ ಅತಿಹೆಚ್ಚು ದೈನಂದಿನ ಕೇಸ್‌ ಆಗಿತ್ತು. ಒಮಿಕ್ರೋನ್‌ ಹಾಗೂ ಡೆಲ್ಟಾರೂಪಾಂತರಿಯ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ದ್ವಿಗುಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಹಾಮಾರಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಎಚ್ಚರಿಕೆ ನೀಡಿದ್ದಾರೆ.

ದೇಶದ 6.7 ಕೋಟಿ ಜನರ ಪೈಕಿ 1.1 ಕೋಟಿ ಜನಕ್ಕೆ ಸೋಂಕು
ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಇದರಿಂದ ಎಚ್ಚೆತ್ತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಬೂಸ್ಟರ್‌ ಡೋಸ್‌ ನೀಡುವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಬ್ರಿಟನ್‌ನಲ್ಲಿ ಬುಧವಾರ 656,711 ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗಿದೆ. ಒಟ್ಟಾರೆ 6.7 ಕೋಟಿ ಜನಸಂಖ್ಯೆ ಹೊಂದಿದ ಬ್ರಿಟನ್‌ನಲ್ಲಿ ಈವರೆಗೆ 1.1 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 1.46 ಲಕ್ಷ ಜನರನ್ನು ಸೋಂಕು ಬಲಿತೆಗೆದುಕೊಂಡಿದೆ.

Corona Third Wave: ರಾಜ್ಯದಲ್ಲಿ 3ನೇ ಅಲೆ ಭೀತಿ, ತಜ್ಞರ ಶಿಫಾರಸ್ಸುಗಳು ಇಲ್ಲಿವೆ

ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ,
ಒಮಿಕ್ರೋನ್‌ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ(Maumbai) ಗುರುವಾರದಿಂದ ಜಾರಿಗೆ ಬರುವಂತೆ ಸೆ.144ರಡಿ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಮಹಾರಾಷ್ಟ್ರದ 28 ಒಮಿಕ್ರೋನ್‌ ಕೇಸ್‌ಗಳಲ್ಲಿ ಮುಂಬೈ ಪಾಲು 12
ಮಹಾರಾಷ್ಟ್ರದಲ್ಲಿ(Maharastra) ಒಟ್ಟಾರೆ 28 ಒಮಿಕ್ರೋನ್‌ ಕೇಸ್‌ಗಳು ಪತ್ತೆಯಾಗಿದ್ದು, ಇದರಲ್ಲಿ 12 ಕೇಸ್‌ಗಳು ಮುಂಬೈನಲ್ಲೇ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಸಾರ್ವಜನಿಕ ಸಭೆ ಸೇರಿ ಯಾವುದೇ ಸಮಾರಂಭ ನಡೆಸುವಂತಿಲ್ಲ. ಶಾಪಿಂಗ್‌ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ಮನೋರಂಜನೆ ಕಾರ್ಯಕ್ರಮ ಸೇರಿದಂತೆ ಇನ್ನಿತರ ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್‌ ಲಸಿಕೆಯ 2 ಡೋಸ್‌ಗಳನ್ನು ಪಡೆದಿರಲೇಬೇಕು. ಅಲ್ಲದೆ ಸ್ಥಳೀಯ ರೈಲು, ಬಸ್ಸು, ಟ್ಯಾಕ್ಸಿಗಳಿಗೂ ಇದೇ ನಿಯಮ ಅನ್ವಯವಾಗಲಿದೆ.

ಇನ್ನು ಸಿನಿಮಾ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್‌ ಮತ್ತು ಸಿನಿಮಾ ಹಾಲ್‌ಗಳಲ್ಲಿ ಶೇ.50ರಷ್ಟುಜನರಿಗೆ ಮಾತ್ರ ಅವಕಾಶ ನೀಡಬೇಕು. 1000ಕ್ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಸ್ಥಳೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅನುಮತಿ ಕಡ್ಡಾಯ. ಮುಂಬೈಗೆ ಬರುವವರು ಪೂರ್ತಿ ಲಸಿಕೆ ಪಡೆದಿರಬೇಕು ಅಥವಾ 72 ಗಂಟೆಗಳ ಮುಂಚಿತವಾಗಿ ಪಡೆದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಹೊಂದಿರಲೇಬೇಕು.