ಬರೀ 1.5 ಲಕ್ಷ ರೂಪಾಯಿ ಮೊಬೈಲ್‌ಗಾಗಿ ಡ್ಯಾಮ್‌ನ 21 ಲಕ್ಷ ಲೀಟರ್‌ ನೀರು ಖಾಲಿ ಮಾಡಿಸಿದ ಅಧಿಕಾರಿ!

ಬಹುಶಃ ಅಧಿಕಾರದ ದರ್ಪ ಎಂದರೆ ಇದೇ ಇರಬೇಕು. ತನ್ನ 1.5 ಲಕ್ಷ ರೂಪಾಯಿಯ ಮೊಬೈಲ್‌ ಡ್ಯಾಮ್‌ನಲ್ಲಿ ಬಿತ್ತು ಎನ್ನುವ ಕಾರಣಕ್ಕೆ, ಫುಡ್‌ ಇನ್ಸ್‌ಪೆಕ್ಟರ್‌ ಸತತ ನಾಲ್ಕು ದಿನಗಳ ಕಾಲ ಡ್ಯಾಮ್‌ಗೆ ಪಂಪ್‌ ಹಾಕಿಸಿ ನೀರು ಖಾಲಿ ಮಾಡಿಸಿದ ಘಟನೆ ನಡೆದಿದೆ. 1500 ಎಕರೆ ಭೂಮಿಗೆ ಹೋಗಬೇಕಿದ್ದ ನೀರು ಅಧಿಕಾರಿಯ ದರ್ಪದಿಂದ ಪೋಲಾಗಿ ಹೋಗಿದೆ.

Officers Mobile Fell In The Paralkot Dam To Remove The Phone Lakhs Of Liters Pumped Out san

ರಾಯ್ಪುರ (ಮೇ.26): ಒಂದೆರಡಲ್ಲ ಬರೋಬ್ಬರಿ 21 ಲಕ್ಷ ಲೀಟರ್‌ ಡ್ಯಾಮ್‌ ನೀರು ಅಧಿಕಾರಿಯ ದರ್ಪ, ಅಹಂಕಾರದಿಂದಾಗಿ ಪೋಲಾಗಿ ಹೋಗಿದೆ. ಡ್ಯಾಮ್‌ನಲ್ಲಿ ಬಿದ್ದ ತನ್ನ 1.5 ಲಕ್ಷ ರೂಪಾಯಿಯ ಮೊಬೈಲ್‌ಅನ್ನು ಪತ್ತೆ ಮಾಡುವ ಸಲುವಾಗಿ ಇಡೀ ಡ್ಯಾಮ್‌ನ ನೀರನ್ನು ಪಂಪ್‌ ಹಾಕಿಸಿ ಖಾಲಿ ಮಾಡಿಸಿದ್ದ ಫುಡ್‌ ಇನ್ಸ್‌ಪೆಕ್ಟರ್‌ಅನ್ನು ಛತ್ತೀಸ್‌ಗಢ ರಾಜ್ಯದ ಕಂಕೆರ್ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ, ಶುಕ್ರವಾರ ಅಮಾನತು ಮಾಡಿದ್ದಾರೆ. ಒಟ್ಟಾರೆ. 1500 ಎಕರೆ ಭೂಮಿಗೆ ಹೋಗಬೇಕಿದ್ದ ನೀರು ಅಧಿಕಾರಿಯ ಅಹಂಕಾರದಿಂದಾಗಿ ಸುಮ್ಮನೆ ಪೋಲಾಗಿ ಹೋಗಿದೆ. ಇದು ಗಮನಕ್ಕೆ ಬಂದ ಬೆನ್ನಲ್ಲಿಯೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದು ಮಾತ್ರವಲ್ಲದೆ,  ಜಲ ಸಂಪನ್ಮೂಲ ಇಲಾಖೆಯ ಎಸ್‌ಡಿಓಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ. 24 ಗಂಟೆಯ ಒಳಗಾಗಿ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಈ ಘಟನೆ ನಡೆದಿದ್ದು ಮೇ 21 ರಂದು ಫುಟ್‌ ಇನ್ಸ್‌ಪೆಕ್ಟರ್‌ ರಾಜೇಶ್‌ ವಿಶ್ವಾಸ್‌ ತಮ್ಮ ಸ್ನೇಹಿತರ ಜೊತೆ ಪಾರಾಲ್ಕೋಟ್‌ಗೆ ಹೋಗಿದ್ದರು. ಪಾರ್ಟಿ ಮಾಡುವ ವೇಳೆ ಅವರ 1.5 ಲಕ್ಷ ರೂಪಾಯಿಯ ಮೊಬೈಲ್‌ ಡ್ಯಾಮ್‌ನ ನೀರಿನಲ್ಲಿ ಬಿದ್ದಿತ್ತು.

ಆ ರಾತ್ರಿಯಿಡೀ ಮೊಬೈಲ್‌ ಹುಡುಕಿದರೂ ಪ್ರಯೋಜನವಾಗಲಿಲ್ಲ. ಮರುದಿನ ಬೆಳಗ್ಗೆ ಗ್ರಾಮದಲ್ಲಿ ಈಜು ಬರುವ ವ್ಯಕ್ತಿಗಳು ಹಾಗೂ ಡೈವರ್‌ಗಳನ್ನು ಬಳಸಿಕೊಂಡು ಹುಡುಕುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಕೊನೆಯ ಮಾರ್ಗ ಎನ್ನುವಂತೆ ಇಡೀ ಡ್ಯಾಮ್‌ನ ನೀರನ್ನೇ ಅಧಿಕಾರಿ ಖಾಲಿ ಮಾಡಿದ್ದಾರೆ. ಮೋಟಾರ್‌ ಪಂಪ್‌ ಬಳಸಿ ಸತತ ನಾಲ್ಕು ದಿನ ಡ್ಯಾಮ್‌ನ ನೀರನ್ನು ಖಾಲಿ ಮಾಡಿದ್ದಾರೆ. ಅಂದಾಜು 1500 ಎಕರೆ ಭೂಮಿಗೆ ಆಧಾರವಾಗಬಲ್ಲ ನೀರು ಅಧಿಕಾರಿಯ ಮೊಂಡುತನಕ್ಕೆ ಸಂಪೂರ್ಣವಾಗಿ ಪೋಲಾಗಿತ್ತು. ಇಷ್ಟೆಲ್ಲಾ ಸಾಹಸ ಮಾಡಿದ ಬಳಿಕ ರಾಜೇಶ್‌ ಅವರಿಗೆ ಮೊಬೈಲ್ ಕೂಡ ಸಿಕ್ಕಿದೆ.

ಈ ಕುರಿತಾಗಿ ನೀರಾವರಿ ಇಲಾಖೆಗೆ ದೂರು ದಾಖಲಾದ ಬೆನ್ನಲ್ಲಿಯೇ ಸ್ಥಳಕ್ಕೆ ಧಾವಿಸಿದ ನೀರಾವರಿ ಇಲಾಖೆಯ ಅಧಿಕಾರಿ, ಡ್ಯಾಮ್‌ನಿಂದ ನೀರು ಹೊರತೆಗೆಯುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಆದರೆ, ಅವರು ಬಂದು ತಡೆಯುವ ವೇಳೆಗೆ ಡ್ಯಾಮ್‌ನಲ್ಲಿ ಕೇವಲ 6 ಅಡಿಗಳಷ್ಟು ನೀರು ಮಾತ್ರವೇ ಉಳಿದುಕೊಂಡಿತ್ತು. ಅಂದಾಜು 21 ಲಕ್ಷ ಲೀಟರ್‌ ನೀರನ್ನು ಡ್ಯಾಮ್‌ನಿಂದ ಹೊರಹಾಕಲಾಗಿತ್ತು. ನನಗೆ ಯಾವುದೇ ಮಾಹಿತಿ ನೀಡದೇ ನೀರನ್ನು ಖಾಲಿ ಮಾಡಲಾಗಿದೆ ಎಂದು ನೀರಾವರಿ ಇಲಾಖೆಯ ಎಸ್‌ಡಿಓ ಆರ್‌ಸಿ ಧೀವರ್‌ ತಿಳಿಸಿದ್ದಾರೆ.

70ರ ಹರೆಯದಲ್ಲಿ ಕಾಂಗ್ರೆಸ್ ನಾಯಕ ಸ್ಕೈ ಡೈವ್, ಆರೋಗ್ಯ ಸಚಿವರ ಸಾಹಸ ವಿಡಿಯೋ ವೈರಲ್!

ಮತ್ತೊಂದೆಡೆ, ಆಹಾರ ನಿರೀಕ್ಷಕ ರಾಜೇಶ್ ಬಿಸ್ವಾಸ್ ಫೋನ್‌ನಲ್ಲಿ ಇಲಾಖೆಯ ಅಗತ್ಯ ಮಾಹಿತಿಗಳು ಇದ್ದವು. ಆದ್ದರಿಂದ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ವಾದ ಮಾಡಿದ್ದಾರೆ. ಈಗ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಈ ನಡುವೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಾ.ರಮಣ್‌ ಸಿಂಗ್‌ ಕೂಡ ಭೂಪೇಶ್‌ ಬಾಗೆಲ್‌ ನೇತೃತ್ವದ ಛತ್ತೀಸ್‌ಗಢ ಸರ್ಕಾರದ ವಿರುದ್ಧ ಈ ವಿಚಾರವಾಗಿ ಟೀಕೆ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ, ಕಳೆದ ಸೋಮವಾರದಿಂದ ಈ ಕೆಲಸ ಆರಂಭವಾಗಿದೆ. ಗುರುವಾರದವರೆಗೂ ಇದು ನಡೆದಿದ್ದು ಗುರುವಾರವೇ ಅವರ ಮೊಬೈಲ್‌ ಪತ್ತೆಯಾಗಿದೆ. 30 ಎಚ್‌ಪಿ ಪಂಪ್‌ಗಳನ್ನು ನೀರು ಹೊರತೆಗೆಯಲು ಬಳಸಲಾಗಿತ್ತು.

ಛತ್ತೀಸ್‌ಗಢ: 2000 ಕೋಟಿ ರೂ. ಮದ್ಯ ಹಗರಣ ಪತ್ತೆಹಚ್ಚಿದ ಇಡಿ: 'ಕೈ' ನಾಯಕನ ಸೋದರ, ಐಎಎಸ್‌ ಅಧಿಕಾರಿ ಕೈವಾಡ

ವಾಸ್ತವವಾಗಿ ಕೊಯ್ಲಿಬೀಡ ಬ್ಲಾಕ್‌ನ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ರಜಾ ನಿಮಿತ್ತ ಸೋಮವಾರ ಪಾರಕೋಟ್ ಜಲಾಶಯಕ್ಕೆ ಆಗಮಿಸಿದ್ದರು. ಜಲಾಶಯದ ಸುತ್ತ ತಿರುಗಾಡುವ ಸಮಯದಲ್ಲಿ ಆಹಾರ ಅಧಿಕಾರಿಯ ದುಬಾರಿ ಮೊಬೈಲ್ ಫೋನ್ ಪಾರಕೋಟ್ ಜಲಾಶಯಕ್ಕೆ ಬಿದ್ದಿತು. ಈ ವೇಳೆ ಜಲಾಶಯದಲ್ಲಿ ನೀರು ತುಂಬಿ ತುಳುಕುತ್ತಿತ್ತು. ಮಾಹಿತಿ ಪ್ರಕಾರ ಜಲಾಶಯದಲ್ಲಿ 15 ಅಡಿಯಷ್ಟು ನೀರು ಇತ್ತು ಎನ್ನಲಾಗಿದೆ. ಮೊಬೈಲ್ ಬಿದ್ದ ನಂತರ ಅಧಿಕಾರಿ ಫೋನ್ ಹುಡುಕಿಕೊಂಡುವಂತೆ ಗ್ರಾಮದ ಜನರಿಗೆ ಆದೇಶ ನೀಡಿದ್ದುರ. ಮೊದಲಿಗೆ ಡೈವರ್‌ಗಳು ಹುಡುಕಾಡಿದರೂ ಮೊಬೈಲ್ ಪತ್ತೆಯಾಗಿರಲಿಲ್ಲ. ಇದರ ನಂತರ, ಜಲಾಶಯದ ನೀರನ್ನು ಖಾಲಿ ಮಾಡಲು ಹೆಚ್ಚಿನ ಶಕ್ತಿ ಪಂಪ್ಗಳನ್ನು ಕರೆಯಲಾಯಿತು. ಮೂರು ದಿನಗಳ ಕಾಲ 30 ಎಚ್‌ಪಿ ಪಂಪ್‌ನಿಂದ ಜಲಾಶಯದ ನೀರನ್ನು ಹೊರಹಾಕಲಾಯಿತು ಮತ್ತು ಅಂತಿಮವಾಗಿ ಅಧಿಕಾರಿಯ ಮೊಬೈಲ್ ಫೋನ್ ಸಿಕ್ಕಿತ್ತು.

Latest Videos
Follow Us:
Download App:
  • android
  • ios