ಭುವನೇಶ್ವರ(ಜೂ.  04) ಕೊರೋನಾ ಹೋರಾಟದ ನಡುವೆ ಇಲ್ಲಿ ಒಂದು ಏರ್ ಲಿಫ್ಟ್ ಸ್ಟೋರಿ ಇದೆ. ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದ ಸಹೋದರ ಅಮೃತ್ ಪ್ರಧಾನ್ ಅವರನ್ನು ಚೆನ್ನೈ ಅಪೊಲೋ ಆಸ್ಪತ್ರೆಗೆ ಸ್ಥಳಾಂತರಿಸಲು ಏರ್ ಲಿಫ್ಟ್ ತಂಡವು ಗುರುವಾರ ಮಧ್ಯಾಹ್ನ ಭುವನೇಶ್ವರದ ಏಮ್ಸ್ ಬಳಿ ಬಂದಾಗ ಸಹೋದರೊ ಮನೀಷಾ ಪ್ರಧಾನ್ ಮುಖದಲ್ಲಿ ಭರವಸೆಯಕ ಕಿರಣ.

ನಾಲ್ಕು ಸದಸ್ಯರ ತಂಡವು ಕೊರೋನಾ ವಿರುದ್ಧ ಹೋರಾಡುತ್ತಿದ್ದ 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್  ಅಮೃತ್ ಪ್ರಧಾನ್ ಅವರನ್ನು ಚೆನ್ನೈಗೆ ಕರೆದುಕೊಂಡು ಹೋಗುವುದರಲ್ಲಿತ್ತು. ಬಿಜು ಪಟ್ನಾಯಕ್‌ ವಿಮಾನ ನಿಲ್ದಾಣದಲ್ಲಿ  ಆಂಬುಲೆನ್ಸ್ ಮಾದರಿಯ ಏರ್ ನಸ್ ಸಿದ್ಧವಾಗಿತ್ತು.

ಗುರುವಾರ ಸಂಜೆ 5 ಗಂಟೆಗೆ ಅಮೃತ್ ಅವರನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಲಾಯಿತು. ವಿಮಾನ  ನಿಲ್ದಾಣಕ್ಕೆ ತೆರಳಲು ಓರಿಸ್ಸಾ ಸರ್ಕಾರ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟಿತ್ತು.  ಆಂಬ್ಯುಲೆನ್ಸ್ 12 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ತಲುಪಿತು.  ಅಲ್ಲಿಂದ ಅವರನ್ನು ಚೆನ್ನೈಗೆ ವಿಮಾನದಲ್ಲಿ ಕರೆದೊಯ್ಯಲಾಯಿತು.  

ಮೊದಲ ಸಾರಿಗೆ ಭಾರತದಲ್ಲಿ ಕೋವಿಡ್ ರೋಗಿ ಏರ್ ಲಿಫ್ಟ್

ಗ್ರೀನ್ ಕಾರಿಡಾರ್ ಒದಗಿಸಿದ್ದಕ್ಕಾಗಿ ಪೊಲೀಸ್ ಆಯುಕ್ತರಿಗೆ ಧನ್ಯವಾದಗಳು. ನನ್ನ ಸಹೋದರನನ್ನು ಅತ್ಯುತ್ತಮ ಚಿಕಿತ್ಸೆಗಾಗಿ ಚೆನ್ನೈಗೆ ಸ್ಥಳಾಂತರಿಸಲಾಗಿದೆ. ಕೋವಿಡ್‌ನಿಂದಾಗಿ ಅವರ ಶ್ವಾಸಕೋಶಕ್ಕೆ ಘಾಸಿಯಾಗಿದೆ. ಎಂದು ಹೇಳಿದ ಮನೀಷಾ ತಮ್ಮ ಪತಿಯೊಂದಿಗೆ ಚೆನ್ನೈಗೆ ಬಂದಿಳಿದರು. 

ಗಂಜಾಂನ ಬೆರ್ಹಾಂಪುರ್ ಬಸುದೇವ್ ನಗರ ಮೂಲದ ಅಮೃತ್ ಅವರಿಗೆ ಮೇ 2 ರಂದು ಕೊರೋನಾ ಸೋಂಕು ದೃಢಪಟ್ಟಿತ್ತು ಶ್ವಾಸಕೋಶದ ಸಮಸ್ಯೆಯಿಂದ ಮೇ 12 ರಿಂದ ವೆಂಟಿಲೇಟರ್ ನಲ್ಲಿ ಇದ್ದಾರೆ.  ಪರಿಸ್ಥಿತಿ ಸುಧಾರಣೆ ಕಾಣದ ಕಾರಣ ಶ್ವಾಸಕೋಶ ಮಾಡಿಸಿ ಹೆಚ್ಚಿನ ಚಿಕಿತ್ಸೆ ನೀಡಿ ಎಂದು ಏಮ್ಸ್ ವೈದ್ಯರು ತಿಳಿಸಿದ್ದರು.

ಇಸಿಎಂಒ ಚಿಕಿತ್ಸೆ ಮತ್ತು ಶ್ವಾಸಕೋಶ ಕಸಿ ಮಾಡುವಿಕೆಯು 1.5 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿದ ಕುಟುಂಬ ಕಣ್ಣೀರೊಂದೆ ದಾರಿ ಎಂದುಕೊಂಡಿತ್ತು. ಇಸಿಎಂಒ  ಒಳಗೊಂಡ ಏರ್ ಆಂಬ್ಯುಲೆನ್ಸ್ ಶುಲ್ಕ ಸುಮಾರು 30 ಲಕ್ಷ ರೂ., ಚಿಕಿತ್ಸೆಗೆ ದಿನಕ್ಕೆ 2 ಲಕ್ಷ ರೂ. ಶ್ವಾಸಕೋಶ ಕಸಿ ವೆಚ್ಚವು 40 ಲಕ್ಷದಿಂದ 50 ಲಕ್ಷ ರೂ.  ತಗಲಿತ್ತದೆ ಎಂಬುದು ಗೊತ್ತಾಗಿ ಏನೂ ಮಾಡದ ಸ್ಥಿತಿಯಲ್ಲಿತ್ತು.

ಇಡೀ ನಮ್ಮ ಕುಟುಂಬ ಕೊರೋನಾಕ್ಕೆ ತುತ್ತಾಗಿ ಈಗಾಗಲೇ ಚಿಕಿತ್ಸೆಗೆಂದು ಲಕ್ಷಾಂತರ ರೂ. ವೆಚ್ಚ ಮಾಡಿಯಾಗಿತ್ತು.  ಫಂಡ್ ರೈಸ್ ಮಾಡುವಂತೆ, ನಾಗರಿಕರಿಂದ ನೆರವು ಪಡೆದುಕೊಳ್ಳುವಂತೆ  ಕೆಲ ಸ್ನೇಹಿಒತರು ಈ ಸಂದರ್ಭ ಸಲಹೆ ನೀಡಿದರು. 

ನಾವು ಜನರ ಬಳಿ ನೆರವು ಯಾಚಿಸಿದೆವು. 5688 ಜನರ ಬೆಂಬಲದೊಂದಿಗೆ 63 ಲಕ್ಷ ರೂ. ಸಂಗ್ರಹವಾಯಿತು.  ಮಿಲಾಪ್ ಆಪ್ ಮೂಲಕ ಎಲ್ಲ ನೆರವು ಹರಿದು ಬರಲಾರಂಭಿಸಿತು. ನಟ ಸೋನು ಸೂದ್, ಕ್ರಿಕೆಟಿಗ ಇರ್ಫಾನ್ ಪಠಾಣ್ ಬೆಂಬಲಕ್ಕೆ ನಿಂತರು.

ಒಂದು ವಾರದ ಹಿಂದೆ ಯಾವುದೇ ಭರವಸೆ ಇರಲಿಲ್ಲ. ಕ್ರೌಡ್‌ಫಂಡಿಂಗ್ ನಂತರ ಅವನಿಗೆ ಉತ್ತಮ ಚಿಕಿತ್ಸೆ ನೀಡುವ ಬಗ್ಗೆ ಯೋಚಿಸಿದೆವು.  ಅಪಾಯ ಇನ್ನೂ ಮುಗಿದಿಲ್ಲ. ಆದರೆ ದೇಶಾದ್ಯಂತ ಅಮೃತ್‌ಗೆ ದೊರೆತ ಬೆಂಬಲ ಮತ್ತು ಆಶೀರ್ವಾದಕ್ಕೆ ಧನ್ಯವಾದ ಹೇಳುತ್ತೇವೆ. ಗುಣಮುಖರಾಗುವವರೆಗೂ ನಾವು ಹೋರಾಡುತ್ತೇವೆ ಎಂದು ರೋಗಿಯ ಸೋದರ ಮಾವ ಚಿದಾನಂದ ತಾರೈ ಹೇಳುತ್ತಾರೆ.

ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಅಮೃತ್ ಬೆಂಗಳೂರು ಮೂಲದ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು.  ಯುಪಿಎಸ್‌  ಸಿದ್ಧತೆ ಕಾರಣಕ್ಕೆ ಕೊರೋನಾ ಸಂದರ್ಭದಲ್ಲಿಯೇ ಕೆಲಸ ತೊರೆದಿದ್ದರು.

ಅಮೃತ್ ಅವರ ತಾಯಿ ಶಾಲಾ ಶಿಕ್ಷಕಿ. ಅವರಿಗೆ ಕೊರೋನಾ ಸೋಂಕು ತಗಲುವವರೆಗೆ ಎಲ್ಲವೂ ಸರಿಯಾಗಿತ್ತು.  ಇದೀಗ ಅಮೃತ್ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ  ಚಿಕಿತ್ಸೆ ನೀಡಲಾಗುತ್ತಿದೆ. ಅವರು ಮೊದಲಿನಂತೆ ಆಗಲಿ ಎನ್ನುವುದು ಎಲ್ಲರ ಹಾರೈಕೆ..

"