Omicron Silent Killer: ಸೋಂಕಿಗೆ ತುತ್ತಾಗಿ 25 ದಿನವಾದರೂ ಇನ್ನೂ ಸುಧಾರಿಸಿಕೊಳ್ಳುತ್ತಿದ್ದೇನೆ: CJI NV Ramana

*ಸೋಂಕಿಗೆ ತುತ್ತಾಗಿ 25 ದಿನವಾದರೂ ಇನ್ನೂ ಸುಧಾರಿಸಿಕೊಳ್ಳುತ್ತಿದ್ದೇನೆ
*2 ಬಾರಿ ಸೋಂಕಿಗೆ ತುತ್ತಾಗಿದ್ದ ವಿಷಯ ಬಹಿರಂಗಪಡಿಸಿದ ಸಿಜೆಐ

Omicron a silent killer Been 25 Days Still Suffering Chief Justice Of India NV Ramana mnj

ನವದೆಹಲಿ  (ಫೆ. 24) : ಕೋವಿಡ್‌ ಸೋಂಕಿನ (Covid 19) ಇತರೆ ತಳಿಗಳಿಗೆ ಹೋಲಿಸಿದರೆ ಒಮಿಕ್ರೋನ್‌ ರೂಪಾಂತರಿ (Omicron Variant) ಸೈಲೆಂಟ್‌ ಕಿಲ್ಲರ್‌ ಇದ್ದಂತೆ. ಇದಕ್ಕೆ ತುತ್ತಾದವರು ಚೇತರಿಸಿಕೊಳ್ಳಲು ಬಹಳ ಸಮಯ ಬೇಕು ಎಂದು ಸ್ವತಃ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ( CJI NV Ramana) ಹೇಳಿದ್ದಾರೆ. ಅಲ್ಲದೇ ತಾವು ಮೊದಲನೇ ಅಲೆಯಲ್ಲಿ ಒಮ್ಮೆ ಮತ್ತು ಇದೀಗ 3ನೇ ಅಲೆಯಲ್ಲಿ ಮತ್ತೊಮ್ಮೆ ಕೋವಿಡ್‌ಗೆ ಸೋಂಕಿಗೆ ತುತ್ತಾದ ವಿಷಯವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಗಳ ಭೌತಿಕ ವಿಚಾರಣೆಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸುವಂತೆ ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್‌ ಮುಖ್ಯಸ್ಥ ಹಿರಿಯ ವಕೀಲ ವಿಕಾಸ್‌ ಸಿಂಗ್‌ ನೇತೃತ್ವದ ನಿಯೋಗ ತಮ್ಮನ್ನು ಭೇಟಿ ಮಾಡಿದ ವೇಳೆ ಮಾತನಾಡಿದ ನ್ಯಾ. ಎನ್‌ವಿ.ರಮಣ, ‘ಒಮಿಕ್ರೋನ್‌ ಕೋವಿಡ್‌ ರೂಪಾಂತರಿ ಸೈಲೆಂಟ್‌ ಕಿಲ್ಲರ್‌. ಕಳೆದ ತಿಂಗಳಲ್ಲಿ ಸೋಂಕಿಗೆ ತುತ್ತಾಗಿದ್ದ ನಾನು ಈಗಲೇ ನೋವು ತಿನ್ನುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿCovid Vaccine: ರಾಜ್ಯದಲ್ಲಿ 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು!

‘ಮೊದಲ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾದಾಗ ನಾಲ್ಕೇ ದಿನದಲ್ಲಿ ಗುಣಮುಖನಾಗಿದ್ದೆ. ಆದರೆ ಮೂರನೇ ಅಲೆಯಲ್ಲಿ ಒಮಿಕ್ರೋನ್‌ ಸೋಂಕಿಗೆ ತುತ್ತಾಗಿ ಇದೀಗ 25 ದಿನ ಕಳೆದಿವೆ. ಇನ್ನೂ ನೋವು ಅನುಭವಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ವಿಚಾರಣೆ ನಡೆಯುತ್ತಿದೆ. ಅಂದರೆ ವಾರದಲ್ಲಿ ಎರಡು ದಿನ ಭೌತಿಕ ವಿಚಾರಣೆ, ಉಳಿದ ದಿನ ಆನ್‌ಲೈನ್‌ ಮೂಲಕ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್‌ ಮುಖ್ಯಸ್ಥ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು ಸುಪ್ರೀಂಕೋರ್ಟ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಜನವರಿಯಲ್ಲಿ ಸುಪ್ರೀಂಕೋರ್ಟಿನ 10 ಮಂದಿ ನ್ಯಾಯಾಧೀಶರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಇದನ್ನೂ ಓದಿ: Corona Crisis: ಕೋವಿಡ್‌ ಆಸ್ಪತ್ರೆಗಳಲ್ಲಿ ಇದೀಗ ಕೋವಿಡೇತರರಿಗೂ ಚಿಕಿತ್ಸೆ

15102 ಕೇಸು, 278 ಸಾವು: ಸಕ್ರಿಯ ಕೇಸು 1.64 ಲಕ್ಷಕ್ಕ ಇಳಿಕೆ: ದೇಶದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳು ಮತ್ತಷ್ಟುಕಡಿಮೆಯಾಗಿದ್ದು ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಯ ಅವಧಿಯಲ್ಲಿ 15,102 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 278 ಸೋಂಕಿತರು ಸಾವಿಗೀಡಾಗಿದ್ದಾರೆ. 

ಸತತ 17 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕಿಂತಲೂ ಕಡಿಮೆ ದೈನಂದಿನ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದ್ದು, ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1.64 ಲಕ್ಷಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು 1.28 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು 1.80 ರಷ್ಟಿದೆ. ದೇಶದಲ್ಲಿ ಈವರೆಗೆ 176.83 ಕೋಟಿ ಡೋಸು ಲಸಿಕೆ ವಿತರಿಸಲಾಗಿದೆ.

667 ಮಂದಿಗೆ ಸೋಂಕು: ಈ ವರ್ಷದ ಕನಿಷ್ಠ: ಇನ್ನೂ ರಾಜ್ಯದಲ್ಲಿ ಈ ವರ್ಷದ ಅತ್ಯಂತ ಕಡಿಮೆ ಪ್ರಕರಣ ಬುಧವಾರ ದಾಖಲಾಗಿದೆ. 667 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 21 ಮಂದಿ ಮೃತರಾಗಿದ್ದಾರೆ. 1,674 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿಯೊಳಕ್ಕೆ ಬಂದಿದೆ. ಕಳೆದ ಮೂರು ದಿನಗಳಿಂದ ಸಾವಿರದೊಳಗೆ ದೈನಂದಿನ ಕೋವಿಡ್‌ ಪ್ರಕರಣ ವರದಿಯಾಗುತ್ತಿದೆ. 

ಈ ಮಧ್ಯೆ ಜನವರಿ ಒಂದರ ಬಳಿಕ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ. 1 ಕ್ಕಿಂತ ಕಡಿಮೆಯಾಗಿದೆ. 72,915 ಮಂದಿಯ ಕೋವಿಡ್‌ ಪರೀಕ್ಷೆ ಫಲಿತಾಂಶ ಬಂದಿದ್ದು ಶೇ. 0.91ರ ಪಾಸಿವಿಟಿವಿ ದಾಖಲಾಗಿದೆ.

Latest Videos
Follow Us:
Download App:
  • android
  • ios