ಯಾಸ್ ಚಂಡಮಾರುತ, ಯಾಕಪ್ಪಾ ಹೊರಗೆ ಬಂದೆ ಅಂತ ಕೇಳಿದ ರಿಪೋರ್ಟರ್..! ಈತ ಕೊಟ್ಟ ಆನ್ಸರ್ ವೈರಲ್

  • ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತ ಅಬ್ಬರ
  • ಯಾಕಪ್ಪಾ ಹೊರಗೆ ಬಂದೆ, ಮನೆಯೊಳಗಿರೋದಲ್ವಾ ಎಂದು ಕೇಳಿದ ರಿಪೋರ್ಟರ್‌ಗೆ ಸಿಕ್ಕ ಉತ್ತರ ವೈರಲ್
Odisha Reporter Asks Man Why He Stepped Out During Cyclone Yaas dpl

ಯಾಸ್ ಚಂಡಮಾರುತದ ಬಗ್ಗೆ ವರದಿ ಮಾಡುವಾಗ ರಿಪೋರ್ಟರ್ ಪ್ರಶ್ನೆ ಮತ್ತು ಅದಕ್ಕೆ ಬಂದ ಉತ್ತರ ಈಗ ಎಲ್ಲೆಡೆ ವೈರಲ್ ಆಗಿದೆ. ಒಡಿಶಾದಲ್ಲಿ ಯಾಸ್ ಚಂಡಮಾರುತದ ಮಧ್ಯೆ ವೈರಲ್ ಆಗ್ತಿರೋ ಈ ಫನ್ನಿ ವಿಡಿಯೋಗೆ ಜನ ಪ್ರತಿಕ್ರಿಯಿಸಿದ್ದಾರೆ.

ರಿಪೋರ್ಟರ್ ಮುಂದೆ ಸಿಕ್ಕ ವ್ಯಕ್ತಿಯೊಬ್ಬರು ಉತ್ತರಿಸಿದ ರೀತಿ, ಪ್ರಾಮಾಣಿಕತೆ ಈಗ ಸುದ್ದಿಯಾಗಿದೆ. ಅತ್ಯಂತ ತೀವ್ರವಾದ ಚಂಡಮಾರುತ ಯಾಸ್ ಕಾರಣದಿಂದಾಗಿ ಒಡಿಶಾದ ಕೆಲವು ಭಾಗಗಳಲ್ಲಿ ಭಾರೀ ಗಾಳಿ ಮತ್ತು ಭಾರಿ ಮಳೆಯಾಗುತ್ತಿದೆ. ಅಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ವರದಿಗಾರ ಜನರನ್ನು ಹೊರಗೆ ನೋಡಿ ಆಶ್ಚರ್ಯಚಕಿತರಾದರು.

ಲಸಿಕೆ ಬಗ್ಗೆ ವಿಪಕ್ಷಗಳಿಂದ ಸುಳ್ಳು: ಪ್ರತೀ ವದಂತಿಗೂ ಉತ್ತರಿಸಿದ ಕೇಂದ್ರ!..

ಒಬ್ಬ ವ್ಯಕ್ತಿಯನ್ನು ಚಂಡಮಾರುತದ ಮಧ್ಯೆ ಏಕೆ ಹೊರಗೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.  ವ್ಯಕ್ತಿ ಪ್ರತಿಕ್ರಿಯಿಸಿ ನೀವು ಹೊರಗಡೆ ಬಂದ ಕಾರಣ ನಾನೂ ಹೊರಗೆ ಬಂದಿದ್ದೇನೆ ಎಂದಿದ್ದಾರೆ. ನಾವು ನಿಮಗೆ ಸುದ್ದಿ ಕೊಡೋಕೆ ಹೊರಗೆ ಬಂದಿದ್ದಲ್ವಾ ಎಂದು ವರದಿಗಾರ ಪ್ರಶ್ನಿಸಿದಾಗ, ನಾವು ಹೊರಗೆ ಬರದಿದ್ದರೆ ನೀವ್ಯಾರನ್ನು ತೋರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಉತ್ತರ ಕೇಳಿ ವರದಿಗಾರ ನಿಜಕ್ಕೂ ಸುಸ್ತಾಗಿದ್ದಾನೆ.

ವಿಡಿಯೋ ಕ್ಲಿಪ್ ಅನ್ನು ನಿನ್ನೆ ಫೇಸ್‌ಬುಕ್‌ನಲ್ಲಿ ನಕ್ಸತ್ರಾ ನ್ಯೂಸ್ ಶೇರ್ ಮಾಡಿದ್ದು, ನಂತರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಹಂಚಿಕೊಂಡಿದ್ದಾರೆ.

ಅಂತಹ ಕರುಣೆಯುಳ್ಳ ವ್ಯಕ್ತಿ. ಮಾನವೀಯತೆಗಾಗಿ ತುಂಬಾ ಕೆಲಸ ಮಾಡುತ್ತಿದ್ದಾನೆ. ಗೌರವಿಸಿ ಎಂದು ಬರೆದು ಬೋತ್ರಾ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಕ್ಲಿಪ್ 6,000 ಕ್ಕೂ ಹೆಚ್ಚು 'ಲೈಕ್‌ಗಳು' ಮತ್ತು 76,000 ವೀಕ್ಷಣೆ ಪಡೆದಿದೆ. ನೆಟ್ಟಿಗರ ಕೆಲವು ಫನ್ನಿ ರಿಯಾಕ್ಷನ್ಸ್ ಹೀಗಿದೆ ನೋಡಿ

ಯಾಸ್ ಚಂಡಮಾರುತವು ನಿನ್ನೆ ಬೆಳಗ್ಗೆ 10.30 ರಿಂದ 11.30 ರ ನಡುವೆ ಬಾಲಸೋರ್‌ನಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿ ಉತ್ತರ ಒಡಿಶಾ ಕರಾವಳಿಯನ್ನು ದಾಟಿದೆ. ಗಂಟೆಗೆ 130-140 ಕಿ.ಮೀ ಗಾಳಿ ಮತ್ತು ಸಂಜೆ 5.30 ಕ್ಕೆ ಗಂಟೆಗೆ 150 ಕಿ.ಮೀ. ವೇಗದಲ್ಲಿ ಅದು ಬಾಲಸೋರ್‌ನಿಂದ ಪಶ್ಚಿಮ-ವಾಯುವ್ಯಕ್ಕೆ 55 ಕಿ.ಮೀ ದೂರದಲ್ಲಿರುವ ಈಶಾನ್ಯ ಒಡಿಶಾದ ಮೇಲೆ ಹಾದು ಹೋಗಿದೆ.

Latest Videos
Follow Us:
Download App:
  • android
  • ios