*  ಜರ್ಮನಿ, ದುಬೈನಿಂದ ಬಂದವರಿಗೆ ದೃಢ*  ಮತ್ತೆ 8 ಒಮಿಕ್ರೋನ್‌ ಕೇಸು: ಸೋಂಕಿತರ ಸಂಖ್ಯೆ 151ಕ್ಕೆ ಜಿಗಿತ*  ಮಹಾರಾಷ್ಟ್ರದಲ್ಲಿ, ಗುಜರಾತಲ್ಲಿ 2 ಪ್ರಕರಣ ದೃಢ 

ಗಾಂಧಿನಗರ/ಮುಂಬೈ(ಡಿ.20): ಭಾನುವಾರ ಒಂದೇ ದಿನ ದೇಶದಲ್ಲಿ ಒಟ್ಟು 8 ಒಮಿಕ್ರೋನ್‌(Omicron) ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಶನಿವಾರ 143 ಇದ್ದ ಒಮಿಕ್ರೋನ್‌ ಸೋಂಕಿತರ ಸಂಖ್ಯೆ ಭಾನುವಾರ 151ಕ್ಕೆ ಜಿಗಿದಿದೆ. ಮಹಾರಾಷ್ಟ್ರದಲ್ಲಿ(Maharashtra) ಭಾನುವಾರ ಒಂದೇ ದಿನ 6 ಮಂದಿಯಲ್ಲಿ (ಮುಂಬೈನಲ್ಲಿ 4, ಪುಣೆಯಲ್ಲಿ 2) ರೂಪಾಂತರಿ ವೈರಸ್‌ ಕಂಡುಬಂದಿದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 54ಕ್ಕೆ ಏರಿದೆ. ಈ ನಡುವೆ, ಗುಜರಾತಲ್ಲಿ(Gujrat) ಬ್ರಿಟನ್‌ನಿಂದ(Braitain) ಗುಜರಾತ್‌ಗೆ ಬಂದಿದ್ದ ಅನಿವಾಸಿ ಭಾರತೀಯ ಮತ್ತು ಆತನ ಪುತ್ರನಿಗೆ ಒಮಿಕ್ರೋನ್‌ ದೃಢಪಟ್ಟಿದೆ.

ಇದರೊಂದಿಗೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು (54), ದೆಹಲಿ (22), ರಾಜಸ್ಥಾನ (17), ಕರ್ನಾಟಕ (14), ತೆಲಂಗಾಣ (20), ಕೇರಳ (11), ಗುಜರಾತ್‌ (11) ಹಾಗೂ ಆಂಧ್ರಪ್ರದೇಶ, ಚಂಡೀಗಢ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ರೂಪಾಂತರಿ ತಳಿ ಕೇಸ್‌ ಪತ್ತೆಯಾಗಿದೆ.

Omicron Threat: ಬೆಂಗ್ಳೂರಲ್ಲಿ ಮತ್ತೆ ಕೊರೋನಾ ಸೋಂಕು ಏರಿಕೆ..!

ರಾಜ್ಯದಲ್ಲಿ 300 ಜನಕ್ಕೆ ಸೋಂಕು, 1 ಸಾವು

ರಾಜ್ಯದಲ್ಲಿ(Karnataka) ಭಾನುವಾರ ಹೊಸದಾಗಿ 300 ಮಂದಿ ಕೊರೋನಾ(Coronavrus) ಸೋಂಕಿತರಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಇದೇ ವೇಳೆ, 279 ಮಂದಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30.02 ಲಕ್ಷಕ್ಕೆ, ಸಾವಿನ ಸಂಖ್ಯೆ 38288ಕ್ಕೆ ತಲುಪಿದೆ. 29.56 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಉಡುಪಿಯ 74ರ ಹರೆಯದ ಮಹಿಳೆ ಭಾನುವಾರ ಸೋಂಕಿನಿಂದ ಮೃತರಾಗಿದ್ದಾರೆ(Death). ಮರಣ ದರ ಶೇ.0.33 ದಾಖಲಾಗಿದೆ. ಮಾ.13ರಂದು ಶೇ.0.10 ಮರಣ ದರ ದಾಖಲಾದ ಬಳಿಕದ ಕನಿಷ್ಠ ದರ ಇದಾಗಿದೆ.

ಬೆಂಗಳೂರು(Bengaluru) ನಗರದಲ್ಲಿ 168, ದಕ್ಷಿಣ ಕನ್ನಡ 37, ಮೈಸೂರು 13, ಹಾಸನ 11 ಮತ್ತು ಕೊಡಗು ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ಬೆಳಕಿಗೆ ಬಂದಿದೆ. ಕೋಲಾರ ಮತ್ತು ಚಿಕ್ಕಮಗಳೂರು 9, ಉತ್ತರ ಕನ್ನಡ 8, ತುಮಕೂರು 7, ಬೆಳಗಾವಿ 6, ಬಳ್ಳಾರಿ, ಚಿತ್ರದುರ್ಗ, ರಾಯಚೂರು ಜಿಲ್ಲೆಯಲ್ಲಿ 4, ಉಡುಪಿ, ಶಿವಮೊಗ್ಗ, ಮಂಡ್ಯ, ಧಾರವಾಡ ಜಿಲ್ಲೆಯಲ್ಲಿ 2, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ವರದಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಸೋಂಕು ಪತ್ತೆಯಾಗಿಲ್ಲ.

ಲಸಿಕೆ ಅಭಿಯಾನ:

ಭಾನುವಾರ 61,982 ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದಿದ್ದಾರೆ. 48,077 ಮಂದಿ ಎರಡನೇ ಮತ್ತು 13,905 ಮಂದಿ ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 8.27 ಕೋಟಿ ಡೋಸ್‌ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ. ಈವರೆಗೆ ಒಟ್ಟು 4.70 ಕೋಟಿ ಮೊದಲ ಮತ್ತು 3.56 ಕೋಟಿ ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ. ಪರೀಕ್ಷೆ: ಭಾನುವಾರದ 1.12 ಲಕ್ಷ ಪರೀಕ್ಷೆ ಸೇರಿ ಈವರೆಗೆ ಒಟ್ಟು 5.53 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

ವಿದೇಶದಿಂದ ಬಂದ ಮತ್ತಿಬ್ಬರಿಗೆ ಸೋಂಕು

ಬೆಂಗಳೂರು: ವಿದೇಶದಿಂದ ಭಾನುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ(Passengers) ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ವಿದೇಶಗಳಿಂದ ರಾಜ್ಯಕ್ಕೆ ಆಗಮಿಸಿ ಸೋಂಕು ದೃಢಪಟ್ಟವರ ಸಂಖ್ಯೆ 25ಕ್ಕೆ ಹೆಚ್ಚಳವಾಗಿದೆ.

ಒಮಿಕ್ರೋನ್‌ ಸೋಂಕು ಹೆಚ್ಚಿರುವ ಹೈರಿಸ್ಕ್‌ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ ಜರ್ಮನಿ(Germany) ಮತ್ತು ದುಬೈನಿಂದ(Dubai) ಬಂದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ತಲಾ ಒಬ್ಬ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದೆ. ಈ ಇಬ್ಬರಿಗೂ ಸೋಂಕಿನ ಲಕ್ಷಣಗಳಿರಲಿಲ್ಲ. ಅವರ ಗಂಟಲು ದ್ರವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿ, ಕೂಡಲೇ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Omicron Variant: ಬ್ರಿಟನ್‌ನಲ್ಲಿ ಒಮಿಕ್ರೋನ್‌ ಸ್ಫೋಟ: ಆತಂಕದಲ್ಲಿ ಜನತೆ

ಡಿ.1ರಿಂದ 18 ವರೆಗೂ ಇಂಗ್ಲೆಂಡ್‌ನಿಂದ(England) ಬಂದ 17 ಮಂದಿ, ಜರ್ಮನಿಯಿಂದ ಬಂದ ಇಬ್ಬರು, ದಕ್ಷಿಣ ಆಫ್ರಿಕಾದಿಂದ ಬಂದ ಮೂರು, ಡೆನ್ಮಾರ್ಕ್‌ನಿಂದ(Denmark)ಬಂದ ಒಬ್ಬರು ಮಂದಿ ಸೇರಿ 23 ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿತ್ತು. ಭಾನುವಾರ ಇಬ್ಬರು ಪ್ರಯಾಣಿಕರನ್ನು ಸೇರಿ ಒಟ್ಟಾರೆ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ಪೈಕಿ ಗುಣಮುಖರಾಗಿ ಸೋಂಕು ನೆಗೆಟಿವ್‌ ಬಂದವರು ಮನೆಗೆ ತೆರಳಿದ್ದು, ಉಳಿದವರು ಬೌರಿಂಗ್‌ ಸೇರಿದಂತೆ ವಿವಿಧ ಖಾಸಗಿ ಆಸ್ಪತೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತೆ 155 ಮಂದಿಗೆ ಸೋಂಕು

ನಗರದಲ್ಲಿ ಕೋವಿಡ್‌ ಸೋಂಕಿತ ಪ್ರಕರಣಗಳ ಏರಿಳಿಕೆ ಮುಂದುವರೆದಿದ್ದು, ಭಾನುವಾರ 155 ಜನರಲ್ಲಿ ಸೋಂಕು ದೃಢಪಟ್ಟಿದೆ. ಯಾವುದೇ ಸಾವು ವರದಿಯಾಗಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 12,60,131ಕ್ಕೆ ಏರಿಕೆಯಾಗಿದೆ. 148 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಗುಣಮುಖರ ಸಂಖ್ಯೆ 12,38,093ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 16,375ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 5660 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.