ಭವಿಷ್ಯದಲ್ಲಿ ಓಲಾ ಸ್ಕೂಟರ್‌ಗೆ ಬೆಂಕಿ ಸಾಧ್ಯತೆ ಇದೆ, ಆದರೆ ವಿರಳ: ಕಂಪನಿ
* ದುರ್ಘಟನೆಗಳು ಸಂಭವಿಸುವುದು ಬಹಳ ಅಪರೂಪ ಎಂದ ಓಲಾ
* ಓಲಾ 1,400 ಇ-ಸ್ಕೂಟರ್‌ಗಳ ಸುರಕ್ಷತೆ ಪರೀಕ್ಷಿಸಿದ ಓಲಾ
* ಓಲಾ ಇ-ಸ್ಕೂಟರ್‌ಗಳಲ್ಲಿ ಕಂಡುಬರುವ ಪ್ರತಿ ಸಮಸ್ಯೆಯನ್ನು ಗುರುತಿಸಿ ಅದನ್ನು ಪರಿಹರಿಸಲು ಕಂಪನಿ ಬದ್ಧವಾಗಿದೆ
ನವದೆಹಲಿ(ಮೇ.11): ಭವಿಷ್ಯದಲ್ಲೂ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ತಗುಲುವ ಸಾಧ್ಯತೆಗಳಿವೆ. ಆದರೆ ಇಂತಹ ದುರ್ಘಟನೆಗಳು ಸಂಭವಿಸುವುದು ಬಹಳ ಅಪರೂಪ ಎಂದು ಓಲಾ ಕಂಪನಿ ಹೇಳಿದೆ.
ದೇಶಾದ್ಯಂತ ಇ-ಸ್ಕೂಟರ್‌ಗಳು ಬೆಂಕಿ ತಗುಲಿದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸರ್ಕಾರವು ತನಿಖೆಗೆ ಆದೇಶಿಸಿತ್ತು. ಇದರಿಂದಾಗಿ ಓಲಾ 1,400 ಇ-ಸ್ಕೂಟರ್‌ಗಳ ಸುರಕ್ಷತೆಯನ್ನು ಪರೀಕ್ಷಿಸಲು ಮಾರುಕಟ್ಟೆಯಿಂದ ಹಿಂಪಡೆದುಕೊಂಡಿತ್ತು.
ಈ ಹಿನ್ನೆಲೆ ಮಾತನಾಡಿದ ಓಲಾ ಸಿಇಒ ಭಾವೀಶ್ ಅರ್ಗವಾಲ್, ‘ಓಲಾ ಇ-ಸ್ಕೂಟರ್‌ಗಳಲ್ಲಿ ಕಂಡುಬರುವ ಪ್ರತಿ ಸಮಸ್ಯೆಯನ್ನು ಗುರುತಿಸಿ ಅದನ್ನು ಪರಿಹರಿಸಲು ಕಂಪನಿ ಬದ್ಧವಾಗಿದೆ. ಗ್ರಾಹಕರ ಸುರಕ್ಷತೆಗಾಗಿ ವಾಹನದ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಮುಂದೆ ಓಲಾ ಸ್ಕೂಟರ್ ಬೆಂಕಿಗೆ ತುತ್ತಾಗುವ ಸಾಧ್ಯತೆ ಬಹಳ ವಿರಳವಾಗಿದೆ. ಓಲಾದ 50,000 ಇ-ಸ್ಕೂಟರ್ ಬಳಕೆಯಾಗುತ್ತಿದ್ದು, ಅದರಲ್ಲಿ ಕೇವಲ ಒಂದು ವಾಹನಕ್ಕೆ ಮಾತ್ರ ಬೆಂಕಿ ತಗುಲಿದ ಘಟನೆ ವರದಿಯಾಗಿದೆ’ ಎಂದು ಹೇಳಿದ್ದಾರೆ.
ನ್ಯಾಯಸಮ್ಮತವಲ್ಲದ ವ್ಯಾಪಾರ: ಕ್ಯಾಬ್ ಕಂಪನಿಗಳಿಗೆ ಕೇಂದ್ರ ಎಚ್ಚರಿಕೆ
ಕ್ಯಾಬ್ ಕಂಪನಿಗಳು ತಮ್ಮ ವ್ಯವಸ್ಥೆಯನ್ನು ಸುಧಾರಿಸದಿದ್ದರೆ ಮತ್ತು ಗ್ರಾಹಕರ ದೂರುಗಳನ್ನು ಪರಿಹರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಓಲಾ, ಊಬರ್ ಸೇರಿದಂತೆ ಹಲವು ಕ್ಯಾಬ್ ಕಂಪನಿಗಳಿಗೆ ಸರ್ಕಾರ ಮಂಗಳವಾರ ಎಚ್ಚರಿಕೆ ನೀಡಿದೆ.
ಕ್ಯಾಬ್ ಕಂಪನಿಗಳು ನ್ಯಾಯಸಮ್ಮತವಲ್ಲದ ವ್ಯಾಪಾರ ನಡೆಸುತ್ತಿವೆ ಎಂದು ಗ್ರಾಹಕರಿಂದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ಕಂಪನಿಗಳ ಜೊತೆ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿತ್ತು. ‘ಕ್ಯಾಬ್ ಕಂಪನಿಗಳ ವಿರುದ್ಧ ಗ್ರಾಹಕರು ನೀಡುತ್ತಿರುವ ದೂರುಗಳು ಮತ್ತು ಅದರ ಅಂಕಿಅಂಶವನ್ನು ನಾವು ಅವರಿಗೆ ನೀಡಿದ್ದೇವೆ. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಗ್ರಾಹಕ ವ್ಯವಹಾರ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕ್ಯಾಬ್ ಕಂಪನಿಗಳು ಶೀಘ್ರವೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂದು ಕೇಂದ್ರೀಯ ಗ್ರಾಹಕ ರಕ್ಷಣಾ ವೇದಿಕೆಯ ಆಯುಕ್ತೆ ನಿಧಿ ಖಾರೆ ಹೇಳಿದ್ದಾರೆ. ಈ ಸಭೆಯಲ್ಲಿ ಓಲಾ, ಉಬರ್, ಮೇರು, ರಾರಯಪಿಡೋ ಮತ್ತು ಜುಗ್ನು ಸೇರಿದಂತೆ ಇತರ ಕ್ಯಾಬ್ ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.