ಖಾಕಿ ಬಣ್ಣದ ಪ್ಯಾಂಟು, ಕಮಲದ ಹೂ ಪ್ರಿಂಟ್ ಆಗಿರುವ ಶರ್ಟ್; ಹೊಸ ಸಂಸತ್ ಭವನದ ಅಧಿಕಾರಿಗೆ ಡ್ರೆಸ್ ಕೋಡ್!
ನೂತನ ಸಂಸತ್ ಭವನದ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಹೊಸ ವಸ್ತ್ರಸಂಹಿತೆಯನ್ನು ಪ್ರಕಟಿಸಿದೆ. ಸಿಬ್ಬಂದಿಗಳು ನೆಹರು ಜಾಕೆಟ್‌ನೊಂದಿಗೆ ಕಮಲದ ಹೂ ಪ್ರಿಂಟ್ ಆಗಿರುವ ಶರ್ಟ್‌ಅನ್ನು ಧರಿಸಲಿದ್ದಾರೆ. ಅದರೊಂದಿಗೆ ಖಾಕಿ ಬಣ್ಣದ ಪ್ಯಾಂಟು ಧರಿಸಲಿದ್ದಾರೆ. ಮಾರ್ಷಲ್‌ಗಳು ಮಣಿಪುರಿ ಟರ್ಬನ್‌ಅನ್ನು ಧರಿಸಲಿದ್ದಾರೆ ಎನ್ನಲಾಗಿದೆ.

ನವದೆಹಲಿ (ಸೆ.12): ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಮೊದಲ ದಿನದ ಕಲಾಪ ಹಳೇ ಸಂಸತ್ತಿನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಿಂದ ಹೊಸ ಸಂಸತ್ತಿನಲ್ಲಿ ಅಧಿವೇಶನಗಳು ಪ್ರಾರಂಭವಾಗಲಿದೆ. ಈ ನಡುವೆ ಸಂಸತ್ತಿನ ಸಿಬ್ಬಂದಿ ಹೊಸ ಡ್ರೆಸ್ ಕೋಡ್ ಧರಿಸಿ ನೂತನ ಸಂಸತ್ ಭವನಕ್ಕೆ ಹೋಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ನೆಹರು ಜಾಕೆಟ್, ಖಾಕಿ ಬಣ್ಣದ ಪ್ಯಾಂಟ್‌ಅನ್ನು ಅವರು ಉಡುಪಿನಲ್ಲಿ ಸೇರಿಸಲಾಗಿದೆ. ಅಧಿಕಾರಿಗಳು ಮುಚ್ಚಿದ ನೆಕ್ ಸೂಟ್‌ಗಳ ಬದಲಿಗೆ ಮೆಜೆಂಟಾ ಅಥವಾ ಗಾಢ ಗುಲಾಬಿ ನೆಹರೂ ಜಾಕೆಟ್‌ಗಳನ್ನು ಧರಿಸುತ್ತಾರೆ. ಅವರ ಶರ್ಟ್ ಕೂಡ ಗಾಢ ಗುಲಾಬಿ ಬಣ್ಣದಲ್ಲಿ ಇರಲಿದ್ದು, ಅದರ ಮೇಲೆ ಕಮಲದ ಹೂವಿನ ವಿನ್ಯಾಸ ಇರಲಿದೆ. ಇನ್ನು ಸಂಸತ್‌ನ ಮಾರ್ಷಲ್‌ಗಳು ಮಣಿಪುರಿ ಪೇಟ ಮತ್ತು ಭದ್ರತಾ ಸಿಬ್ಬಂದಿಗಳು ಸೇನೆಯ ರೀತಿಯ ಸಮವಸ್ತ್ರ ಧರಿಸಲಿದ್ದಾರೆ. ಈ ಸಮವಸ್ತ್ರವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ತಯಾರಿಸಿದೆ. ಉಭಯ ಸದನಗಳಲ್ಲಿನ ಮಾರ್ಷಲ್‌ಗಳ ಡ್ರೆಸ್ ಕೂಡ ಬದಲಾಯಿಸಲಾಗಿದೆ. ಈಗ ಅವರು ಮಣಿಪುರಿ ಪೇಟವನ್ನು ಧರಿಸಲಿದ್ದಾರೆ. ಇದಲ್ಲದೇ ಸಂಸತ್ ಭವನದ ಭದ್ರತಾ ಸಿಬ್ಬಂದಿಯ ಉಡುಗೆಯನ್ನೂ ಬದಲಾವಣೆ ಮಾಡಲಾಗಿದೆ. ಸಫಾರಿ ಸೂಟ್‌ಗಳ ಬದಲಿಗೆ ಭಾರತೀಯ ಸೇನೆಯಲ್ಲಿ ಬಳಸಲಾಗುವಂಥ ರೀತಿಯ ಉಡುಪನ್ನು ನೀಡಲಾಗುತ್ತದೆ.
ಐದು ದಿನಗಳ ವಿಶೇಷ ಅಧಿವೇಶನ: ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನವು ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದೆ ಮತ್ತು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಒಂದು ದಿನದ ನಂತರ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಈ ವರ್ಷದ ಮೇ 28 ರಂದು ಹೊಸ ಸಂಸತ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಆಗಸ್ಟ್ 31 ರಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಘೋಷಣೆ ಮಾಡಿದ್ದರು. ಪ್ರಸ್ತುತ ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ರಹಸ್ಯವಾಗಿಡಲಾಗಿದೆ.
ಪತ್ರ ಬರೆದಿದ್ದ ಸೋನಿಯಾ ಗಾಂಧಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ 12 ದಿನಗಳ ಮೊದಲು ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಇದರಲ್ಲಿ ಅವರು 9 ವಿಷಯಗಳನ್ನು ಪ್ರಸ್ತಾಪಿಸಿದರು.
ಹಣದುಬ್ಬರ, ಭಾರತ-ಚೀನಾ ಗಡಿ ವಿವಾದ ಮತ್ತು ಮಣಿಪುರದಂತಹ ಗಂಭೀರ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಅನ್ನೋದನ್ನ ಕಾಂಗ್ರೆಸ್ ಬಯಸುತ್ತದೆ ಎಂದು ಹೇಳಿದ್ದರು. ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 24 ಪಕ್ಷಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪತ್ರವನ್ನು ಕಳುಹಿಸಿದ್ದಾರೆ.
New Parliament Building Inauguration: ಪ್ರಧಾನಿ ಮೋದಿಯಿಂದ ರಾಜದಂಡ ಪ್ರತಿಷ್ಠಾಪನೆ; ಸಂಸತ್ ಭವನದಲ್ಲಿ ಸರ್ವಧರ್ಮ ಪ್ರಾರ್ಥನೆ
ಮತ್ತೊಂದೆಡೆ, ಕಳೆದ ಮಂಗಳವಾರ (ಸೆಪ್ಟೆಂಬರ್ 5) ಸಂಜೆ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಭಾರತದ ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಸಭೆ ನಡೆಸಿದರು. ಸೆ.18ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾರತ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿರುವ 28 ಪಕ್ಷಗಳ ಪೈಕಿ 24 ಪಕ್ಷಗಳು ಭಾಗವಹಿಸಲು ನಿರ್ಧರಿಸಲಾಗಿದೆ.
New Parliament Building: ಇಂದು ಹೊಸ ಸಂಸತ್ ಭವನ ಲೋಕಾರ್ಪಣೆ, ಕಾರ್ಯಕ್ರಮಗಳ ಕಂಪ್ಲೀಟ್ ಮಾಹಿತಿ