Asianet Suvarna News Asianet Suvarna News

Corona Crisis: ಕೋವಿಡ್‌ ಆಸ್ಪತ್ರೆಗಳಲ್ಲಿ ಇದೀಗ ಕೋವಿಡೇತರರಿಗೂ ಚಿಕಿತ್ಸೆ

*   ಕೋವಿಡ್‌ ಕೇಸ್‌ಗಳ ಇಳಿಕೆ
*  ಅನ್ಯ ಕಾಯಿಲೆಗಳ ರೋಗಿಗಳ ಚಿಕಿತ್ಸೆಗೆ ಅನುಮತಿ
*  ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ
 

Non Covid Patients Can Treatment in Covid Hospitals in Bengaluru  grg
Author
Bengaluru, First Published Feb 22, 2022, 6:09 AM IST | Last Updated Feb 22, 2022, 6:15 AM IST

ಬೆಂಗಳೂರು(ಫೆ.23):  ರಾಜ್ಯದಲ್ಲಿ(Karnataka) ಕೋವಿಡ್‌ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೊರೋನಾ(Coronavirus)  ಸೋಂಕಿತರ ಚಿಕಿತ್ಸೆ ನೀಡಲು ನಿಗದಿ ಪಡಿಸಿದ್ದ ಆಸ್ಪತ್ರೆಗಳಲ್ಲಿ ಅನ್ಯ ಕಾಯಿಲೆಗಳ ರೋಗಿಗಳ ಚಿಕಿತ್ಸೆ ಸಂಪೂರ್ಣ ಅನುಮತಿ ನೀಡಿದೆ.

ಮೂರನೇ ಅಲೆ ಪ್ರಾರಂಭಗೊಳ್ಳುತ್ತಿದ್ದಂತೆ ಸರ್ಕಾರ ಕೆಲವು ಆಸ್ಪತ್ರೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನಿಗದಿಪಡಿಸಿ ಆದೇಶಿಸಿತ್ತು. ಅಲ್ಲಿ ಕೋವಿಡ್‌ ಅಲ್ಲದ ರೋಗಿಗಳು ಚಿಕಿತ್ಸೆ(Treatment) ಪಡೆಯುವುದನ್ನು ನಿರ್ಬಂಧಿಸಿತ್ತು. ಆದರೆ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿದ್ದಂತೆ ಕನಿಷ್ಠ ಪ್ರಮಾಣದ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ(Covid Patients) ಮೀಸಲಿರಿಸಿ ಉಳಿದ ಹಾಸಿಗೆಗಳನ್ನು ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಬಳಸಲು ಅವಕಾಶ ನೀಡಿತ್ತು. ಈಗ ಈ ನಿಯಮ ಸಡಿಲಿಸಲಾಗಿದೆ.

Covid 19 Crisis: ಕೊರೋನಾ ನಿರ್ಬಂಧ ತೆರವು ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ!

ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಸಿ.ವಿ.ರಾಮನ್‌ ಜನರಲ್‌ ಜನರಲ್‌ ಹಾಸ್ಪಿಟಲ್‌, ಅಟಲ್‌ ಬಿಹಾರಿ ವಾಜಪೇಯಿ ಮೆಡಿಕಲ್‌ ಕಾಲೇಜ್‌ ಮತ್ತು ಸಂಶೋಧನಾ ಸಂಸ್ಥೆ (ಬೌರಿಂಗ್‌ ಮತ್ತು ಘೋಷಾ ಆಸ್ಪತ್ರೆ) ಮತ್ತು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಇನ್ನು ಮುಂದೆ ಕೋವಿಡ್‌ ಮತ್ತು ಕೋವಿಡೇತರ ರೋಗಿಗಳಿಗೂ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆ(Department of Health) ಸುತ್ತೋಲೆ ಹೊರಡಿಸಿದೆ.

ಕೊರೋನಾ ಎಲ್ಲ ನಿಯಮಗಳಿಗೆ ಗುಡ್ ಬೈ ಹೇಳಿದ ಇಂಗ್ಲೆಂಡ್

ಲಂಡನ್‌: ಕೋವಿಡ್‌ ಜೊತೆಗೆ ಬದುಕು ಸಾಗಿಸಲು ಹೊಸ ನಿಯಮ ರೂಪಿಸಿರುವ ಬ್ರಿಟನ್‌ (England) ಸರ್ಕಾರ, ಇನ್ಮುಂದೆ ಕೋವಿಡ್‌ ಸೋಂಕಿತರು ಸ್ವಯಂ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯ ಅಲ್ಲ, ಗುರುವಾರದಿಂದಲೇ ಈ ನಿಮಯ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಹಾಗೆಯೇ ಏಪ್ರಿಲ್‌ನಿಂದ ಸಾಮೂಹಿಕ ಕೊರೋನಾ ಪರೀಕ್ಷೆಯನ್ನೂ ನಿಲ್ಲಿಸುವುದಾಗಿ ಘೋಷಿಸಿದೆ.

ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ(Boris Johnson) ಬೋರಿಸ್‌ ಜಾನ್ಸನ್‌, 2020ರಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆಂದು ಜಾರಿಗೆ ತರಲಾಗಿರುವ ಎಲ್ಲಾ ತಾತ್ಕಾಲಿಕ ಕಾನೂನುಗಳು ಮುಂದಿನ ತಿಂಗಳಿನಿಂದ ಅಸ್ತಿತ್ವದಲ್ಲಿ ಇರುವುದಿಲ್ಲ. ದೇಶದ ಆರೋಗ್ಯ ಕಾರ‍್ಯತಂತ್ರವು ಈಗ ಲಸಿಕೆ ಮತ್ತು ಚಿಕಿತ್ಸೆಗಳ ಕಡೆಗೆ ಗಮನ ನೀಡಿದೆ. ಸಾಂಕ್ರಾಮಿಕ ರೋಗ ಅಂತ್ಯವಾಗದಿದ್ದರೂ ಒಮಿಕ್ರೋನ್‌ (Omicron) ರೂಪಾಂತರಿಯ ಉತ್ತುಂಗವನ್ನು ದಾಟಿದ್ದೇವೆ. ಸದ್ಯ ಬ್ರಿಟನ್‌ನಲ್ಲಿ ಕೊರೋನಾ ಕಾರಣದಿಂದ 10,000ಕ್ಕಿಂತ ಕಡಿಮೆ ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮತ್ತು ಸಾವು ಗಣನೀಯವಾಗಿ ತಗ್ಗಿದೆ ಎಂದು ಹೇಳಿದರು.

Covid 19 Crisis Bengaluru: ಕೋವಿಡ್‌ ನಿಯಮ ಗಾಳಿಗೆ: ನಿತ್ಯ ₹2ಲಕ್ಷ ದಂಡ ಸಂಗ್ರಹ!

ಇದೇ ವೇಳೆ ಯೋಜನೆಯ ಭಾಗವಾಗಿ ಏ.1ರ ವರೆಗೆ ಕೊರೋನಾ ಸೋಂಕಿತರು ಮನೆಯಲ್ಲಿಯೇ ಇರಲು ಸಲಹೆ ನೀಡಲಾಗುತ್ತದೆ. ಅನಂತರ ಸೋಂಕಿತರು ಮನೆಯಿಂದ ಹೊರಬಂದು ವೈಯಕ್ತಿಕ ಕೆಲಸ ಕಾರ‍್ಯಗಳನ್ನು ಮಾಡಬಹುದು. ಸೋಂಕಿತರ ಸಂಪರ್ಕ ಪತ್ತೆಯನ್ನೂ ಕೊನೆಗೊಳಿಸಲಾಗುತ್ತದೆ. ಕೋವಿಡ್‌ ನಿರ್ಬಂಧಗಳ ಪಾಲನೆ ಕಾನೂನು ಬದ್ಧವಾಗಿರದೆ, ಕೇವಲ ಸಲಹಾ ರೂಪದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.

ಬ್ರಿಟನ್‌ನಲ್ಲಿ ಈಗಾಗಲೇ 12 ಮತ್ತು ಅದಕ್ಕೆ ಮೇಲ್ಪಟ್ಟವಯಸ್ಸಿನ ಶೇ.85ರಷ್ಟುಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ.70ರಷ್ಟುಜನರು ಮೂರನೇ ಡೋಸ್‌ ಕೂಡಾ ಪಡೆದುಕೊಂಡಿದ್ದಾರೆ. ದೇಶದಲ್ಲಿ ಇದುವರೆಗೆ 1.8 ಕೋಟಿ ಜನರಿಗೆ ಸೋಂಕು ಬಂದಿದ್ದು, 34000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನಿತ್ಯ ಸರಾಸರಿ 35000ದ ಆಸುಪಾಸು ಕೇಸು ದಾಖಲಾಗುತ್ತಿದ್ದು, 100-150 ಜನರು ಸಾವನ್ನಪ್ಪುತ್ತಿದ್ದಾರೆ. ಕೊರೋನಾ ಸಂಪೂರ್ಣ ತೊಲಗಿಸಲು ಪ್ರತಿಯೊಬ್ಬರು ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು

Latest Videos
Follow Us:
Download App:
  • android
  • ios