Asianet Suvarna News Asianet Suvarna News

Omicron in Karnataka: ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ!

  • ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ ದೃಢ
  • ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ವೈರಸ್ ಪತ್ತೆ
  • ಭಾರತದ ಆತಂಕ ಹೆಚ್ಚಿಸಿದ ಓಮಿಕ್ರಾನ್, ಕಠಿಣ ನಿಯಮ ಜಾರಿ
Omicron in Karnataka 5 contacts of New variant infected patient tested coronavirus positive Bengaluru ckm
Author
Bengaluru, First Published Dec 2, 2021, 10:15 PM IST

ಬೆಂಗಳೂರು(ಡಿ.02): ದೇಶದಲ್ಲಿ ಓಮಿಕ್ರಾನ್ ವೈರಸ್(omicron variant) ಖಚಿತವಾಗಿದೆ. ಸೌತ್ ಆಫ್ರಿಕಾದಿಂದ(South Africa) ಬೆಂಗಳೂರು ವಿಮಾನ ನಿಲ್ದಾಣಕ್ಕೆ(Bengaluru Airport) ಆಗಮಿಸಿದ ಇಬ್ಬರಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಇದು ದೇಶದ ನಿದ್ದೆಗೆಡಿಸಿದೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಠಿಣ ನಿಯಮ ಜಾರಿಯಾಗಿದೆ. ಇದೀಗ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕಿತರಿಬ್ಬರ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ(Coronavirus) ದೃಢಪಟ್ಟಿದೆ.

"

ಕರ್ನಾಟಕದ(Karnataka) ಮೂಲಕ ಭಯಾನಕ ವೈರಸ್ ಭಾರತಕ್ಕೆ(India) ಕಾಲಿಟ್ಟಿದೆ. ಇಷ್ಟು ದಿನ ದೇಶದಲ್ಲಿ ಓಮಿಕ್ರಾನ್ ವೈರಸ್ ಇಲ್ಲ ಎಂದು ನೆಮ್ಮದಿಯೆ ನಿಟ್ಟುಸಿರುಬಿಟ್ಟಿದ್ದ ಮಂದಿಗೆ ಇದೀಗ ಆತಂಕ ಶುರುವಾಗಿದೆ. ಇದರ ಬೆನ್ನಲ್ಲೇ ಓಮಿಕ್ರಾನ್ ಸೋಂಕಿತರ ಪ್ರಥಮ ಹಾಗೂ ಎರಡನೇ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ ದೃಢಪಟ್ಟಿದೆ. ಈ ಐವರಿಗೆ ಓಮಿಕ್ರಾನ್ ತಗುಲಿದೆಯಾ ಅನ್ನೋದನ್ನು ಪರೀಕ್ಷಿಸಲು ಐವರ ಮಾದರಿಯನ್ನು ಜೆನೋಮಿಕ್ ಸೀಕ್ವೆನ್ಸ್(Genomic sequencing test) ಪರೀಕ್ಷೆಗಳು ಕಳುಹಿಸಲಾಗಿದೆ. ಇದೀಗ ವರದಿದಾಗಾಗಿ ಕರ್ನಾಟಕ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರ ಕಾಯುತ್ತಿದೆ.

Omicron: ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ​, ದೆಹಲಿಯಿಂದ ಮಹತ್ವದ ಹೇಳಿಕೆ ಕೊಟ್ಟ ಸಿಎಂ ಬೊಮ್ಮಾಯಿ

ಓಮಿಕ್ರಾನ್ ಸೋಂಕಿತರ ಮೊದಲ ಹಾಗೂ ಎರಡನೇ ಸಂಪರ್ಕದಲ್ಲಿದ್ದ ಒಟ್ಟು 262 ಮಂದಿಯನ್ನು ಟ್ರೇಸ್ ಮಾಡಿ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ ಐವರಿಗೆ ಕೊರೋನಾ ಖಚಿತಗೊಂಡಿದೆ. ಓಮಿಕ್ರಾನ್ ಸೋಂಕಿತರು ಹಾಗೂ ಕೊರೋನಾ ಖಚಿತಗೊಂಡ ಐವರನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ. ಜನರು ಆತಂಕ ಪಡುವ ಆಗತ್ಯವಿಲ್ಲ. ಓಮಿಕ್ರಾನ್ ಹರಡದಂತೆ ತಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಜನರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಮಾಸ್ಕ್ ಧರಿಸಿ, ಅನಗತ್ಯ ಓಡಾಟ ಬೇಡ, ಪ್ರವಾಸ, ಪ್ರಯಾಣ ಮುಂದೂಡಿ ಎಂದು ಗೌರವ್ ಗುಪ್ತ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Omicron: ಒಮಿಕ್ರಾನ್‌ ಆತಂಕ, ಸಿನಿಮಾ, ಹೋಟೆಲ್, ಮಾಲ್ ಬಂದ್ ಬಗ್ಗೆ ಸ್ಪಷ್ಟನೆ ಕೊಟ್ಟ ಅಶ್ವತ್ಥನಾರಾಯಣ

ಓಮಿಕ್ರಾನ್ ಆತಂಕದಿಂದ ಈಗಾಗಲೇ ಕೇಂದ್ರದ ಮಾರ್ಗಸೂಚಿ ಜಾರಿಯಾಗಿದೆ. ಇದರ ನಡುವೆ ಕರ್ನಾಟಕ ಕೂಡ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಇದರ ನಡುವೆ ಎರಡು ಪ್ರಕರಣ ಪ್ರತೆಯಾಗಿರುವುದು ರಾಜ್ಯದ ನಿದ್ದೆಗೆಡಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಅಗತ್ಯಬಿದ್ದರೆ ಮಾರ್ಗಸೂಚಿ ಬದಲಿಸಲಾಗುವುದು. ತಜ್ಞರ ಅಭಿಪ್ರಾಯದ ಪ್ರಕಾರ ರಾಜ್ಯದಲ್ಲಿ ಪತ್ತೆಯಾಗಿರುವುದು ಆತಂಕಕಾರಿ ಓಮಿಕ್ರಾನ್ ವೈರಸ್ ಅಲ್ಲ. ಜನರು ಕೋವಿಡ್ ಮಾರ್ಗಸೂಚಿ ಪಾಲಿಸಿ. ಓಮಿಕ್ರಾನ್ ತಡೆಯಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕರ್ನಾಟಕದಲ್ಲಿ ಫ್ರಂಟ್‌ವೈನ್ ವರ್ಕಸ್‌ಗೆ ಬೂಸ್ಟರ್ ಡೋಸ್ ನೀಡುವ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಜೊತೆ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. 

ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಮೂಲಕ ಮಾತ್ರ ಓಮಿಕ್ರಾನ್ ವೈರಸ್ ಪತ್ತೆಹಚ್ಚಲು ಸಾಧ್ಯ. ಸದ್ಯ ಜಿನೋಮಿಕ್ ಸೀಕ್ವೆನ್ಸ್ ವರದಿ ಬರಲು 8 ದಿನಗಳ ಅವಶ್ಯಕತೆ ಇದೆ. ಈ ಹಿಂದೆ ಇದೇ ವರದಿಗೆ 2 ತಿಂಗಳು ಕಾಯಬೇಕಿತ್ತು. 

Follow Us:
Download App:
  • android
  • ios