ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಮುಂದಿನ ಜನವರಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ತಿಳಿಸಿದೆ.

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಮುಂದಿನ ಜನವರಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ತಿಳಿಸಿದೆ. ಪ್ರಧಾನಿ ಮೋದಿಯವರಿಗೆ ಇತ್ತೀಚೆಗೆ ಪತ್ರ ಬರೆದು ಔಪಚಾರಿಕವಾಗಿ ಆಹ್ವಾನಿಸಲಾಗಿದೆ. ಸಮಾರಂಭಕ್ಕೆ ಜ.15 ರಿಂದ 24ರ ನಡುವಿನ ದಿನಾಂಕಗಳನ್ನು ನೀಡಲಾಗಿದ್ದು ಈ ಪೈಕಿ ಒಂದು ನಿಖರ ದಿನಾಂಕವನ್ನು ಪ್ರಧಾನಿಗಳೇ ನಿರ್ಧರಿಸಲಿದ್ದಾರೆ. ಅಲ್ಲದೇ ಈ ಸಮಾರಂಭಕ್ಕೆ ಸುಮಾರು 10,000 ಅತಿಥಿಗಳಿಗೆ ಮಂಡಳಿಯು ಆಮಂತ್ರಣ ನೀಡಲಿದೆ ಎಂದು ರಾಮ ಮಂದಿರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

2024ರ ಜನವರಿ ವೇಳೆಗೆ ಭಕ್ತರಿಗೆ ದೇವಾಲಯವನ್ನು ಮುಕ್ತಗೊಳಿಸಬೇಕಿರುವುದರಿಂದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 550 ಇದ್ದ ಕಾರ್ಮಿಕರು ಮತ್ತು ತಂತ್ರಜ್ಞರ ಸಂಖ್ಯೆಯನ್ನು 1,600ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಐತಿಹಾಸಿಕ ಸಮಾರಂಭದ ಸಿದ್ಧತೆಗಾಗಿ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 22 ಕೋಟಿ ರು. ಮೌಲ್ಯದ ಗಿಡಗಳು ಮತ್ತು ಹೂಬಿಡುವ ಮತ್ತು ಅಲಂಕಾರಿಕ ಸಸ್ಯಗಳನ್ನು ನಡೆಲಾಗಿದೆ. ಈ ರಾಮ ಪಥ, ಧರ್ಮ ಪಥ ಮತ್ತು ಭಕ್ತಿ ಪಥಗಳ ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ಉತ್ತರ ಪ್ರದೇಶದ ರಾಜ್ಯ ಅರಣ್ಯ ಇಲಾಖೆ ವಹಿಸಿಕೊಂಡಿದೆ.

ಅವಧಿಗೂ 3 ತಿಂಗಳು ಮೊದಲೇ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣ ಪೂರ್ಣ

Adhik Maas 2023: ದಶಕೋಟಿ ರಾಮಯಜ್ಞಕ್ಕೆ ಪೇಜಾವರ ಶ್ರೀ ಚಾಲನೆ; ಸಾವಿರಾರು ಮಕ್ಕಳಿಂದ ರಾಮಜಪ